'ಪಾರು' ಧಾರಾವಾಹಿಯಲ್ಲಿ ನಾಯಕಿ ಪಾರು ಮತ್ತು ವಿಲನ್ ಅನುಷ್ಕಾ ಆಗಿ ಅಭಿನಯಿಸುತ್ತಿರುವ ಮೋಕ್ಷಿತಾ ಪೈ ಹಾಗೂ ಮಾನ್ಸಿ ಜೋಷಿ ಶೂಟಿಗ್ನಿಂದ ಕೊಂಚ ಬ್ರೇಕ್ ಪಡೆದು ಗೋವಾದಲ್ಲಿ ಸಮಯ ಕಳೆದು ಬಂದಿದ್ದಾರೆ. ರೀಲ್ ಲೈಫ್ನಲ್ಲಿ ವೈರಿಗಳಾಗಿರುವ ಇವರು ರಿಯಲ್ ಲೈಫಿನಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ.
ಇದನ್ನೂ ಓದಿ: ಕಾಲೇಜು ದಿನಗಳಲ್ಲಿ ನಿಧಿ ಅಜ್ಜಿ ಮನೆಗೆ ಪಟಾಕಿ ಹಚ್ಚಿ ಭಯ ಹುಟ್ಟಿಸಿದ ಆ ನಟ ಯಾರು ಗೊತ್ತಾ...?
ಬ್ಯುಸಿ ಶೆಡ್ಯೂಲ್ ಮಧ್ಯೆ ಒಂದಷ್ಟು ಬಿಡುವು ಮಾಡಿಕೊಂಡ ಮಾನ್ಸಿ ಜೋಷಿ ಮತ್ತು ಮೋಕ್ಷಿತಾ ಪೈ ತಮ್ಮ ಇತರ ಸ್ನೇಹಿತೆಯರ ಜೊತೆ ಸೇರಿ ಗೋವಾದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. "ಎರಡು ವರ್ಷಗಳಿಂದ ಶೂಟಿಂಗ್ ಕಾರಣದಿಂದಾಗಿ ಹೊರಗೆಲ್ಲೂ ಹೋಗಲು ಸಾಧ್ಯವಾಗಿರಲಿಲ್ಲ. ಅದೇ ಕಾರಣದಿಂದ ಇದೀಗ ಬಿಡುವು ಮಾಡಿಕೊಂಡು ಗೋವಾಕ್ಕೆ ಹೋಗಿ ಬಂದೆವು. ತುಂಬಾ ಖುಷಿಯಾಯಿತು. ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆವು" ಎಂದು ಟ್ರಿಪ್ ಬಗ್ಗೆ ಹೇಳಿಕೊಂಡಿದ್ದಾರೆ ಮಾನ್ಸಿ ಜೋಷಿ. ಮೋಕ್ಷಿತಾ ಪೈ ಹಾಗೂ ಮಾನ್ಸಿ ಜೋಶಿ ಇಬ್ಬರ ಬಾಂಧವ್ಯ ಅನ್ಯೋನ್ಯವಾಗಿದ್ದು ಇತ್ತೀಚೆಗಷ್ಟೇ ಶೂಟಿಂಗ್ ನಡುವೆ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಕೂಡಾ ಹಂಚಿಕೊಂಡಿದ್ದರು. 'ಪಾರು' ಮೂಲಕ ನಟನಾಲೋಕಕ್ಕೆ ಕಾಲಿಟ್ಟ ಮೋಕ್ಷಿತಾ, ಈಗ ದುನಿಯಾ ವಿಜಯ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಿಳಿ ಹೆಂಡ್ತಿ, ರಾಧಾ ರಮಣ, ನಾಯಕಿ ಧಾರಾವಾಹಿಯಲ್ಲಿ ನಟಿಸಿರುವ ಮಾನ್ಸಿ ಜೋಷಿ ಸದ್ಯ ಪಾರುವಿನ ಅನುಷ್ಕಾ ಆಗಿ ಬ್ಯುಸಿಯಾಗಿದ್ದಾರೆ. ಇದರ ಹೊರತಾಗಿ ತೆಲುಗಿನ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.