ಕೊರೊನಾ ಎರಡನೇ ಅಲೆ ಈಗ ಎಲ್ಲರಿಗೂ ಸಂಕಷ್ಟ ತಂದೊಡ್ಡಿದೆ. ಇದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಹಾಗೂ ನಿರೂಪಕಿ ಚೈತ್ರಾ ವಾಸುದೇವನ್ ಮಾತನಾಡಿದ್ದಾರೆ.
"ನಾವು ಕೋವಿಡ್ನ ಮೊದಲನೇ ಅಲೆಯಿಂದ ಸಾಮಾನ್ಯ ಬದುಕಿಗೆ ಬಂದಿದ್ದೆವು. ವಿಶೇಷವಾಗಿ ಶೋಗಳು ಕಷ್ಟದೊಂದಿಗೆ ಆರಂಭವಾಗಿದ್ದವು. ಹಲವು ದಿನಗಳು ಕಾದ ನಂತರ ದೊಡ್ಡ ಶೋಗಳು ಎರಡನೇ ಅಲೆಯ ಪರಿವೇ ಇಲ್ಲದೆ ಆರಂಭವಾಗಿದ್ದವು. ನಾವು ಬಿಗಿಯಾಗಿ ನಿಯಮಗಳನ್ನು ಪಾಲಿಸಿಕೊಂಡು ಶೂಟಿಂಗ್ ಮಾಡುತ್ತಿದ್ದೆವು. ಆದರೆ, ಈಗ ಕೊರೊನಾ ಎರಡನೇ ಅಲೆ ಬಂದಿದೆ. ಎಲ್ಲ ಇವೆಂಟ್ ಹಾಗೂ ಶೋಗಳ ಶೂಟಿಂಗ್ ರದ್ದಾಗಿದೆ" ಎಂದಿದ್ದಾರೆ.
ಲಾಕ್ಡೌನ್ನಲ್ಲಿ ಕಲಾವಿದರು ಸಂಕಷ್ಟದ ಕುರಿತಾಗಿ ಹೇಳಿದ ಅವರು, "ಕಲಾವಿದರು ಜನರ ನಡುವೆ ಇರುತ್ತಾರೆ. ಆದರೆ, ಈ ಪರಿಸ್ಥಿತಿಯಲ್ಲಿ ನಾವು ಜನರಿಂದ ದೂರವಿದ್ದು ನಾಲ್ಕು ಗೋಡೆಗಳ ನಡುವೆ ಕುಳಿತುಕೊಳ್ಳಬೇಕಿದೆ. ಈ ಎರಡನೇ ಅಲೆಯ ನಂತರ ನಮ್ಮ ಸಂಭಾವನೆ ಕಡಿತಗೊಳ್ಳಲಿದೆ. ನಾವು ಭವಿಷ್ಯದ ಕುರಿತು ವೇದಿಕೆಗೆ ಮರಳಿ ಬರುವ ಕುರಿತು ಖಚಿತತೆ ಹೊಂದಿಲ್ಲ" ಎಂದಿದ್ದಾರೆ ಚೈತ್ರಾ.
"ನಾನು ಹಲವು ನಿರ್ಮಾಪಕರನ್ನು ನೋಡಿದ್ದೇನೆ. ಅವರು ಸಿನಿಮಾ ಆಡಿಯೋ ಲಾಂಚ್ ಹಾಗೂ ಪ್ರಮೋಷನ್ ಇವೆಂಟ್ಗಳಿಗೆ ನನ್ನನ್ನು ನಿರೂಪಕಿಯಾಗಿ ಕರೆದಿದ್ದರು. ಸದ್ಯ ಅವರು ತಮ್ಮ ಸಿನಿಮಾ ಯಾವಾಗ ಬಿಡುಗಡೆಯಾಗುವುದೋ ಎಂದು ಯೋಚಿಸಿ ಹತಾಶರಾಗಿದ್ದಾರೆ. ಅವರು ಸಿನಿಮಾಗಳಿಗೆ ತುಂಬಾ ಬಂಡವಾಳ ಹಾಕಿರುತ್ತಾರೆ. ಅವರ ಬಗ್ಗೆ ಯೋಚಿಸಿದರೆ ಬೇಸರವಾಗುತ್ತಿದೆ. ನನಗೆ ಶೋ ನಿರೂಪಿಸಲು ಮುಂಗಡವಾಗಿ ನೀಡಿದ ಹಣವನ್ನು ಅವರಿಗೆ ಹಿಂತಿರುಗಿಸಿದ್ದೇನೆ" ಎಂದು ಚೈತ್ರಾ ಹೇಳಿದ್ದಾರೆ.
ಸದ್ಯ ಚೈತ್ರಾ ವಾಸುದೇವನ್ 'ಕುಕ್ಕು ವಿದ್ ಕಿರುಕ್ಕು ಶೋ'ನ ಭಾಗವಾಗಿದ್ದಾರೆ.