ಕನ್ನಡ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಮಿಥುನ್ ತೇಜಸ್ವಿ, ಕನ್ನಡ ಮಾತ್ರವಲ್ಲದೇ ತಮಿಳು ಇಂಡಸ್ಟ್ರಿಯಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ. ಕಮಲಿ ಹಾಗೂ ಕಾವ್ಯಾಂಜಲಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಮಿಥುನ್ ತೇಜಸ್ವಿ ಮೂರು ವರ್ಷಗಳ ಗ್ಯಾಪ್ ನಂತರ ಈಗ ತಮಿಳು ಕಿರುತೆರೆಯತ್ತ ಮುಖ ಮಾಡಿದ್ದಾರೆ.
"ನಾನು ತಾಲಟ್ಟು ಎಂಬ ಹೊಸ ತಮಿಳು ಶೋ ಒಂದನ್ನು ನಿರ್ಮಾಣ ಮಾಡಲಿದ್ದೇನೆ. ತಮಿಳು ಟೆಲಿ ಇಂಡಸ್ಟ್ರಿಯಲ್ಲಿ ನಿರ್ಮಾಪಕನಾಗಿ ಇದು ನನ್ನ ಮೊದಲ ಶೋ. ನಾನು ಕಾವ್ಯಾಂಜಲಿ ನಿರ್ಮಾಪಕರೊಂದಿಗೆ ನಿರ್ಮಾಪಕನಾಗಿ ತಮಿಳು ಶೋ ವನ್ನು ನಿರ್ಮಾಣ ಮಾಡಲು ಕೈ ಜೋಡಿಸಿದ್ದೇನೆ" ಎಂದಿದ್ದಾರೆ.
"ತಾಲಟ್ಟು ಒಂದು ಸುಂದರವಾದ ಶೋ. ತಮಿಳಿನಲ್ಲಿ ತಾಲಟ್ಟು ಎಂದರೆ ಜೋಗುಳ. ನಾವು ಪ್ರೊಮೋ ಬಿಡುಗಡೆ ಮಾಡಿದ್ದೇವೆ. ಇದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ ನನ್ನ ಶೋ ಕುರಿತು ಧನಾತ್ಮಕ ಆಗಿರುವೆ" ಎಂದಿದ್ದಾರೆ.
ಶೋನ ಪ್ರೊಮೋ ಬಿಡುಗಡೆಯ ನಂತರ ಹಲವು ಶುಭಾಶಯಗಳು ಹರಿದು ಬರುತ್ತಿವೆ. ಸ್ನೇಹಿತರು, ಹಿತೈಷಿಗಳು, ಸಹಕಲಾವಿದರು ಅವರಿಗೆ ಶುಭ ಹಾರೈಸಿದ್ದಾರೆ.