'ಕಮಲಿ' ಧಾರಾವಾಹಿ ಖ್ಯಾತಿಯ ರಿಷಿ ನಿಮಗೆಲ್ಲಾ ಗೊತ್ತಿದೆ. ಈ ನಟನ ನಿಜ ಹೆಸರು ನಿರಂಜನ್. ಧಾರಾವಾಹಿಯಲ್ಲಿ ಕಾಲೇಜು ಪ್ರಾಧ್ಯಾಪಕ ಪಾತ್ರದಲ್ಲಿ ನಟಿಸುತ್ತಿರುವ ರಿಷಿ ಅಲಿಯಾಸ್ ನಿರಂಜನ್ ಈಗ ಎಲ್ಲಿ ಹೋದರೂ ಅವರನ್ನು ಜನರು ಗುರುತುಹಿಡಿಯುತ್ತಾರಂತೆ.
![niranjan](https://etvbharatimages.akamaized.net/etvbharat/prod-images/kn-bng-kamalirishi-niranjan-ka10018_19072019124007_1907f_1563520207_1110.jpg)
ಧಾರಾವಾಹಿ ಶೂಟಿಂಗ್ನಲ್ಲೇ ಹೆಚ್ಚು ಸಮಯ ಕಳೆಯುವ ರಿಷಿ ಬಿಡುವು ಸಿಕ್ಕಾಗ ಅಮ್ಮನ ಜೊತೆ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಹೆಚ್ಚು ಸಮಯ ಕಳೆಯುತ್ತಾರಂತೆ. ಅದು ಬಿಟ್ಟರೆ ದೇಹದ ಫಿಟ್ನೆಸ್ಗಾಗಿ ಜಿಮ್ ಹಾಗೂ ಸೈಕ್ಲಿಂಗ್ ಮಾಡುತ್ತಾರಂತೆ. ಅಷ್ಟೇ ಅಲ್ಲ ರಸ್ತೆಯಲ್ಲಿ ಓಡಾಡುವಾಗ ಜನರ ಹಾವಭಾವ ಗುರುತಿಸುತ್ತಾರಂತೆ. ಅದನ್ನು ತಮ್ಮ ನಟನೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡ್ತಾರಂತೆ.
![niranjan](https://etvbharatimages.akamaized.net/etvbharat/prod-images/kn-bng-kamalirishi-niranjan-ka10018_19072019124007_1907f_1563520207_1086.jpg)
ಅವರ ಪ್ರಕಾರ ನಟನೆ ಎಂದರೆ ಅಬ್ಸರ್ವೇಶನ್ ಅಂತೆ. ಹೀಗಾಗಿ ನಟನೆ ಬಗ್ಗೆ ರಿಷಿ ಹೆಚ್ಚು ಆಸಕ್ತಿ ಹೊಂದಿರುವುದಾಗಿ ತಿಳಿಸುತ್ತಾರೆ ನಿರಂಜನ್. ಈ ಮುನ್ನ ರಿಷಿ 'ಗಾಂಧಾರಿ' ಧಾರಾವಾಹಿಯಲ್ಲಿ ನಟಿಸಿದ್ದರೂ ಅವರಿಗೆ ಹೇಳಿಕೊಳ್ಳುವಂತೆ ಗುರುತು ಸಿಕ್ಕಿರಲಿಲ್ಲವಂತೆ. ಆದರೆ ಕಮಲಿ ಧಾರಾವಾಹಿಯ ಪ್ರಮುಖ ಪಾತ್ರಕ್ಕಾಗಿ ಆಡಿಷನ್ನಲ್ಲಿ ಆಯ್ಕೆಯಾಗಿದ್ದು ನನ್ನ ಪುಣ್ಯ ಎನ್ನುತ್ತಾರೆ ನಿರಂಜನ್.
![niranjan](https://etvbharatimages.akamaized.net/etvbharat/prod-images/kn-bng-kamalirishi-niranjan-ka10018_19072019124007_1907f_1563520207_718.jpg)