ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್‌ಕುಮಾರ್, ಹಲವು ಹಾಡುಗಳನ್ನು ಹಾಡಿ ಅಲ್ಲಿದ್ದ ಎಲ್ಲರನ್ನೂ ರಂಜಿಸಿದ್ದರು. ಅಂದು ಹಾಡು ಹೇಳುತ್ತಾ ಎಂಜಾಯ್ ಮಾಡಿದ ಪುನೀತ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಟ್ಟುಹಬ್ಬದ ವೇಳೆ ಪವರ್ ಸ್ಟಾರ್ ಹಾಡು ಹೇಳುವ ಮೂಲಕ ಸಕತ್ ಎಂಜಾಯ್ ಮಾಡಿದ್ದರು. ಈ ವೇಳೆ ಸುಮಲತಾ, ಗಣೇಶ್, ಉಪೇಂದ್ರ ಸೇರಿದಂತೆ ಎಲ್ಲರೂ ಅವರ ಹಾಡುಗಾರಿಕೆಯನ್ನು ನೋಡಿ ನಕ್ಕು ನಲಿದಿದ್ದಾರೆ. ಜೊತೆಗೆ ಪುನೀತ್ ಜೊತೆಗೆ ಅವರು ಸಹ ದನಿಗೂಡಿಸಿದ್ದರು.
‘ಹೃದಯಗಳ ಬ್ರೇಕ್‌ಫೇಲು, ಆ್ಯಕ್ಸಿಡೆಂಟ್ ಆಗ್ಹೋಗಿದೆ..’ ಎಂಬ ಉಪೇಂದ್ರ ಅವರ 'A' ಚಿತ್ರದ ಹಾಡನ್ನೇ ಪುನೀತ್ ಹಾಡಿದ್ದರು. ಬಹುಶಃ ತಮಗೂ ಹೃದಯದ ಆ್ಯಕ್ಸಿಡೆಂಟ್ ಆಗುತ್ತದೆ ಎಂದು ನಟ ಆ ಕ್ಷಣ ಭಾವಿಸಿರಲಿಲ್ಲ. ತಮಾಷೆ ಮಾಡುತ್ತಾ ಹಾಡಿದ್ದ ಹಾಡಿನ ಸಾಲುಗಳೇ ಇಂದು ನಿಜವಾಗಿದೆ ಎಂದು ಅಭಿಮಾನಿಗಳು ಕಣ್ಣೀರಾಗುತ್ತಿದ್ದಾರೆ.