ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ದಿಶಾ ಆಗಿ ಅಭಿನಯಿಸಿದ್ದ ಚೆಲುವೆ ಶಾಂಭವಿ ತಾಯಿಯಾಗುವ ಸಂತಸದಲ್ಲಿದ್ದಾರೆ. ತಾವು ತಾಯಿಯಾಗುತ್ತಿರುವ ಸಂಭ್ರಮದ ವಿಚಾರವನ್ನು ಸ್ವತಃ ಶಾಂಭವಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯವಾದ ವಿಚಾರ ಎಂದರೆ ಶಾಂಭವಿ ಅವರಿಗೆ ಅವಳಿ ಮಕ್ಕಳಾಗಲಿದ್ದು ಆ ವಿಚಾರವನ್ನು ಅವರು 1+1= 4 ಎಂದು ಬರೆಯುವ ಮೂಲಕ ಕಿರುತೆರೆ ವೀಕ್ಷಕರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ತೆಲುಗು ರೀಮೇಕ್ ಸಿನಿಮಾದಲ್ಲಿ ನಾಯಕನಾಗಿ ಸೋನುಸೂದ್....?
1+1=4 ಹೇಗೆ ಆಗುತ್ತದೆ 3 ಅಲ್ವಾ ಅಂಥ ಕೆಲವರು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಂಭವಿ, ದೇವರ ಲೆಕ್ಕಾಚಾರ ಬೇರೇನೇ ಆಗಿದೆ. ಇದು ಡಬಲ್ ಧಮಾಕಾ ಎಂದು ಉತ್ತರಿಸುವ ಮೂಲಕ ಸಂತಸವನ್ನು ಹೊರಹಾಕಿದ್ದಾರೆ. ಎರಡು ಜೊತೆ ಪುಟ್ಟ ಮಕ್ಕಳ ಸಾಕ್ಸ್ ಗಳು ಹಾಗೂ ಪತಿಯ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿರುವ ಶಾಂಭವಿ ಅಮ್ಮ ಆಗಲಿದ್ದೇನೆ. ನಿಮ್ಮೆಲ್ಲರ ಹಾರೈಕೆ ಸದಾ ಕಾಲ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಿಗೂಢ ರಾತ್ರಿ ಧಾರಾವಾಹಿಯಲ್ಲಿ ಮಂದಾಕಿನಿ ಆಗಿ ನಟಿಸಿದ್ದ ಶಾಂಭವಿ, ಪಾರು ಧಾರಾವಾಹಿಯಲ್ಲಿ ದಿಶಾ ಎನ್ನುವ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿ ನಾಯಕಿಯ ಗೆಳತಿಯಾಗಿ ಶಾಂಭವಿ ಅಭಿನಯಿಸಿದ್ದಾರೆ.