ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ಕೋಟಿ ಕೋಟಿ ಬಾಚಿದೆ. ಇನ್ನೂ ಬೆಳ್ಳಿ ತೆರೆಯ ಮೇಲೆ ಅಬ್ಬರದ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಸದ್ಯದಲ್ಲೇ ಕಿರುತೆರೆಗೆ ಅಪ್ಪಳಿಸಲಿದೆಯಂತೆ.
ಜೀ ಕನ್ನಡ ವಾಹಿನಿಯು ಸದ್ಯದಲ್ಲೇ ತಾನು ಕುರುಕ್ಷೇತ್ರ ಸಿನಿಮಾ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಆದರೆ, ಯಾವಾಗ ಎನ್ನುವ ವಿಷಯ ಇನ್ನೂ ಬಹಿರಂಗಗೊಂಡಿಲ್ಲ. ಜೀ ಕನ್ನಡ ವಾಹಿನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯ ಹೊರಬಿದ್ದಿದೆ.
-
@dasadarshan ರವರು ದುರ್ಯೋಧನನ ಅವತಾರದಲ್ಲಿ ಬೆಳ್ಳಿ ಪರೆದೆಯಲ್ಲಿ ಘರ್ಜಿಸಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಅತೀ ಶೀಘ್ರದಲ್ಲಿ ನಿಮ್ಮ Zee Kannada ವಾಹಿನಿಯಲ್ಲಿ!@DBossOfficialFC #Zeekannada#Kurukshetra#WorldTelevisionPremiere#ComingSoon#ChallengingStarDarshan#DBoss pic.twitter.com/rXhwrUuiGF
— Zee Kannada (@ZeeKannada) September 28, 2019 " class="align-text-top noRightClick twitterSection" data="
">@dasadarshan ರವರು ದುರ್ಯೋಧನನ ಅವತಾರದಲ್ಲಿ ಬೆಳ್ಳಿ ಪರೆದೆಯಲ್ಲಿ ಘರ್ಜಿಸಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಅತೀ ಶೀಘ್ರದಲ್ಲಿ ನಿಮ್ಮ Zee Kannada ವಾಹಿನಿಯಲ್ಲಿ!@DBossOfficialFC #Zeekannada#Kurukshetra#WorldTelevisionPremiere#ComingSoon#ChallengingStarDarshan#DBoss pic.twitter.com/rXhwrUuiGF
— Zee Kannada (@ZeeKannada) September 28, 2019@dasadarshan ರವರು ದುರ್ಯೋಧನನ ಅವತಾರದಲ್ಲಿ ಬೆಳ್ಳಿ ಪರೆದೆಯಲ್ಲಿ ಘರ್ಜಿಸಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಅತೀ ಶೀಘ್ರದಲ್ಲಿ ನಿಮ್ಮ Zee Kannada ವಾಹಿನಿಯಲ್ಲಿ!@DBossOfficialFC #Zeekannada#Kurukshetra#WorldTelevisionPremiere#ComingSoon#ChallengingStarDarshan#DBoss pic.twitter.com/rXhwrUuiGF
— Zee Kannada (@ZeeKannada) September 28, 2019
ಡಿಬಾಸ್ ಅವರು ದುರ್ಯೋಧನನ ಅವತಾರದಲ್ಲಿ ಬೆಳ್ಳಿ ಪರೆದೆಯಲ್ಲಿ ಘರ್ಜಿಸಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಅತೀ ಶೀಘ್ರದಲ್ಲಿ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಎಂದು ಟ್ವೀಟ್ ಮಾಡಲಾಗಿದೆ.
ದಿವಂಗತ ನಟ ಅಂಬರೀಶ್, ಅರ್ಜುನ್ ಸರ್ಜಾ, ಸೋನು ಸೂದ್, ಶಶಿ ಕುಮಾರ್ ಮೊದಲಾದ ನಟರು ನಟಿಸಿರುವ ಕುರುಕ್ಷೇತ್ರ ಚಿತ್ರವು ವಿಶ್ವದಲ್ಲೇ ಮೊದಲಬಾರಿಗೆ ತ್ರಿಡಿ ಅವತರಣಿಕೆಯಲ್ಲಿ ಬೆಳ್ಳಿಪರದೆಯ ಮೇಲೆ ಪ್ರಸಾರವಾದ ಮೊದಲ ಪೌರಾಣಿಕ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಿದೆ.
ಕುರುಕ್ಷೇತ್ರ ಸಿನಿಮಾ ಇನ್ನೂ ರಾಜ್ಯದ ಹಲವು ಥಿಯೇಟರ್ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.