ETV Bharat / sitara

ಶೂಟಿಂಗ್ ಫೋಟೋ ಹಂಚಿಕೊಂಡ ಶರತ್ ಪದ್ಮನಾಭ್ ಹೇಳಿದ್ದೇನು? - ಕಿರುತೆರೆ ಧಾರವಾಹಿ ನಟ ಆದಿತ್ಯ

ಅಖಿಲಾಂಡೇಶ್ವರಿ ಕುಟುಂಬದ ಒಳಿತಿಗಾಗಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದಾಗ ದುಷ್ಕರ್ಮಿಗಳ ದಾಳಿಯಾಗುತ್ತದೆ. ಆಗ ಅಖಿಲಾಂಡೇಶ್ವರಿಯ ಹಿರಿಯ ಮಗ ಆದಿ ದುಷ್ಕರ್ಮಿಗಳ ವಿರುದ್ಧ ಹೋರಾಡುತ್ತಾನೆ. ಈ ಶೂಟಿಂಗ್​ನ ಫೋಟೋವನ್ನು ಆದಿತ್ಯ ( ಶರತ್ ಪದ್ಮನಾಭ್) ಹಂಚಿಕೊಂಡಿದ್ದಾರೆ.

Sharat Padmanabh
ಶರತ್ ಪದ್ಮನಾಭ್
author img

By

Published : Feb 3, 2021, 1:14 PM IST

ಕನ್ನಡ ಕಿರುತೆರೆಯಲ್ಲಿ ಆಕ್ಷನ್ ದೃಶ್ಯಗಳು ಕಾಣ ಸಿಗುವುದು ಅಪರೂಪ. ಆದರೆ ಜೀ ಕನ್ನಡದ ವೀಕ್ಷಕರಿಗೆ ಆ ಸುವರ್ಣಾಕಾಶ ದೊರಕಿದೆ. ಪಾರು ಧಾರಾವಾಹಿಯ ವೀಕ್ಷಕರಿಗೆ ಭರ್ಜರಿ ಫೈಟ್ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ದೊರಕಿದೆ.

ಅಖಿಲಾಂಡೇಶ್ವರಿ ಕುಟುಂಬದ ಒಳಿತಿಗಾಗಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದಾಗ ದುಷ್ಕರ್ಮಿಗಳ ದಾಳಿಯಾಗುತ್ತದೆ. ಆಗ ಅಖಿಲಾಂಡೇಶ್ವರಿಯ ಹಿರಿಯ ಮಗ ಆದಿ ದುಷ್ಕರ್ಮಿಗಳ ವಿರುದ್ಧ ಹೋರಾಡುತ್ತಾನೆ. ಈ ಶೂಟಿಂಗ್​ನ ಫೋಟೋವನ್ನು ಹಂಚಿಕೊಂಡಿರುವ ಶರತ್ ಎಡಿಟರ್ ಹಾಗೂ ಕೊರಿಯೋಗ್ರಾಫರ್​ಗೆ ಕ್ರೆಡಿಟ್ ನೀಡಿದ್ದಾರೆ."ನಮ್ಮನ್ನು ನೀವು ಪರದೆಯಲ್ಲಿ ಕಾಣುತ್ತೀರಿ, ಆದರೆ ಕ್ಯಾಮೆರಾದ ಹಿಂದೆ ಅಷ್ಟೇ ಶ್ರಮ ಅಡಗಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ಉತ್ತಮಾದ ಕೆಲಸದ ಹಿಂದಿರುವುದು ನಮ್ಮ ಡಿಒಪಿ ರಘು ಗ್ಯಾರಹಳ್ಳಿ, ಎಡಿಟರ್ ಭೈರೇಶಪ್ಪು ಹಾಗೂ ಇದು ನೈಜವಾಗಿ ಕಾಣುವಂತೆ ಮಾಡಿದ ಫೈಟರ್ಸ್ "ಎಂದು ಬರೆದುಕೊಂಡಿದ್ದಾರೆ.

Sharat Padmanabh
ಪಾರು ಧಾರವಾಹಿ ನಟ ಶರತ್ ಪದ್ಮನಾಭ್

ಅಖಿಲಾಂಡೇಶ್ವರಿ ಅವರ ಹಿರಿಯ ಮಗ ಆದಿತ್ಯನಾಗಿ ಶರತ್ ಕಾಣಿಸಿಕೊಂಡಿದ್ದಾರೆ. ಆದಿತ್ಯ ಗ್ರೂಪ್ ಆಫ್ ಕಂಪನೀಸ್​ ಮಾಲೀಕ ಆದಿ ಮನೆಯವರ ಒಳಿತಿಗಾಗಿ ತ್ಯಾಗಕ್ಕೂ ಸಿದ್ದ ಇರುತ್ತಾನೆ. ಜಸ್ಟ್ ಮಾತ್ ಮಾತಲ್ಲಿ ಧಾರಾವಾಹಿಯ ನಾಯಕರಾಗಿ ಕಿರುತೆರೆಗೆ ಕಾಲಿಟ್ಟ ಶರತ್ ಮುಂದೆ ಪುಟ್ಮಲ್ಲಿಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು. ನಟನೆಯ ಹೊರತಾಗಿ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿರುವ ಶರತ್ ಟೆಲಿವಿಷನ್ ಕ್ರಿಕೆಟ್ ಲೀಗ್ ನ ಭಾಗವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.