ETV Bharat / sitara

ಸಕಲಕಲಾವಲ್ಲಭೆ 'ಕಮಲಿ' ಈ ಮಲೆನಾಡಿನ ಚೆಲುವೆ

ಕಿರುತೆರೆ ವೀಕ್ಷಕರಿಗೆ ಇವರದ್ದು ಪರಿಚಿತ ಮುಖ. ಖಾಸಗಿ ವಾಹಿನಿಯ ಜನಪ್ರಿಯ ಧಾರಾವಾಹಿ 'ಕಮಲಿ' ಯಲ್ಲಿ ನಾಯಕ ರಿಷಿಯ ತಂಗಿ ರಚನಾ ಪಾತ್ರಧಾರಿಯಾಗಿ ಮಿಂಚುತ್ತಿರುವ ಈ ಮಲೆನಾಡ ಬೆಡಗಿ ಹೆಸರು ಯಶಸ್ವಿನಿ ರವೀಂದ್ರ.

ಯಶಸ್ವಿನಿ ರವೀಂದ್ರ
author img

By

Published : Sep 13, 2019, 1:26 PM IST

ಯಶಸ್ವಿನಿ ರವೀಂದ್ರ ಅವರದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಯಶಸ್ವಿನಿ ಮುಂದೆ ಕೆಲಸ ಅರಸಿಕೊಂಡು ಬಂದದ್ದು ಮಹಾನಗರಿ ಬೆಂಗಳೂರಿಗೆ. ಸ್ಟೂಡೆಂಟ್ ಅಡ್ವೈಸರ್ ಆಗಿ ಕೆಲಸ ಮಾಡುವಾಗ ಮನಸ್ಸು ನೃತ್ಯದತ್ತ ವಾಲಿದೆ. ಕೂಡಲೇ ಮನಸ್ಸಿನ ಮಾತಿಗೆ ಅಸ್ತು ಎಂದ ಯಶಸ್ವಿನಿ ನೃತ್ಯ ಕಲಿಯುವ ಆಲೋಚನೆ ಮಾಡಿದ್ದಾರೆ. ಮುಂದೆ ರಂಜಿತಾ ಅವರ ಬಳಿ ಕಥಕ್ ನೃತ್ಯ ಗರಡಿಯಲ್ಲಿ ನೃತ್ಯದ ಪ್ರಾಕಾರಗಳನ್ನು ಕಲಿತರು. ಕೆಲವು ದಿನಗಳ ನಂತರ ನೃತ್ಯದ ಜೊತೆಗೆ ಯಶಸ್ವಿನಿಗೆ ಬಣ್ಣದ ಲೋಕ ಕೂಡಾ ಸೆಳೆದಿದೆ.

ನಟಿಸಬೇಕು ಎಂದು ಅನ್ನಿಸಿದ್ದೇ ತಡ, ಆಡಿಶನ್​​​ಗಳಲ್ಲಿ ಭಾಗವಹಿಸಲು ಆರಂಭಿಸಿದರು ಯಶಸ್ವಿನಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಿ. ಶೇಷಾದ್ರಿ ನಿರ್ದೇಶನದ 'ಸಾಕ್ಷಿ' ಧಾರಾವಾಹಿಗೆ ಮೊದಲು ಆಯ್ಕೆ ಆದರು. ಆದರೆ ಅವರು ಆಯ್ಕೆ ಆದದ್ದು ಬಾಣಂತಿ ಪಾತ್ರಕ್ಕೆ. ಆದರೆ ಈಗಷ್ಟೇ ಸಣ್ಣ ಪ್ರಾಯ, ಇಷ್ಟು ಸಣ್ಣ ಪ್ರಾಯಕ್ಕೆ ಬಾಣಂತಿ ಪಾತ್ರವಾ ಎಂಬ ಗೊಂದಲದಲ್ಲಿದ್ದ ಆಕೆಗೆ ಆ ಪಾತ್ರ ಬೇಡ ಎಂದು ನಿರ್ದೇಶಕರೇ ಅಂದುಬಿಟ್ಟರು. ಬಂದ ಅವಕಾಶ ಕೈ ತಪ್ಪಿ ಹೋಯಿತಲ್ಲ ಎಂದು ಯೋಚಿಸುತ್ತಿರುವಾಗಲೇ ನಾಯಕನ ಅತ್ತೆ ಮಗಳ ಪಾತ್ರಕ್ಕೆ ಆಯ್ಕೆ ಆದರು. ದಿಶಾ ಹೆಸರಿನ ಬಬ್ಲಿ ಪಾತ್ರವದು. ಅದರಲ್ಲಿ ಮನೋಜ್ಞವಾಗಿ ಅಭಿನಯಿಸಿ ಯಶಸ್ವಿನಿ ವೀಕ್ಷಕರ ಮನ ಸೆಳೆದರು.

ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಯಶಸ್ವಿನಿ ನಿರೂಪಣೆ ಜೊತೆಗೆ ಕಂಠದಾನವನ್ನೂ ಮಾಡುತ್ತಾರೆ. ಸಕಲಾಕಲಾವಲ್ಲಭೆಯಾಗಿ ಗುರುತಿಸಿಕೊಂಡಿರುವ ಯಶಸ್ವಿನಿ ಮನೆದೇವರು ಧಾರಾವಾಹಿಯ ನೆಗೆಟಿವ್ ಪಾತ್ರದಲ್ಲಿ ಕೂಡಾ ನಟಿಸಿದ್ದಾರೆ. ಇದೀಗ 'ಕಮಲಿ' ಧಾರಾವಾಹಿ ರಚನಾ ಆಗಿ ಬ್ಯುಸಿಯಾಗಿರುವ ಮಲೆನಾಡಿನ ಚೆಂದುಳ್ಳಿ ಚೆಲುವೆ ಯಶಸ್ವಿನಿ 'ಕಾಲವೇ ಮೋಸಗಾರ' ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.

Intro:Body:ಕಿರುತೆರೆ ವೀಕ್ಷಕರಿಗೆ ಇವಳದು ಪರಿಚಿತ ಮುಖ. ಹೌದು. ಝೀ ಕನ್ನಡದ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ನಾಯಕ ರಿಷಿಯ ತಂಗಿ ರಚನಾ ಪಾತ್ರಧಾರಿಯಾಗಿ ಮಿಂಚುತ್ತಿರುವ ಈಕೆಯ ಹೆಸರು ಯಶಸ್ವಿನಿ ರವೀಂದ್ರ.

ಮಲೆನಾಡ ಬೆಡಗಿ ಎಂದೇ ಜನಜನಿತವಾಗಿರುವ ಯಶಸ್ವಿನಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಯಶಸ್ವಿನಿ ಮುಂದೆ ಕೆಲಸ ಅರಸಿಕೊಂಡು ಬಂದದ್ದು ಮಹಾನಗರಿ ಬೆಂಗಳೂರಿಗೆ. ಅಂತೆಯೇ ಸ್ಟೂಡೆಂಟ್ ಅಡ್ವೈಸರ್ ಆಗಿ ಕೆಲಸವನ್ನು ಕೂಡಾ ಮಾಡಿದರು. ಕೆಲಸ ಮಾಡುವಾಗ ಮನಸ್ಸು ನೃತ್ಯದತ್ತ ವಾಲಿತು. ಕೂಡಲೇ ಮನಸ್ಸಿನ ಮಾತಿಗೆ ಅಸ್ತು ಎಂದ ಯಶಸ್ವಿನಿ ನೃತ್ಯ ಕಲಿಯುವ ಆಲೋಚನೆ ಮಾಡಿದರು. ಮುಂದೆ ರಂಜಿತಾ ಅವರ ಬಳಿ ಕಥಕ್ ನೃತ್ಯ ಗರಡಿಯಲ್ಲಿ ನೃತ್ಯದ ಪ್ರಕಾರಗಳನ್ನು ಕಲಿತರು. ಸಂತಸದ ಸಂಗತಿ ಎಂದರೆ ನೃತ್ಯದ ಜೊತೆಗೆ ಯಶಸ್ವಿನಿಗೆ ನಟನೆಯತ್ತ
ಲೂ ವಿಶೇಷ ಆಸಕ್ತಿ ಮೂಡಿತು.

ನಟಿಸಬೇಕು ಎಂದು ಅನ್ನಿಸಿದ್ದೇ ತಡ, ಆಡಿಶನ್ ಗಳಲ್ಲಿ ಭಾಗವಹಿಸಿದರು ಯಶಸ್ವಿನಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಿ.ಶೇಷಾದ್ರಿ ನಿರ್ದೇಶನದ ಸಾಕ್ಷಿ ಧಾರಾವಾಹಿಗೆ ಸೆಲೆಕ್ಟ್ ಆದರು. ಆದರೆ ಅವರು ಬಾಣಂತಿ ಪಾತ್ರಕ್ಕೆ ಆಯ್ಕೆ ಆಗಿದ್ದರು. ಆದರೆ ಈಗಷ್ಟೇ ಸಣ್ಣ ಪ್ರಾಯ, ಇಷ್ಟು ಸಣ್ಣ ಪ್ರಾಯಕ್ಕೆ ಹುಡುಗಿಗೆ ಬಾಣಂತಿ ಪಾತ್ರ ಎಂದು ಗೊಂದಲದಲ್ಲಿದ್ದ ಆಕೆಗೆ ಆ ಪಾತ್ರ ಬೇಡ ಎಂದು ನಿರ್ದೇಶಕರೇ ಅಂದುಬಿಟ್ಟರು.

ಇನ್ನೇನೂ ಮಾಡುವುದಪ್ಪಾ? ಬಂದ ಅವಕಾಶ ಕೈ ತಪ್ಪಿ ಹೋಯಿತಲ್ಲ ಎಂದು ಯೋಚಿಸುತ್ತಿರುವಾಗಲೇ ಅವರ ಅದೃಷ್ಟದ ಬಾಗಿಲು ತೆರೆಯಿತು. ಅದೇನಂತಿರಾ? ಯಶಸ್ವಿನಿ ನಾಯಕನ ಅತ್ತೆ ಮಗಳ ಪಾತ್ರಕ್ಕೆ ಆಯ್ಕೆ ಆದರು. ದಿಶಾ ಹೆಸರಿನ ಬಬ್ಲಿ ಪಾತ್ರವದು. ಅದರಲ್ಲಿ ಮನೋಜ್ಞವಾಗಿ ಅಭಿನತಿಸಿದ ಯಶಸ್ವಿನಿ ವೀಕ್ಷಕರ ಮನ ಸೆಳೆದು ಬಿಟ್ಟರು.

ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಯಶಸ್ವಿನಿ ನಿರೂಪಣೆಯ ಜೊತೆಗೆ ಕಂಠದಾನಕ್ಕೂ ಈಕೆ ಸೈ. ಸಕಲಾಕಲಾವಲ್ಲಭೆಯಾಗಿ ಗುರುತಿಸಿಕೊಂಡಿರುವ ಯಶಸ್ವಿನಿ ಮನೆದೇವರು ಧಾರಾವಾಹಿಯಲ್ಲಿ ನಟಿಸಿದರು. ಮನೆದೇವರು ವಿನಲ್ಲಿ ನೆಗೆಟಿವ್ ಶೇಡ್ ಇರುವ, ಚಾಲೆಂಜಿಗ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.

ಇದೀಗ ಕಮಲಿಯ ರಚನಾ ಆಗಿ ಬ್ಯುಸಯಾಗಿರುವ ಮನೆನಾಡಿನ ಚೆಂದುಳ್ಳಿ ಚೆಲುವೆ ಯಶಸ್ವಿನಿ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಹೌದು. ಕಾಲವೇ ಮೋಸಗಾರ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಲು ತಯಾರಾಗಿದ್ದಾರೆ‌.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.