ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆಕೃತಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಪವನ್ ಕುಮಾರ್ ಕೇವಲ ನಟನೆಯಿಂದ ಮಾತ್ರವಲ್ಲ,ಫಿಟ್ನೆಸ್ನಿಂದಲೂ ಗಮನ ಸೆಳೆಯುತ್ತಿದ್ದಾರೆ. ಪ್ರತಿದಿನ ಪವನ್ ವರ್ಕೌಟ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲವಂತೆ.
ಪವನ್ ಈಗ ತಮ್ಮ ಫಿಟ್ನೆಸ್ ರಹಸ್ಯ ಯಾವುದೆಂದು ರಿವೀಲ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಹೊಸ ವರ್ಕೌಟ್ ವಿಡಿಯೋವೊಂದನ್ನು ಪವನ್ ಕುಮಾರ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಗೆಳೆಯರೊಂದಿಗೆ ಸೈಕ್ಲಿಂಗ್ ಮಾಡುತ್ತಿರುವ ಪವನ್ ಇದರೊಂದಿಗೆ ಸ್ಪೂರ್ತಿದಾಯಕ ನುಡಿಗಳನ್ನು ಬರೆದಿದ್ದಾರೆ. " ಸೈಕ್ಲಿಂಗ್ ಎನ್ನುವುದು ಕೇವಲ ದೈಹಿಕ ಸಾಮರ್ಥ್ಯಕ್ಕೆ ಮಾತ್ರ ಮೀಸಲಾಗಿಲ್ಲ. ಬದಲಿಗೆ ಇದು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ವಿಡಿಯೋವನ್ನು ಕನಕಪುರದ ಸುತ್ತಮುತ್ತ ಚಿತ್ರೀಕರಿಸಲಾಗಿದೆ" ಎಂದು ಪವನ್ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ನು ಫಿಟ್ನೆಸ್ ಎಂದರೆ ಜಿಮ್ಗೆ ಮಾತ್ರ ಹೋಗಬೇಕು ಎಂದೇನಿಲ್ಲ. ಜಿಮ್ಗೆ ಹೋದರೆ ಫಿಟ್ ಆಗಬಹುದು ಎಂಬ ಮನಸ್ಥಿತಿ ನಿಮ್ಮಲ್ಲಿದೆ ಅಷ್ಟೇ. ಆದರೆ ನೀವು ಮನಸ್ಸು ಮಾಡಿದರೆ ಜಿಮ್ಗೆ ಹೋಗದಿದ್ದರೂ ಫಿಟ್ ಆಗಿರುತ್ತೀರಿ ಎಂದು ಪವನ್ ಹೇಳಿದ್ದಾರೆ.