ಲಾಕ್ಡೌನ್ ಸಡಿಲಿಕೆ ನಂತರ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ನಿಧಾನವಾಗಿ ಸುಧಾರಣೆ ಕಾಣುತ್ತಿದೆ. ಒಂದೊಂದೇ ಹೊಸ ಧಾರಾವಾಹಿಗಳು ಆರಂಭವಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಇತ್ತಿಚೆಗೆ 'ಹೂಮಳೆ' ಎಂಬ ಧಾರಾವಾಹಿ ಆರಂಭವಾಗಿತ್ತು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಆರಂಭವಾಗುತ್ತಿದೆ.
- " class="align-text-top noRightClick twitterSection" data="
">
'ಮನಸೆಲ್ಲಾ ನೀನೇ' ಎಂಬ ಧಾರಾವಾಹಿ ಇದೇ ತಿಂಗಳ ಕೊನೆಯಲ್ಲಿ ಪ್ರಸಾರ ಆರಂಭಿಸುತ್ತಿದೆ. ಈ ಧಾರಾವಾಹಿಯನ್ನು ಶ್ರುತಿ ನಾಯ್ಡು ನಿರ್ದೇಶಿಸುತ್ತಿದ್ದು ಧಾರಾವಾಹಿಯ ಪ್ರೋಮೋ ಕೂಡಾ ಪ್ರಸಾರವಾಗುತ್ತಿದೆ. ಕಿರುತೆರೆಪ್ರಿಯರೂ ಕೂಡಾ ಹೊಸ ಧಾರಾವಾಹಿಯನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ಕಥಾನಾಯಕಿ ರಾಗಾಳಿಗೆ ಮದುವೆ ತಯಾರಿ ನಡೆದಿದೆ. ಅದ್ಧೂರಿಯಾಗಿ ಮೆಹಂದಿಯೂ ನಡೆಯುತ್ತಿದೆ. ಇದರ ಮಧ್ಯೆ ಒಂದು ಮಗು ಬಂದು ರಾಗಾಳನ್ನು ಅಮ್ಮ ಎಂದು ಕರೆಯುವ ದೃಶ್ಯ ಪ್ರೋಮೋದಲ್ಲಿದೆ. ಈ ಮಗು ಯಾರು...? ನಿಜಕ್ಕೂ ಇದು ರಾಗಾಳಾ ಮಗುವಾ...? ಅಂದರೆ ನಾಯಕಿ ರಾಗಾಳಿಗೆ ಈ ಹಿಂದೆಯೇ ಮದುವೆಯಾಗಿತ್ತಾ..? ಎಂಬ ಕುತೂಹಲ ಪ್ರೋಮೋ ನೋಡಿದಾಗ ಸಹಜವಾಗಿ ಮೂಡುತ್ತದೆ. ಧಾರಾವಾಹಿ ಆರಂಭವಾದಾಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.
'ಲಕ್ಷ್ಮಿ ಬಾರಮ್ಮ' ಖ್ಯಾತಿಯ ರಶ್ಮಿ ಪ್ರಭಾಕರ್ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿ ತೆಲುಗಿನ 'ಪೌರ್ಣಮಿ' ಧಾರಾವಾಹಿಯಲ್ಲೂ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ''ಶ್ರುತಿ ನಾಯ್ಡು ಅವರಂತ ಖ್ಯಾತ ನಿರ್ದೇಶಕಿಯೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಅವರ ಪ್ರಾಜೆಕ್ಟ್ನಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ'' ಎಂದಿದ್ದಾರೆ ರಶ್ಮಿ. 'ಜೀವನದಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸುಜಿತ್ ಗೌಡ ಈ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸಲಿದ್ದಾರೆ.
ನವೆಂಬರ್ 30ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9-30ಕ್ಕೆ ಈ 'ಮನಸೆಲ್ಲಾ ನೀನೇ' ಧಾರಾವಾಹಿ ಪ್ರಸಾರಗೊಳ್ಳಲಿದೆ.