ಕರ್ನಾಟಕದಲ್ಲಿ ಪ್ರವಾಸಿ ತಾಣಕ್ಕೆ ಹೆಸರಾಗಿರುವ ಕೊಡಗು ತನ್ನ ಸೌಂದರ್ಯದಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಮಂದಿ ಈ ಸ್ಥಳಗಳಿಗೆ ಭೇಟಿ ನೀಡಿ ಇಲ್ಲಿನ ಸುಂದರ ಪ್ರಕೃತಿಯನ್ನು ಎಂಜಾಯ್ ಮಾಡಿಹೋಗುತ್ತಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: 'ಕಬ್ಜ' ಸಿನಿಮಾ ಸುದೀಪ್ ಒಪ್ಪಿದ್ದೇಕೆ ಗೊತ್ತಾ?
ಲಾಕ್ಡೌನ್ ತೆರವಾದ ನಂತರ ಪ್ರವಾಸಿಗರಿಗೆ ಮಡಿಕೇರಿಗೆ ತೆರಳಲು ಷರತ್ತುಗಳೇನೂ ಇಲ್ಲದ ಕಾರಣ ಜನರು ಕೊಡಗು ಹಾಗೂ ಸುತ್ತಮುತ್ತಲಿನ ಸುಂದರ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಸಿನಿಮಾ, ಧಾರಾವಾಹಿ ಸೆಲಬ್ರಿಟಿಗಳು ಕೂಡಾ ಕೊಡಗಿಗೆ ಟ್ರಿಪ್ ಹೋಗುತ್ತಿದ್ದಾರೆ. ಕಿರುತೆರೆ ನಟಿ, 'ಪಾರು' ಧಾರಾವಾಹಿಯ ಮೋಕ್ಷಿತಾ ಪೈ ಕೂಡಾ ತನ್ನ ಸ್ನೇಹಿತೆಯರೊಂದಿಗೆ ಕೊಡಗಿನ ಸುಂದರ ಪ್ರಕೃತಿ ಮಡಿಲಲ್ಲಿ ಕಾಲ ಕಳೆಯುತ್ತಿದ್ದಾರೆ. ಕೊಡಗಿನ ಸುಂದರ ತಾಣಗಳಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಮೋಕ್ಷಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೋಕ್ಷಿತಾ ಈಗ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲಿ ಕೂಡಾ ಸಕ್ರಿಯರಾಗಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾದಲ್ಲಿ ಮೋಕ್ಷಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ.