ಸೆಲಬ್ರಿಟಿಗಳು ಎಂದರೆ ಅವರ ಬಗ್ಗೆ ಗಾಸಿಪ್ ಇದ್ದೇ ಇರುತ್ತದೆ. ಅದರಲ್ಲೂ ಅವರು ಸಿನಿಮಾ ಹೊರತುಪಡಿಸಿ ಹೊರಗಡೆ ಒಟ್ಟಾಗಿ ಕಾಣಿಸಿಕೊಂಡರೆ ಮುಗಿಯಿತು, ಇಬ್ಬರ ನಡುವೆ ಏನೋ ಇದೆ ಎಂಬ ಅನುಮಾನ ಎಲ್ಲರನ್ನೂ ಕಾಡಲು ಆರಂಭಿಸುತ್ತದೆ.
ಸಿನಿಮಾ ನಟ, ನಟಿಯರಿಗೆ ಇದು ಮಾಮೂಲು. ಆದರೆ ಇದೀಗ ಕಿರುತೆರೆ ಕಲಾವಿದರೂ ಕೂಡಾ ಈ ಗಾಸಿಪ್ ಸುದ್ದಿಗಳಿಗೆ ಆಹಾರವಾಗುತ್ತಿದ್ದಾರೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಜೋಡಿಗಳಾಗಿ ನಟಿಸಿದ್ದ ಕವಿತಾ ಗೌಡ ಹಾಗೂ ಚಂದನ್ ಧಾರಾವಾಹಿಯಲ್ಲಿ ಎಷ್ಟು ಹೆಸರು ಮಾಡಿದ್ದರೋ, ನಿಜ ಜೀವನದಲ್ಲಿ ಕೂಡಾ ಇಬ್ಬರೂ ಸುದ್ದಿಯಾಗುತ್ತಿದ್ದಾರೆ. ಕವಿತಾ ಹುಟ್ಟುಹಬ್ಬದಂದು ಚಂದನ್, ಸ್ನೇಹಿತರೊಂದಿಗೆ ಕವಿತಾ ಮನೆಗೆ ಹೋಗಿ ಸರ್ಪೈಸ್ ಕೊಟ್ಟು ಗಿಫ್ಟ್ ನೀಡಿ ಬಂದಿದ್ದರು. ಇದೆಲ್ಲಾ ಫ್ರೆಂಡ್ಸ್ ನಡುವೆ ಮಾಮೂಲು ಬಿಡಿ. ಆದರೆ ಮತ್ತೆ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾದರು.
- " class="align-text-top noRightClick twitterSection" data="
">
ಲಾಕ್ ಡೌನ್ ಸಮಯದಲ್ಲಿ ಇಬ್ಬರೂ ವಿಡಿಯೋ ಕಾಲ್ ಮಾಡಿ ಅದರ ಸ್ಕ್ರೀನ್ ಶಾಟ್ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ನಂತರ ಸ್ನೇಹಿತರೊಂದಿಗೆ ಶಿವಗಂಗೆ ಬೆಟ್ಟಕ್ಕೆ ತೆರಳಿದ್ದರು. ಕೆಲವು ದಿನಗಳ ಹಿಂದಷ್ಟೇ ಕವಿತಾ ಗೌಡ ಚಂದನ್ರನ್ನು ಬೆಳ್ಳಂಬೆಳಗ್ಗೆ ಏರ್ಪೋರ್ಟ್ಗೆ ಡ್ರಾಪ್ ಮಾಡಿದ್ದರು. ಈ ವಿಚಾರವನ್ನು ಕೂಡಾ ಚಂದನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿ 'ಕ್ಯೂಟ್ ಡ್ರೈವರ್ಗೆ ಥ್ಯಾಂಕ್ಸ್' ಎಂದು ಹೇಳಿದ್ದರು.
ಇದೀಗ ಚಂದನ್ ಫೋಟೋಶೂಟ್ ಮಾಡಿಸಿದ್ದು ಇದರಲ್ಲಿ ಕವಿತಾ ಗೌಡ ಕೂಡಾ ಚಂದನ್ ಜೊತೆ ಪೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಚಂದನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು ಕವಿತಾ ಜೊತೆ ಮೊದಲ ಫೋಟೋಶೂಟ್ ಎಂದು ಬರೆದುಕೊಂಡಿದ್ದಾರೆ. ಇಷ್ಟೆಲ್ಲಾ ಇರುವ ಇವರು ಖಂಡಿತ ರಿಯಲ್ ಲೈಫ್ನಲ್ಲಿ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಈಗಾಗಲೇ ನಿರ್ಧರಿಸಿದ್ದಾರೆ. ಆದರೆ ಕವಿತಾ ಆಗಲೀ, ಚಂದನ್ ಆಗಲಿ ಈ ಬಗ್ಗೆ ತುಟಿ ಬಿಚ್ಚಿಲ್ಲ.