ಉದಯ ವಾಹಿನಿಯಲ್ಲಿ ಪ್ರಸಾರವಾಗಿತ್ತಿರುವ 'ನಂದಿನಿ' ಧಾರಾವಾಹಿಯ ದೇವಸೇನಾ ಆಗಿ ನಟಿಸುತ್ತಿದ್ದ ಕಾವ್ಯಶಾಸ್ತ್ರಿ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದಿದ್ದು ಹಳೆಯ ವಿಚಾರ. ನಂತರ ಆ ಪಾತ್ರಕ್ಕೆ ಕೊಡಗು ಸುಂದರಿ ಅನು ಪೂವಮ್ಮ ಬಂದಿದ್ದರು.
![Kavya shastri](https://etvbharatimages.akamaized.net/etvbharat/prod-images/5866214_6_5866214_1580176861559.png)
ಆದರೆ ಇದೀಗ ಕಾವ್ಯಶಾಸ್ತ್ರಿ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಣ್ಣ ಬ್ರೇಕ್ ಪಡೆದಿದ್ದ ಆಕೆ ಇದೀಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಕಾವ್ಯ ಶಾಸ್ತ್ರಿ ಮತ್ತೊಮ್ಮೆ 'ನಂದಿನಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೊದಲು ದೇವಸೇನಾಳಾಗಿ ಮನೆ ಮಾತಾಗಿದ್ದ ಕಾವ್ಯ ಇದೀಗ ಎರಡನೇ ಬಾರಿ ಹೊಸ ಪಾತ್ರದ ಮೂಲಕ ಜನರ ಮುಂದೆ ಬರಲಿದ್ದಾರೆ. ನಾಗಲೋಕದಲ್ಲಿ ನಂದಿನಿ ಎನ್ನುವ ಹೊಸ ಅಧ್ಯಾಯ ಆರಂಭವಾಗಲಿದ್ದು ಅದರಲ್ಲಿ ಕಾವ್ಯ ಕಾಣಿಸಿಕೊಳ್ಳಲಿದ್ದಾರೆ. ಕಾವ್ಯ ಶಾಸ್ತ್ರಿ ಅವರು ನಂದಿನಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಣ್ಣ ತುಣುಕೊಂದು ಇನ್ಸ್ಸ್ಟ್ರಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ.
ಬಿಗ್ಬಾಸ್ ಸೀಸನ್ 4 ರ ಸ್ಪರ್ಧಿಯಾಗಿದ್ದ ಕಾವ್ಯಶಾಸ್ತ್ರಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ ಅವರು ಸ್ಲಿಮ್ ಆಗಿದ್ದು, ಕೇವಲ 5 ತಿಂಗಳಲ್ಲಿ ಅವರು 50 ಕೆಜಿ ತೂಕ ಕಳೆದುಕೊಂಡಿದ್ದಾರೆ. ತೂಕ ಇಳಿಸಲು ಸಖತ್ ವರ್ಕೌಟ್ ಮಾಡಿದೆ ಎನ್ನುತ್ತಾರೆ ಕಾವ್ಯ. ಈಕೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ ಧಾರಾವಾಹಿ 'ಶುಭವಿವಾಹ'. ಇದೀಗ ನಂದಿನಿಯಲ್ಲಿ ಹೊಸ ಪಾತ್ರದ ಮೂಲಕ ಮತ್ತೆ ಮನರಂಜನೆಯ ರಸದೌತಣ ನೀಡಲು ತಯಾರಾಗಿರುವ ಕಾವ್ಯ, ಒಂದೇ ಧಾರಾವಾಹಿಯಲ್ಲಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆಗೆ ಪಾತ್ರರಾಗುವುದಂತೂ ನಿಜ.
![Kavya shastri](https://etvbharatimages.akamaized.net/etvbharat/prod-images/kn-bng-05-kavyashastri-serial-photo-ka10018_27012020222820_2701f_1580144300_1091.jpg)