ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿರುವ ಮಾನ್ಸಿ ಜೋಷಿ ಅಭಿನಯಕ್ಕೆ ಮನ ಸೋಲದವರಿಲ್ಲ. ನೆಗೆಟಿವ್ ರೋಲ್ ಮೂಲಕ ಮನೆ ಮಾತಾಗಿರುವ ಮಾನ್ಸಿ ಜೋಷಿ ಇದೀಗ ಅಮೃತ ವರ್ಷಿಣಿಯಾಗಿ ಮೋಡಿ ಮಾಡುತ್ತಿದ್ದಾರೆ.
ತೆಲುಗು ಭಾಷೆಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಅಮೃತ ವರ್ಷಿಣಿಯ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಮಾನ್ಸಿ ಮೊದಲ ಬಾರಿಗೆ ತೆಲುಗು ಕಿರುತೆರೆ ವೀಕ್ಷಕರಿಗೂ ಪರಿಚಯವಾಗಲು ಹೊರಟಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿ ತೆಲುಗಿನಲ್ಲಿ 'ಅಮೃತ ವರ್ಷಿಣಿ' ಹೆಸರಿನಲ್ಲಿ ರೀಮೇಕ್ ಆಗುತ್ತಿದೆ. ಕನ್ನಡ ಧಾರಾವಾಹಿಯ ತೆಲುಗು ರೀಮೇಕ್ಗೆ ಕನ್ನಡತಿಯೇ ನಾಯಕಿಯಾಗಿ ನಟಿಸುತ್ತಿರುವುದು ಹೆಮ್ಮೆಯ ವಿಚಾರ.
- " class="align-text-top noRightClick twitterSection" data="
">
'ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ರಮ್ಯ ಆಗಿ ನಟಿಸುವ ಮೂಲಕ ಮಾನ್ಸಿ ಜೋಷಿ ಕಿರುತೆರೆಗೆ ಬಂದರು. ನಂತರ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣ್ ತಂಗಿ ಅನ್ವಿತಾ ಆಗಿ ನಟಿಸಿ ಉದಯ ವಾಹಿನಿಯ ನಾಯಕಿ ಧಾರಾವಾಹಿಯಲ್ಲಿ ವಿಲನ್ ಸೌಜನ್ಯ ಆಗಿ ನಟಿಸಿ ಹೆಸರಾದರು. ಇದೀಗ ಪಾರು ಧಾರಾವಾಹಿಯ ಅನುಷ್ಕಾ ಆಗಿ ನಟಿಸಿ ಹೆಸರಾಗಿರುವ ಮಾನ್ಸಿ ಜೋಷಿ ಈ ಬಾರಿಯ ಜೀ ಕುಟುಂಬ ಅವಾರ್ಡ್ನಲ್ಲಿ ಬೆಸ್ಟ್ ವಿಲನ್ ಪ್ರಶಸ್ತಿ ಪಡೆದಿದ್ದಾರೆ.
ತಮಿಳು ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ಮಾನ್ಸಿ ಜೋಷಿ ಕೊರೊನಾ ಲಾಕ್ಡೌನ್ ಕಾರಣದಿಂದ ಆ ಧಾರಾವಾಹಿಯಿಂದ ಹೊರ ಬಂದಿದ್ದರು. ಆದರೆ ಅಲ್ಲಿ ಕಳೆದುಕೊಂಡ ಅವಕಾಶವನ್ನು ಮಾನ್ಸಿ ಇದೀಗ ತೆಲುಗು ಧಾರಾವಾಹಿಯಲ್ಲಿ ಗಳಿಸಿದ್ದು, ಪರಭಾಷೆಯಲ್ಲಿ ಮಿಂಚಲು ಹೊರಟಿದ್ದಾರೆ.