ETV Bharat / sitara

ಲಾಕ್​ಡೌನ್​​​ ನಂತರದ ಶೂಟಿಂಗ್​​​​​​​ ದಿನಗಳ ಅನುಭವ ಹಂಚಿಕೊಂಡ ಮೋಕ್ಷಿತಾ

ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಧಾರಾವಾಹಿ ಚಿತ್ರೀಕರಣದ ಸ್ಥಳದಲ್ಲಿ ಕೊರೊನಾ ವೈರಸ್​ ಹರಡದಂತೆ ಹೇಗೆ ಮುನ್ನೆಚರಿಕೆ ವಹಿಸಲಾಗುತ್ತಿದೆ ಎಂಬುದರ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ.

corona safety measurement in Paru shooting set
ಮೋಕ್ಷಿತಾ
author img

By

Published : Jun 25, 2020, 3:45 PM IST

Updated : Jun 25, 2020, 7:52 PM IST

ಲಾಕ್​ಡೌನ್​​​​​ ಸಡಿಲಿಕೆಯಾಗುತ್ತಿದ್ದಂತೆ ಹಲವು ನಿರ್ಬಂಧಗಳನ್ನು ವಿಧಿಸಿ ಸರ್ಕಾರವು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಈಗಾಗಲೇ ಧಾರಾವಾಹಿಯ ಫ್ರೆಷ್ ಎಪಿಸೋಡ್​​​​ಗಳು ಕೂಡಾ ಪ್ರಸಾರವಾಗುತ್ತಿವೆ. ಕಲಾವಿದರು ಕೂಡಾ ಎಲ್ಲಾ ಮುನ್ನೆಚರಿಕೆ ತೆಗೆದುಕೊಂಡು ಶೂಟಿಂಗ್​​ನಲ್ಲಿ ಭಾಗವಹಿಸುತ್ತಿದ್ದಾರೆ.

Paru shooting set
ಲಾಕ್​​ಡೌನ್​ ನಂತರದ ಶೂಟಿಂಗ್​​ ಅನುಭವ ಹಂಚಿಕೊಂಡ ಮೋಕ್ಷಿತಾ

'ಪಾರು' ಖ್ಯಾತಿಯ ಮೋಕ್ಷಿತಾ ಪೈ ಕೂಡಾ ಲಾಕ್​​ಡೌನ್​​​​​ ನಂತರದ ಶೂಟಿಂಗ್ ದಿನಗಳ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 'ಚಿತ್ರೀಕರಣ ನಡೆಯುತ್ತಿರುವ ಜಾಗದಲ್ಲಿ ಬಹಳ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಧಾರಾವಾಹಿ ಎಂದ ಮೇಲೆ ತುಂಬಾ ಜನರು ತಂತ್ರಜ್ಞರು ಇರುತ್ತಾರೆ. ಆದರೆ ಇದೀಗ ಶೂಟಿಂಗ್ ಸೆಟ್​​​​ನಲ್ಲಿ ಮೊದಲಿಗಿಂತ ಕಡಿಮೆ ಜನರು ಇರುತ್ತಾರೆ. ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಶೂಟಿಂಗ್ ಸೆಟ್​​​​​​​​​​​​​​​​​​​​​​​​ನಲ್ಲಿ ಪ್ರತಿ ಮೂರು ಗಂಟೆಗೊಮ್ಮೆ ಎಲ್ಲರ ಟೆಂಪ್ರೇಚರ್ ಚೆಕ್ ಮಾಡಲಾಗುತ್ತಿದೆ. ಜೊತೆಗೆ ಚಿತ್ರೀಕರಣ ನಡೆಯುವ ಸ್ಥಳವನ್ನು ಮೂರು ಗಂಟೆಗೊಮ್ಮೆ ಸ್ಯಾನಿಟೈಸ್​ ಮಾಡಲಾಗುತ್ತದೆ. ಎಲ್ಲಾ ಕಲಾವಿದರು ಕಡ್ಡಾಯವಾಗಿ ಮಾಸ್ಕ್​​​​ ಹಾಗೂ ಗ್ಲೌಸ್​​​​​​​​ ಧರಿಸುತ್ತಾರೆ. ಇದರಿಂದ ಕೊರೊನಾ ವೈರಸ್ ಒಕ್ಕರಿಸುವ ಭಯವಿರುವುದಿಲ್ಲ ಎನ್ನುತ್ತಾರೆ ಮೋಕ್ಷಿತಾ.

Paru shooting set
ಮೋಕ್ಷಿತಾ ಪೈ

ಧಾರಾವಾಹಿ ನಿರ್ಮಾಪಕರು ನಮ್ಮೆಲ್ಲರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದಾರೆ. ಶೂಟಿಂಗ್ ಸೆಟ್​​​​ಗೆ ನಾವು ಊಟ ತೆಗೆದುಕೊಂಡು ಹೋಗುತ್ತಿರಲಿಲ್ಲ. ನಿರ್ಮಾಪಕರೇ ನಮ್ಮೆಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲ ನಮ್ಮೆಲ್ಲರ ಹಿತದೃಷ್ಟಿಯಿಂದ ಹೊರಾಂಗಣ ಚಿತ್ರೀಕರಣ ಮಾಡದೆ ಒಳಾಂಗಣ ಚಿತ್ರೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು ಎಂದು ಪಾರು ಅಲಿಯಾಸ್ ಮೋಕ್ಷಿತಾ ಲಾಕ್​​ಡೌನ್ ನಂತರದ ಶೂಟಿಂಗ್ ದಿನಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

Last Updated : Jun 25, 2020, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.