ETV Bharat / sitara

ಕರುಣೆಯಿಲ್ಲದ ವಿಧಿಗೆ ಬಲಿಯಾದ 'ಸಿದ್​ನಾಜ್' ಮಧುರ ಪ್ರೇಮ.. ಡಿಸೆಂಬರ್​ನಲ್ಲಿ ಸಪ್ತಪದಿ ತುಳಿಯಲು ಯೋಜಿಸಿದ್ದ ಜೋಡಿ!? - sidharth shukla shehnaaz gill relationshipw

ತಮ್ಮ ಸಂಬಂಧದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡದ ಸಿದ್ಧಾರ್ಥ್ ಮತ್ತು ಶೆಹ್ನಾಜ್ ಅವರನ್ನು ಜನಪ್ರಿಯವಾಗಿ ಸಿದ್​ನಾಜ್ ಎಂದು ಕರೆಯಲಾಗುತ್ತಿತ್ತು. ಈ ಪದವನ್ನು ಅವರ ಅಭಿಮಾನಿಗಳು ಬಿಗ್ ಬಾಸ್-13ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಯದಲ್ಲಿ ಬಳಸಿದರು..

ಶೆಹ್ನಾಜ್​ ಮತ್ತು ಸಿದ್ಧಾರ್ಥ
ಶೆಹ್ನಾಜ್​ ಮತ್ತು ಸಿದ್ಧಾರ್ಥ
author img

By

Published : Sep 4, 2021, 3:32 PM IST

ಟೆಲಿವಿಷನ್ ಸ್ಟಾರ್ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ನಿಧನದಿಂದ ಒಂದು ಮಧುರ ಪ್ರೇಮಕಥೆ ದುರಂತ ಅಂತ್ಯವಾಗಿದೆ. ಬಾಲಿಕಾ ವಧು ಖ್ಯಾತಿಯ ನಟ, ತನ್ನ ಬಿಗ್ ಬಾಸ್-13ರ ಸಹ ಸ್ಪರ್ಧಿ ಶೆಹ್ನಾಜ್ ಗಿಲ್ ಅವರನ್ನು ಪ್ರೀತಿಸುತ್ತಿದ್ದರು.

ವರದಿಗಳ ಪ್ರಕಾರ, ಶೆಹ್ನಾಜ್​ ಮತ್ತು ಸಿದ್ಧಾರ್ಥ ತಮ್ಮ ಪ್ರೇಮವನ್ನು ವಿವಾಹ ಸಂಬಂಧವಾಗಿಸುವ ಬಯಕೆ ಹೊಂದಿದ್ದರು. ಈ ಕುರಿತು ಇಬ್ಬರು ತಮ್ಮ ಮನೆಯವರ ಬಳಿಯೂ ಪ್ರಸ್ತಾಪ ಮಾಡಿದ್ದರು. ಇವರ ಮದುವೆ ಸಮಾರಂಭಕ್ಕಾಗಿ ಮುಂಬೈ ಹೋಟೆಲ್‌ ಒಂದರ ಜೊತೆ ಮಾತುಕತೆ ಸಹ ನಡೆಸುತ್ತಿದ್ದರಂತೆ. ಡಿಸೆಂಬರ್​ನಲ್ಲಿ ಮೂರು ದಿನಗಳ ಸಂಭ್ರಮದ ವಿವಾಹ ಮಹೋತ್ವವವನ್ನು ಯೋಜಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸಂಗೀತ ಸಂಯೋಜಕ ಅನು ಮಲಿಕ್ ಅವರ ಸಹೋದರ ಬಿಗ್ ಬಾಸ್-13 ಸ್ಪರ್ಧಿ ಅಬು ಮಲಿಕ್ ಸಿದ್ಧಾರ್ಥ್​ ಮತ್ತು ಶೆಹ್ನಾಜ್​ ಪ್ರೀತಿಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. "ಶೆಹ್ನಾಜ್ ಅವರ ನಡುವಿನ ಪ್ರೇಮ ಸಂಬಂಧದ ಬಗ್ಗೆ ಮಾರ್ಚ್ 22, 2020ರಂದು ನನಗೆ ಹೇಳಿದರು. ಇದು ಮೊದಲ ಲಾಕ್‌ಡೌನ್‌ಗೆ ಒಂದು ದಿನ ಮೊದಲು ಎಂದು ನಾನು ಭಾವಿಸುತ್ತೇನೆ. ಸಿದ್ಧಾರ್ಥ್ ಅವಳನ್ನು ತುಂಬಾ ಪ್ರೀತಿಸುತ್ತಿದ್ದನು. ಅವಳು ಬೇಸರಗೊಂಡರೆ ಅದು ಅವನ ಮೇಲೂ ಪರಿಣಾಮ ಬೀರುತ್ತಿತ್ತು" ಎಂದು ಕಳೆದುಹೋದ ದಿನಗಳನ್ನು ಮೆಲುಕು ಹಾಕಿದರು.

ಬಿಗ್​ ಬಾಸ್ ಮನೆಯಲ್ಲಿ ಆರಂಭವಾದ ಸುಂದರ ಸಂಬಂಧ ಇದೀಗ ನೋವಿನಲ್ಲಿ ಕೊನೆಗೊಂಡಿದೆ. ಶೆಹ್ನಾಜ್​ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸಿದ್ಧಾರ್ಥ್​ ಶವದ ಬಳಿ ನಿಂತು ಶೆಹ್ನಾಜ್​ ಆತನ ಹೆಸರು ಕೂಗುವ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಈ ವೇಳೆ ಆಕೆಯ ಸಹೋದರ ಶೆಹಬಾಜ್ ಸಹೋದರಿಯನ್ನು ಹಿಡಿದುಕೊಳ್ಳುತ್ತಿರುವ ದೃಶ್ಯ ಕಣ್ಣಾಲೆ ಸುರಿಸುವಂತಿದೆ.

ತಮ್ಮ ಸಂಬಂಧದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡದ ಸಿದ್ಧಾರ್ಥ್ ಮತ್ತು ಶೆಹ್ನಾಜ್ ಅವರನ್ನು ಜನಪ್ರಿಯವಾಗಿ ಸಿದ್​ನಾಜ್ ಎಂದು ಕರೆಯಲಾಗುತ್ತಿತ್ತು. ಈ ಪದವನ್ನು ಅವರ ಅಭಿಮಾನಿಗಳು ಬಿಗ್ ಬಾಸ್-13ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಯದಲ್ಲಿ ಬಳಸಿದರು.

ಕಿರುತರೆ ಹಾಗೂ ಚಲನಚಿತ್ರ ನಟ ಸಿದ್ಧಾರ್ಥ್ ಶುಕ್ಲಾ (40) ಹೃದಯಾಘಾತದಿಂದ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-13ರ ವಿಜೇತನಾಗಿರುವ ಶುಕ್ಲಾ ನಿಧನ ಅವರ ತಾಯಿ, ಸಹೋದರಿಯರು ಹಾಗೂ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ.

ಓದಿ: ನಟ, ಬಿಗ್​​ ಬಾಸ್​ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ..!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.