ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಸತ್ಯ', ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದೆ. ಈ ಧಾರಾವಾಹಿಯು ಎಲ್ಲಾ ವಯಸ್ಸಿನ ಪ್ರೇಕ್ಷಕ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ.
ಇದನ್ನೂ ಓದಿ: ಮತ್ತೆ ಸುದ್ದಿಯಾದ ವನಿತಾ...ಆದರೆ ಖಂಡಿತ ಮದುವೆ ವಿಚಾರಕ್ಕಲ್ಲ..!
'ಸತ್ಯ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಾಗರ್ ಬಿಳಿಗೌಡ ಹಾಗೂ ಗೌತಮಿ ಜಾಧವ್ ಪುಟ್ಟ ಅಭಿಮಾನಿಯೊಬ್ಬರನ್ನು ಸೀರಿಯಲ್ ಸೆಟ್ ನಲ್ಲಿ ಭೇಟಿ ಮಾಡಿದ್ದಾರೆ. ಈ ಕುರಿತು ಸಾಗರ್ ಬಿಳಿಗೌಡ ತಮ್ಮ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಹಂಚಿಕೊಂಡಿದ್ದಾರೆ." ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದು ಬಹಳ ಸಂತೋಷವಾಯ್ತು. ಮಕ್ಕಳು ಕೂಡಾ ಸತ್ಯ ಧಾರಾವಾಹಿಯೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅಂಬೆಗಾಲಿಡುವ ಮಕ್ಕಳು ಕೂಡಾ ಸತ್ಯ ಧಾರಾವಾಹಿಯ ಒಂದು ಸಂಚಿಕೆಯನ್ನು ಕೂಡಾ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಪೋಷಕರು ಹೇಳುತ್ತಾರೆ. ಈ ವಿಚಾರ ಕೇಳಿ ನನಗೂ ಆಶ್ಚರ್ಯವಾಗಿದೆ. ನಮ್ಮ ತಂಡ ಹಾಗೂ ನಮ್ಮ ನಿರ್ಮಾಪಕರಾದ ಸ್ವಪ್ನ ಕೃಷ್ಣ , ಕೃಷ್ಣ , ದೇವರಾಜ ಸುಬ್ಬಣ್ಣ ಹಾಗೂ ಜೀ ಕನ್ನಡದ ಸಿಬ್ಬಂದಿಗೆ ಧನ್ಯವಾಗಳು, ಸ್ನೇಹಿತರು, ಅಭಿಮಾನಿಗಳು ನಮ್ಮ ಧಾರಾವಾಹಿ ಮೇಲೆ ತೋರುತ್ತಿರುವ ಪ್ರೀತಿಗೆ ನಾನು ಚಿರಋಣಿ" ಎಂದು ಸಾಗರ್ ಬಿಳಿಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.