ETV Bharat / sitara

ಡ್ಯಾನ್ಸ್, ಆ್ಯಕ್ಟಿಂಗ್ ಮಾತ್ರವಲ್ಲ, ನಿರೂಪಣೆಗೂ ರೆಡಿ ಅಂದ್ರು ಡಿಂಪಲ್ ಕ್ವೀನ್ - ನಿರೂಪಕಿ ರಚಿತಾ ರಾಮ್

ನಾನು ನಟಿ, ನೃತ್ಯಗಾರ್ತಿ ಮಾತ್ರವಲ್ಲ, ಒಳ್ಳೆಯ ನಿರೂಪಕಿ ಎಂಬುದನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಧಿಸಿ ತೋರಿಸಿದ್ದಾರೆ. ಖಾಸಗಿ ವಾಹಿನಿಯ 'ಅನುಬಂಧ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ರಚಿತಾ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ್ದಾರೆ.

ಡಿಂಪಲ್ ಕ್ವೀನ್
author img

By

Published : Sep 12, 2019, 7:44 PM IST

ಚಂದನವನದ ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಒಬ್ಬರು. 'ಅರಸಿ' ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆ ರಚಿತಾ ರಾಮ್ 'ಬುಲ್ ಬುಲ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

rachitaram
ಡಿಂಪಲ್ ಕ್ವೀನ್ ರಚಿತಾ ರಾಮ್ (ಫೋಟೋ ಕೃಪೆ: ಕಲರ್ಸ್ ಕನ್ನಡ)

'ಬುಲ್ ಬುಲ್' ಸಿನಿಮಾದಲ್ಲಿ ಕಾವೇರಿ ಪಾತ್ರಕ್ಕೆ ಜೀವ ತುಂಬಿದ ರಚಿತಾ ಮೊದಲ ಚಿತ್ರಕ್ಕೆ ಪ್ರಶಸ್ತಿ ಪಡೆದ ಕನ್ನಡದ ಹೆಮ್ಮೆಯ ನಟಿಯೂ ಹೌದು. ಫಿಲಮ್​​ ಫೇರ್​​​​​​​​​​ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ರಚಿತಾ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡವರು. ನಂತರ ಹಿಂತಿರುಗಿ ನೋಡದ ಮುದ್ದು ಮುಖದ ಬೆಡಗಿ 'ದಿಲ್ ರಂಗೀಲಾ' ದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಭಿನಯಿಸಿದರು. ನಂತರ ಅಂಬರೀಶ, ರನ್ನ, ರಥಾವರ, ಚಕ್ರವ್ಯೂಹ, ಜಗ್ಗುದಾದ, ಭರ್ಜರಿ, ಪುಷ್ಪಕ ವಿಮಾನ ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ಮಿಂಚಿದರು.

ನಟನೆಯ ಜೊತೆಗೆ ಭರತನಾಟ್ಯವನ್ನೂ ಕಲಿತಿರುವ ಡಿಂಪಲ್ ಕ್ವೀನ್ ಬಹಳಷ್ಟು ಕಡೆ ನೃತ್ಯ ಪ್ರದರ್ಶನಗಳನ್ನೂ ನೀಡಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಕ್ರಮದ ನಿರೂಪಣೆಯನ್ನು ಕೂಡಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ರಚಿತಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರಸಾರವಾಗುತ್ತಿರುವ 'ಅನುಬಂಧ ಅವಾರ್ಡ್ಸ್' ಕಾರ್ಯಕ್ರಮದ ನಿರೂಪಣೆಯನ್ನು ನಿಮ್ಮ ಪ್ರೀತಿಯ ಡಿಂಪಲ್ ಕ್ವೀನ್ ಮಾಡಿದ್ದಾರೆ. ಈಗಾಗಲೇ ನಟಿ, ತೀರ್ಪುಗಾರ್ತಿ, ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ರಚಿತಾ ರಾಮ್ ಇದೇ ಮೊದಲ ಬಾರಿಗೆ ನಿರೂಪಣೆಯನ್ನು ಮಾಡಿದ್ದಾರೆ. ಈ ಸಂತೋಷದ ವಿಚಾರವನ್ನು ತಮ್ಮ ಇನ್ಸ್​​​ಟಾಗ್ರಾಮ್​​​​​​ ಖಾತೆಯಲ್ಲಿ ಕೂಡಾ ಹಂಚಿಕೊಂಡಿದ್ದಾರೆ.

Intro:Body:ಇದೇ ಮೊದಲ ಬಾರಿಗೆ ‌ನಿರೂಪಣೆ ಮಾಡುತ್ತಿದ್ದಾರೆ ಡಿಂಪಲ್ ಕ್ವೀನ್

ಚಂದನವನದ ಬಹುಬೇಡಿಕೆಯ ಪಾಲಿಗೆ ಸೇರಿದ ನಟಿಯರ ಪೈಕಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಒಬ್ಬರು! ಅರಸಿ ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆ ರಚಿತಾ ರಾಮ್ ಮುಂದೆ ಬುಲ್ ಬುಲ್ ಚಿತ್ರದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಬುಲ್ ಬುಲ್ ಸಿನಿಮಾದಲ್ಲಿ ಕಾವೇರಿ ಪಾತ್ರಕ್ಕೆ ಜೀವ ತುಂಬಿದ ರಚಿತಾ ಮೊದಲ ಚಿತ್ರಕ್ಕೆ ಪ್ರಶಸ್ತಿ ಪಡೆದ ಕನ್ನಡದ ಹೆಮ್ಮೆಯ ನಟಿಯೂ ಹೌದು. ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ರಚಿತಾ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡವರು.

https://www.instagram.com/p/B2QrbJaAa3V/?utm_source=ig_web_copy_link

ಮುಂದೆ ಹಿಂತಿರುಗಿ ನೋಡದ ಮುದ್ದು ಮುಖದ ಬೆಡಗಿ ದಿಲ್ ರಂಗೀಲಾ ದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಅಭಿನಯಿಸಿದರು. ನಂತರ ಅಂಬರೀಶ, ರನ್ನ, ರಥಾವರ, ಚಕ್ರವ್ಯೂಹ, ಜಗ್ಗುದಾದ, ಭರ್ಜರಿ, ಪುಷ್ಪಕ ವಿಮಾನ ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ಮಿಂಚಿದರು.

ನಟನೆಯ ಜೊತೆಗೆ ಭರತನಾಟ್ಯ ವನ್ನು ಕಲಿತಿರುವ ಡಿಂಪಲ್ ಕ್ವೀನ್ ಸುಮಾರು ಕಡೆ ನೃತ್ಯ ಪ್ರದರ್ಶನಗಳನ್ನು ಕೂಡಾ ನೀಡಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಕ್ರಮದ ನಿರೂಪಣೆಯನ್ನು ಕೂಡಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ರಚಿತಾ.

https://www.instagram.com/_u/rachita_instaofficial/?utm_source=ig_embed&ig_mid=XSgy6QABAAEj_Kmn97thi8DDF-sw

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷದಂತೆ ಈ ವರುಷವೂ ಪ್ರಸಾರವಾಗುತ್ತಿರುವ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ನಿರೂಪಣೆಯನ್ನು ನಿಮ್ಮ ಪ್ರೀತಿಯ ಡಿಂಪಲ್ ಕ್ವೀನ್ ಮಾಡುತ್ತಿದ್ದಾರೆ. ಈಗಾಗಲೇ ನಟಿ, ತೀರ್ಪುಗಾರ್ತಿ, ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ರಚಿತಾ ರಾಮ್ ಇದೇ ಮೊದಲ ಬಾರಿಗೆ ನಿರೂಪಣೆಯನ್ನು ಮಾಡಲಿದ್ದಾರೆ. ಜೊತೆಗೆ ಈ ಸಂತಸದ ವಿಚಾರದವನ್ನು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.