ಹೈದರಾಬಾದ್: ಕಿರುತೆರೆಯ ಜನಪ್ರಿಯ ಶೋ ಕನ್ನಡದ ಕೋಟ್ಯಧಿಪತಿ ಮತ್ತೆ ಆರಂಭವಾಗಿದ್ದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ವಾರಾಂತ್ಯದಲ್ಲಿ ಟಿವಿ ಮೂಲಕ ಎಲ್ಲರ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ವಾರಾಂತ್ಯದ ಎಪಿಸೋಡ್ನಲ್ಲಿ ಹಾಟ್ಸೀಟ್ನಲ್ಲಿ ಕುಳಿತಿರುವ ಸ್ಪರ್ಧಿ ಕ್ರಿಕೆಟ್ ಅಭಿಮಾನಿ. ಪಕ್ಕಾ ಆರ್ಸಿಬಿ ಫ್ಯಾನ್ ಆಗಿರುವ ಇವರು ನಿರೂಪಕ ಪುನೀತ್ ರಾಜ್ಕುಮಾರ್ ಮುಂದೆ ತಮ್ಮ ನೆಚ್ಚಿನ ತಂಡದ ಮೇಲಿನ ಬದ್ಧತೆಯನ್ನು ಹೇಳಿಕೊಂಡಿದ್ದಾರೆ.
-
ಆರು ಸಲ ಸೋತ್ರೂ RCB ನೆ, ಅರವತ್ತು ಸಲ ಸೋತ್ರೂ RCB ನೇ! @RCBTweets
— Colors Kannada (@ColorsKannada) June 24, 2019 " class="align-text-top noRightClick twitterSection" data="
ಪ್ರೀತಿಗೆ ಸಾಕ್ಷಿಯಾದ ಕರ್ನಾಟಕದ ಕ್ರಿಕೆಟ್ ಪ್ರೇಮಿ, ನಿಮ್ಮ ಕನ್ನಡದ ಕೋಟ್ಯಧಿಪತಿಯಲ್ಲಿ 🏏
ಕನ್ನಡದ ಕೋಟ್ಯಧಿಪತಿ | ಶನಿ - ಭಾನು ರಾತ್ರಿ 8:00ಕ್ಕೆ#KKP #ColorsKannada #RCB @PuneethRajkumar pic.twitter.com/WjlxupWt5g
">ಆರು ಸಲ ಸೋತ್ರೂ RCB ನೆ, ಅರವತ್ತು ಸಲ ಸೋತ್ರೂ RCB ನೇ! @RCBTweets
— Colors Kannada (@ColorsKannada) June 24, 2019
ಪ್ರೀತಿಗೆ ಸಾಕ್ಷಿಯಾದ ಕರ್ನಾಟಕದ ಕ್ರಿಕೆಟ್ ಪ್ರೇಮಿ, ನಿಮ್ಮ ಕನ್ನಡದ ಕೋಟ್ಯಧಿಪತಿಯಲ್ಲಿ 🏏
ಕನ್ನಡದ ಕೋಟ್ಯಧಿಪತಿ | ಶನಿ - ಭಾನು ರಾತ್ರಿ 8:00ಕ್ಕೆ#KKP #ColorsKannada #RCB @PuneethRajkumar pic.twitter.com/WjlxupWt5gಆರು ಸಲ ಸೋತ್ರೂ RCB ನೆ, ಅರವತ್ತು ಸಲ ಸೋತ್ರೂ RCB ನೇ! @RCBTweets
— Colors Kannada (@ColorsKannada) June 24, 2019
ಪ್ರೀತಿಗೆ ಸಾಕ್ಷಿಯಾದ ಕರ್ನಾಟಕದ ಕ್ರಿಕೆಟ್ ಪ್ರೇಮಿ, ನಿಮ್ಮ ಕನ್ನಡದ ಕೋಟ್ಯಧಿಪತಿಯಲ್ಲಿ 🏏
ಕನ್ನಡದ ಕೋಟ್ಯಧಿಪತಿ | ಶನಿ - ಭಾನು ರಾತ್ರಿ 8:00ಕ್ಕೆ#KKP #ColorsKannada #RCB @PuneethRajkumar pic.twitter.com/WjlxupWt5g
ಐಪಿಎಲ್ನಲ್ಲಿ ನೀವು ಯಾವ ತಂಡಕ್ಕೆ ಬೆಂಬಲ ನೀಡುತ್ತೀರಾ? ಎನ್ನುವ ಪುನೀತ್ ರಾಜ್ಕುಮಾರ್ ಪ್ರಶ್ನೆಗೆ ಸ್ಪರ್ಧಿ ಆರ್ಸಿಬಿ ಎಂದು ಥಟ್ಟನೆ ಉತ್ತರಿಸುತ್ತಾರೆ. ಆ ವೇಳೆ ಆರು ಸಲ ಸೋತ್ರೂ ಆರ್ಸಿಬಿ ಎಂದು ಪುನೀತ್ ರಾಜ್ಕುಮಾರ್ ಎಂದಾಗ ಅರವತ್ತು ಸಲ ಸೋತರೂ ಆರ್ಸಿಬಿನೇ ಎಂದು ಆ ಸ್ಪರ್ಧಿ ಹೇಳಿ ನೆಚ್ಚಿನ ಟೀಮ್ ಮೇಲಿನ ವ್ಯಾಮೋಹವನ್ನು ತೋರಿಸಿದ್ದಾರೆ.
ಕೆ.ಎಲ್ ರಾಹುಲ್ ತಮ್ಮ ನೆಚ್ಚಿನ ಆಟಗಾರ ಎನ್ನುವ ಈ ಸ್ಪರ್ಧಿ ಸದ್ಯ ವಿಶ್ವಕಪ್ನಲ್ಲಿ ಆಡುತ್ತಿರುವ ಏಕೈಕ ಕನ್ನಡಿಗ ಎಂಬ ಕಾರಣವನ್ನು ನೀಡುತ್ತಾರೆ. ಕಳೆದೆರಡು ಆವೃತ್ತಿಗಳಲ್ಲಿ ವಿಶ್ವಕಪ್ನಲ್ಲಿ ಯಾವುದೇ ಕರ್ನಾಟಕದ ಆಟಗಾರರು ಕಾಣಿಸಿಕೊಂಡಿರಲಿಲ್ಲ, ಈ ಬಾರಿ ಕೆ.ಎಲ್ ರಾಹುಲ್ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ. ಈ ಎಪಿಸೋಡ್ ಇದೇ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.