ETV Bharat / sitara

ಪುನೀತ್ ಫೋಟೋ ಎದುರು 'ಏಕ್ ಲವ್ ಯಾ' ಚಿತ್ರ ತಂಡದ ವರ್ತನೆಗೆ ಸಾ.ರಾ.ಗೋವಿಂದು ಖಂಡನೆ... ಕ್ಷಮೆಯಾಚಿಸಿದ ರಚಿತಾ, ರಕ್ಷಿತಾ - ಏಕ್ ಲವ್ ಯಾ

ಪುನೀತ್ ನಿಧನದಿಂದ ಎಲ್ಲರೂ ದುಃಖದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಭಾವಚಿತ್ರದ ಎದುರು ಚಿತ್ರರಂಗದ ಕೆಲವರ ಈ ರೀತಿಯ ವರ್ತನೆ ಖಂಡನೀಯ. ಇದರಿಂದ ಅಭಿಮಾನಿಗಳಲ್ಲಿ ಆಕ್ರೋಶ ಮೂಡುವುದು ಸಹಜ. ಕೂಡಲೇ ಏಕ್ ಲವ್ ಯಾ (Ek Love Ya) ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ಸಾ.ರಾ.ಗೋವಿಂದು (Sa ra Govindu) ಒತ್ತಾಯಿಸಿದ್ದಾರೆ.

Sa ra Govindu
ಸಾ.ರಾ.ಗೋವಿಂದು
author img

By

Published : Nov 13, 2021, 12:52 PM IST

Updated : Nov 13, 2021, 2:24 PM IST

ಬೆಂಗಳೂರು: ಪುನೀತ್ ಭಾವ ಚಿತ್ರದ ಮುಂದೆ ಶಾಂಪೇನ್ ಬಳಸಿದ ಏಕ್ ಲವ್ ಯಾ (Ek Love Ya) ಚಿತ್ರ ತಂಡದ ವರ್ತನೆ ಖಂಡನೀಯ ಎಂದು ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು (Sa ra Govindu) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್.ಟಿ.ನಗರದಲ್ಲಿ ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಏಕ್ ಲವ್ ಯಾ (Ek Love Ya) ಚಿತ್ರದ ಆಡಿಯೋ ರಿಲೀಸ್ ವೇಳೆ ಪುನೀತ್ ಫೋಟೊ ಮುಂದೆ ಶಾಂಪೇನ್ ಓಪನ್​​ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಚಿತ್ರರಂಗದವರೇ ಈ ರೀತಿ ಮಾಡಿದರೆ ಏನು? ಹೇಳಬೇಕು.

ಪುನೀತ್ ನಿಧನದಿಂದ ಎಲ್ಲರೂ ದುಃಖದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಭಾವಚಿತ್ರದ ಎದುರು ಚಿತ್ರರಂಗದ ಕೆಲವರ ಈ ರೀತಿಯ ವರ್ತನೆ ಖಂಡನೀಯ. ಇದರಿಂದ ಅಭಿಮಾನಿಗಳಲ್ಲಿ ಆಕ್ರೋಶ ಮೂಡುವುದು ಸಹಜ. ಕೂಡಲೇ ಏಕ್ ಲವ್ ಯಾ ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ಸಾ.ರಾ.ಗೋವಿಂದು (Sa ra Govindu) ಒತ್ತಾಯಿಸಿದ್ದಾರೆ.

ಸಾ.ರಾ ಗೋವಿಂದು ಒತ್ತಾಯಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತಾ ಮತ್ತು ರಚಿತಾ ರಾಮ್​ ಅಪ್ಪು ಅಭಿಮಾನಿಗಳಲ್ಲಿ ಕ್ಷಮೇ ಕೋರಿದ್ದಾರೆ. ‘ಏಕ್ ಲವ್ ಯಾ (Ek Love Ya) ಚಿತ್ರದ ಆಡಿಯೋ ರಿಲೀಸ್ ವೇಳೆ ಪುನೀತ್ ಫೋಟೊ ಮುಂದೆ ಶಾಂಪೇನ್ ಓಪನ್​​ ಮಾಡಿದ್ದು ಅಪ್ಪು ಅಭಿಮಾನಿಗಳಲ್ಲಿ ಅಸಮಧಾನ ಉಂಟಾಗಿದಲ್ಲಿ ನನ್ನ ಮತ್ತು ನನ್ನ ಚಿತ್ರತಂಡದಿಂದ ಕ್ಷಮೇಯಾಚಿಸುತ್ತೇವೆ ಎಂದು ರಕ್ಷಿತಾ ಮತ್ತು ರಚಿತಾ ರಾಮ್​ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಪುನೀತ್ ನಮನ ಕಾರ್ಯಕ್ರಮಕ್ಕೆ ರೂಪುರೇಷೆ:

ನ.16ರಂದು ಪುನೀತ್ ನಮನ ಕಾರ್ಯಕ್ರಮದ ಹಿನ್ನೆಲೆ ನಿರ್ಮಾಪಕ ಸಾ.ರಾ.ಗೋವಿಂದು (Sa ra Govindu) ಆರ್.ಟಿ.ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM Basavaraja Bommai) ಅವರನ್ನು ಭೇಟಿಯಾದರು. ಸಿಎಂ ಭೇಟಿಯಾಗಿ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು.‌

ಭೇಟಿ ಬಳಿಕ ಮಾತನಾಡಿದ ಸಾ.ರಾ.ಗೋವಿಂದು, ನ.16 ರಂದು ಪುನೀತ್ ನಮನ ಕಾರ್ಯಕ್ರಮ ಇದೆ. ಕಾರ್ಯಕ್ರಮದ ರೂಪುರೇಷೆ ಸಿಎಂಗೆ ತಿಳಿಸಲು ಬಂದಿದ್ದೆವು. ಸಾರ್ವಜನಿಕರಿಗೆ ಪುನೀತ್ ನಮನ ಕಾರ್ಯಕ್ರಮದಲ್ಲಿ ಅವಕಾಶ ಇಲ್ಲ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

ಮಾಧ್ಯಮಗಳಲ್ಲಿ ಪುನೀತ್ ನಮನ‌ ಲೈವ್ ಪ್ರಸಾರ ಆಗಲಿದೆ. ಸಾರ್ವಜನಿಕರು ಮಾಧ್ಯಮಗಳಲ್ಲಿ ವೀಕ್ಷಣೆ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಪುನೀತ್ ಫೋಟೋ ಮುಂದೆ ಶಾಂಪೇನ್​​​ ಬಾಟಲ್ ಓಪನ್..'ಏಕ್ ಲವ್ ಯಾ' ಚಿತ್ರತಂಡದಿಂದ ಪ್ರಮಾದ: ಅಭಿಮಾನಿಗಳ ಆಕ್ರೋಶ

Last Updated : Nov 13, 2021, 2:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.