ETV Bharat / sitara

ರಷ್ಯಾದ ಯಾವುದೇ ವಿಷಯವಸ್ತುಗಳನ್ನು ಪ್ರಸಾರ ಮಾಡುವುದಿಲ್ಲ : ನೆಟ್ ಫ್ಲಿಕ್ಸ್

author img

By

Published : Mar 3, 2022, 1:59 PM IST

Russia-Ukraine War crisis..ನೆಟ್ ಫ್ಲಿಕ್ಸ್ ಇನ್ನು ರಷ್ಯಾದ ಯಾವುದೇ ವಿಷಯವಸ್ತುಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ. ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಖಂಡಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಅಲ್ಲದೆ ನೆಟ್ ಫ್ಲಿಕ್ಸ್ ರಷ್ಯಾದೊಂದಿಗೆ ಹೊಂದಿದ್ದ ಎಲ್ಲಾ ಭವಿಷ್ಯದ ಯೋಜನೆಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ನೆಟ್ ಫ್ಲಿಕ್ಸ್ ಜೊತೆಗೆ ಇತರೆ ಡಿಸ್ನೀ ಮತ್ತು ವಾರ್ನರ್ ಬ್ರೋಸ್ ರಷ್ಯಾದ ಚಿತ್ರಗಳನ್ನು ನಿರ್ಬಂಧಿಸಿರುವುದಾಗಿ ವರದಿಯಾಗಿದೆ.

netflix-pauses-all-its-future-projects-acquisitions-from-russia
ರಷ್ಯಾದ ಯಾವುದೇ ವಿಷಯವಸ್ತುಗಳನ್ನು ಪ್ರಸಾರ ಮಾಡುವುದಿಲ್ಲ : ನೆಟ್ ಫ್ಲಿಕ್ಸ್

ವಾಷಿಂಗ್ಟನ್ : ಸ್ಟ್ರೀಮಿಂಗ್ ದೈತ್ಯ ನೆಟ್ ಫ್ಲಿಕ್ಸ್ ಇನ್ಮುಂದೆ ರಷ್ಯಾದ ಯಾವುದೇ ವಿಷಯವಸ್ತುಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ. ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಖಂಡಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಅಲ್ಲದೆ ನೆಟ್ ಫ್ಲಿಕ್ಸ್ ರಷ್ಯಾದೊಂದಿಗೆ ಹೊಂದಿದ್ದ ಎಲ್ಲಾ ಭವಿಷ್ಯದ ಯೋಜನೆಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ನೆಟ್ ಫ್ಲಿಕ್ಸ್ ಹೊಂದಿದ್ದ ರಷ್ಯಾದ ನಾಲ್ಕು ಯೋಜನೆಗಳಲ್ಲಿ, ದಶಾ ಝುಕ್ ನಿರ್ದೇಶಿಸಿದ ಕ್ರೈಮ್ ಥ್ರಿಲ್ಲರ್ ಸರಣಿಯನ್ನು ಒಳಗೊಂಡ ಎಲ್ಲಾ ಯೋಜನೆಗಳನ್ನು ತಡೆಹಿಡಿದಿದೆ. ಕಳೆದ ವರ್ಷ ಅನ್ನಾ ಕೆ ಚಿತ್ರೀಕರಣದ ನಂತರ 1990 ಚಿತ್ರದ ಸರಣಿಯು ರಷ್ಯಾದಲ್ಲಿ ಚಿತ್ರೀಕರಣಗೊಂಡ ನೆಟ್‌ಫ್ಲಿಕ್ಸ್‌ನ ಎರಡನೇ ಮೂಲ ಸರಣಿಯ ಚಿತ್ರವಾಗಿದೆ.

ನೆಟ್ ಫ್ಲಿಕ್ಸ್ ಕಳೆದ ವರ್ಷವಷ್ಟೇ ರಷ್ಯಾದಲ್ಲಿ ಬಳಕೆಗೆ ತನ್ನನ್ನು ತಾನು ತೆರೆದುಕೊಂಡಿದ್ದು, ಒಂದು ಮಿಲಿಯನ್ ಬಳಕೆದಾರರನ್ನು ಹೊಂದುವ ನಂಬಿಕೆ ಇತ್ತು. ಆದರೆ ನಿರ್ಬಂಧ ಹೇರಿರುವುದು ದೊಡ್ಡ ಹೊಡೆತವನ್ನು ನೀಡಿದೆ. ನೆಟ್ ಫ್ಲಿಕ್ಸ್ ಜೊತೆಗೆ ಇತರೆ ಡಿಸ್ನೀ ಮತ್ತು ವಾರ್ನರ್ ಬ್ರೋಸ್ ರಷ್ಯಾದ ಚಿತ್ರಗಳ ಮೇಲೆ ನಿರ್ಬಂಧ ಹೇರಿರುವುದಾಗಿ ವರದಿಯಾಗಿದೆ.

ಜೊತೆಗೆ ರಷ್ಯಾವನ್ನು ಯಾವುದೇ ಪ್ರಮುಖ ಸಿನಿ ಉತ್ಸವ ಮತ್ತು ಅವಾರ್ಡ್ ಕಾರ್ಯಕ್ರಮಗಳಿಗೆ ಕರೆಯದಿರಲು ನಿರ್ಧರಿಸಲಾಗಿದೆ. ಪ್ರಮುಖ ಸಿನೆಮಾ ಉತ್ಸವಗಳಲ್ಲಿ ರಷ್ಯನ್ ಸಿನೆಮಾಗಳನ್ನು ಬಹಿಷ್ಕರಿಸಲು ಇತರೆ ದೇಶಗಳು ಸಹ ನಿರ್ಧರಿಸಿವೆ.

ಓದಿ :108ರ ಪೈಕಿ 102 ಕಡೆ ಟಿಎಂಸಿಗೆ ಜಯ: ಒಂದೇ ಒಂದು ಸ್ಥಾನ ಗೆಲ್ಲದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.