ETV Bharat / sitara

India Earth 2021: ಏರ್ ಇಂಡಿಯಾದ ಗಗನಸಖಿ ಅಂಕಿತಾಗೆ ಮಿಸೆಸ್ ಇಂಡಿಯಾ ಅರ್ಥ್-2021 ಕಿರೀಟ - ದೆಹಲಿಯಲ್ಲಿ ಮಿಸೆಸ್ ಇಂಡಿಯಾ ಅರ್ಥ್-2021 ಸ್ಪರ್ಧೆ

ಏರ್‌ ಇಂಡಿಯಾದಲ್ಲಿ ಗಗನಸಖಿಯಾಗಿ ಕೆಲಸ ಮಾಡಿದ್ದ ಹರಿದ್ವಾರದ ರೂರ್ಕಿ ಮೂಲದ ಅಂಕಿತಾ ಶರ್ಮಾ 2021ನೇ ಸಾಲಿನ ಮಿಸೆಸ್‌ ಇಂಡಿಯಾ ಅರ್ಥ್‌ ಪ್ರಶಸ್ತಿ ಗೆದಿದ್ದಾರೆ. ಈ ಮೊದಲು ಅವರ 'ಮಿಸೆಸ್ ಬಾಡಿ ಬ್ಯೂಟಿಫುಲ್-2021' ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

roorkee ankita sharma became mrs india earth-2021
ಏರ್ ಇಂಡಿಯಾದ ಗಗನಸಖಿ ಅಂಕಿತಾಗೆ ಮಿಸೆಸ್ ಇಂಡಿಯಾ ಅರ್ಥ್-2021 ಕಿರೀಟ
author img

By

Published : Dec 23, 2021, 8:08 PM IST

ರೂರ್ಕಿ(ಉತ್ತರಾಖಂಡ್‌): ಹರಿದ್ವಾರದ ರೂರ್ಕಿಯ ಅಂಕಿತಾ ಶರ್ಮಾ ಅವರು ಮಿಸೆಸ್ ಇಂಡಿಯಾ ಅರ್ಥ್ 2021 ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ದೆಹಲಿಯ ದ್ವಾರಕಾ ಹೋಟೆಲ್‌ನಲ್ಲಿ ಆಯೋಜಿಸಲಾದ ಮಿಸೆಸ್ ಇಂಡಿಯಾ ಅರ್ಥ್-2021ಗೆ ಜಗತ್ತಿನಾದ್ಯಂತ ನೂರಾರು ಪ್ರತಿಭಾವಂತ ಯುವತಿಯರು ಭಾಗವಹಿಸಿದ್ದರು. ಪ್ರಶಸ್ತಿ ಗೆಲ್ಲಲು ಸ್ಪರ್ಧಿಗಳು ಹಲವಾರು ಸುತ್ತುಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಅಂತಿಮವಾಗಿ ಅಂಕಿತಾ ಶರ್ಮಾ ಈ ವರ್ಷದ ಮಿಸೆಸ್‌ ಇಂಡಿಯಾ ಅರ್ಥ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಆಡಿಷನ್‌ ವೇಳೆ ಯಾವ ಉದ್ಯೋಗಿ, ಅಧಿಕಾರಿ ಅಥವಾ ಜವಾಬ್ದಾರಿಯುತ ವ್ಯಕ್ತಿಗೆ ಹೆಚ್ಚಿನ ಸಂಬಳ ನೀಡಬೇಕು ಎಂಬ ಪ್ರಶ್ನೆಯನ್ನು ತೀರ್ಪುಗಾರರು ಅಂಕಿತಾರನ್ನು ಕೇಳಿದ್ದಾರೆ. ಈ ವೇಳೆ ತಾಯಿಗೆ ಅತ್ಯಧಿಕ ವೇತನ ಸಿಗಬೇಕು ಎಂದು ಹೇಳಿದ್ದಾರೆ. ಆಗ ತೀರ್ಪುಗಾರರು ಈಕೆಯ ಉತ್ತರಕ್ಕೆ ತೃಪ್ತಿಗೊಂಡು ಪ್ರಶಸ್ತಿ ಘೋಷಿಸಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಅಂಕಿತಾ ಶರ್ಮಾ, ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಾನು ಬಹಳಷ್ಟು ಶ್ರಮ ಪಟ್ಟಿದ್ದೇನೆ. ಇಂದಿನ ಯುಗದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಕಡಿಮೆ ಇಲ್ಲ. ನನ್ನ ಇಂದಿನ ಯಶಸ್ಸು ತಮ್ಮ ಕುಟುಂಬಕ್ಕೆ ಸಲ್ಲಬೇಕು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಅಂಕಿತಾ ದೆಹಲಿಯಲ್ಲಿ ಮಿಸೆಸ್ ಬಾಡಿ ಬ್ಯೂಟಿಫುಲ್-2021 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಂಕಿತಾ ಪ್ರಸ್ತುತ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ: ಅಭಿನಂದನೆ ಸಲ್ಲಿಸಿದ ಮಾಜಿ ವಿಶ್ವಸುಂದರಿಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.