ಎಲ್ಲರನ್ನೂ ತನ್ನತ್ತ ಸೆಳೆಯುವ ಕಲೆ ಕೆಲವರಿಗೆ ಮಾತ್ರ ಒಲಿಯುತ್ತದೆ ಎಂಬ ಮಾತಿದೆ. ಅದೇ ರೀತಿ ಶ್ರದ್ಧೆ, ಭಕ್ತಿಯಿಂದ ಕಲೆಯನ್ನು ಆರಾಧಿಸಿದರೆ ಖಂಡಿತ ಅದು ಯಾರಿಗಾದರೂ ಒಲಿಯುತ್ತದೆ ಎನ್ನಬಹುದು. ಅಭಿನವ್ ವಿಶ್ವನಾಥನ್ ಇದಕ್ಕೆ ಸಾಕ್ಷಿ.
![Nannarasi radhe fame Abhinav](https://etvbharatimages.akamaized.net/etvbharat/prod-images/kn-bng-02-abhinav-nannarasiraadhe-serial-photo-ka10018_22072020081556_2207f_1595385956_675.jpg)
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ 'ನನ್ನರಸಿ ರಾಧೆ'ಯಲ್ಲಿ ನಾಯಕ ಅಗಸ್ತ್ಯ ರಾಥೋಡ್ ಆಗಿ ನಟಿಸುತ್ತಿರುವ ಅಭಿನವ್ ವಿಶ್ವನಾಥನ್ ನಟನಾ ಲೋಕಕ್ಕೆ ಹೊಸಬರು. ವಿಶ್ವನಾಥನ್ ರಾಜಗೋಪಾಲನ್ , ಗೀತಾ ವಿಶ್ವನಾಥನ್ ದಂಪತಿಯ ಪ್ರೀತಿಯ ಮಗ ಇವರು. ಅಭಿನವ್ ಹುಟ್ಟಿ ಬೆಳೆದಿದ್ದೆಲ್ಲಾ ಮಹಾನಗರಿ ಬೆಂಗಳೂರಿನಲ್ಲಿ. ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ವಿದ್ಯಾಭ್ಯಾಸ ಪೂರೈಸಿದ ಅಭಿನವ್ ಆಯ್ದುಕೊಂಡಿದ್ದು ಮಾತ್ರ ನಟನಾ ಕ್ಷೇತ್ರವನ್ನು.
![Nannarasi radhe fame Abhinav](https://etvbharatimages.akamaized.net/etvbharat/prod-images/kn-bng-02-abhinav-nannarasiraadhe-serial-photo-ka10018_22072020081556_2207f_1595385956_195.jpg)
ಮಾಡೆಲಿಂಗ್ ಮೂಲಕ ಕರಿಯರ್ ಆರಂಭಿಸಿದ ಅಭಿನವ್, ಕೆಲವೊಂದು ಫ್ಯಾಷನ್ ಶೋಗಳಲ್ಲಿ ಹೆಜ್ಜೆ ಹಾಕಿದ್ದಾರೆ. ನಂತರ ನಟನಾ ಲೋಕ ಇವರನ್ನು ಸೆಳೆದಿದ್ದರಿಂದ ಕಿರುತೆರೆಯತ್ತ ವಾಲಿದರು. ಇದೀಗ ಅವರು ಕಿರುತೆರೆ ವೀಕ್ಷಕರ ಪ್ರೀತಿಯ ಅಗಸ್ತ್ಯ ರಾಥೋಡ್. 'ನನ್ನರಸಿ ರಾಧೆ' ಮೊದಲ ಧಾರಾವಾಹಿಯಲ್ಲೇ ಅವರು ನಾಯಕನಾಗಿ ನಟಿಸಿದ್ದು ಅವರ ಅದೃಷ್ಟ ಎನ್ನಬಹುದು. ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ಮಾತ್ರವಲ್ಲ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಅವಕಾಶ ದೊರೆತರೆ ಬೆಳ್ಳಿತೆರೆಯಲ್ಲೂ ಮಿಂಚುವ ಮಹಾದಾಸೆ ಹೊಂದಿರುವ ಅಭಿನವ್, ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
![Nannarasi radhe fame Abhinav](https://etvbharatimages.akamaized.net/etvbharat/prod-images/kn-bng-02-abhinav-nannarasiraadhe-serial-photo-ka10018_22072020081556_2207f_1595385956_606.jpg)