'ಯಶೋಧೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನೀತಾ ಅಶೋಕ್ ಇದೀಗ ಹಿರಿತೆರೆ ಮೇಲೂ ಸಹ ಕಮಾಲ್ ಮಾಡಲು ಮುಂದಾಗಿದ್ದಾರೆ.
![ನೀತಾ ಅಶೋಕ್](https://etvbharatimages.akamaized.net/etvbharat/prod-images/kn-bng-03-neetaashok-movie-photo-ka10018_10032021181821_1003f_1615380501_276.jpg)
ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟಿಸುವ ಮೂಲಕ ನೀತಾ ಅಶೋಕ್ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಅಪರ್ಣಾ ಬಲ್ಲಾಳ್ ಆಗಿ ನಟಿಸಲಿರುವ ನೀತಾ, ನಿರೂಪ್ ಭಂಡಾರಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
![ನೀತಾ ಅಶೋಕ್](https://etvbharatimages.akamaized.net/etvbharat/prod-images/kn-bng-03-neetaashok-movie-photo-ka10018_10032021181821_1003f_1615380501_82.jpg)
ಈ ಕುರಿತು ಸಂತಸ ಹಂಚಿಕೊಂಡಿರುವ ನೀತಾ ಅಶೋಕ್, 'ವಿಕ್ರಾಂತ್ ರೋಣ' ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನಗೆ ಬಿಗ್ ಓಪನಿಂಗ್ ಸಿಕ್ಕಿದ್ದು, ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ಮೊದಲ ಬಾರಿಗೆ ಬಹು ದೊಡ್ಡ ಪ್ರಾಜೆಕ್ಟ್ ಮೂಲಕ ಬೆಳ್ಳಿತೆರೆಯಲ್ಲಿ ನಟಿಸುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ ಎಂದಿದ್ದಾರೆ.
![ನೀತಾ ಅಶೋಕ್](https://etvbharatimages.akamaized.net/etvbharat/prod-images/kn-bng-03-neetaashok-movie-photo-ka10018_10032021181821_1003f_1615380501_94.jpg)
ಇನ್ನು ನೀತಾ ಅವರು 'ಯಶೋಧೆ' ಧಾರಾವಾಹಿಯ ನಂತರ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಸಹ ನಾಯಕಿ ನಂದಿನಿಯಾಗಿ ನಟಿಸಿ ಕಿರುತೆರೆಯಲ್ಲಿ ಹೆಸರು ಮಾಡಿದ್ದರು. ನಂತರ 'ನೀಲಾಂಬರಿ' ಧಾರಾವಾಹಿಯಲ್ಲಿ ನಟಿಸಿದ ಇವರು ಇದೀಗ ಹಿರಿತೆರೆಯಲ್ಲಿ ಮಿಂಚಲಿದ್ದಾರೆ.