ETV Bharat / sitara

ಮತ್ತೆ ನಿಮ್ಮನ್ನೆಲ್ಲಾ ನಕ್ಕು ನಗಿಸಲು ಬರುತ್ತಿದ್ದಾರೆ ಕಾಮಿಡಿ ಕಿಲಾಡಿಗಳು..ಶೀಘ್ರವೇ ಸೀಸನ್-3 ಆರಂಭ - ಶಿವರಾಜ್​ ಕೆ.ಆರ್. ಪೇಟೆ

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಮತ್ತೆ ಪ್ರೇಕ್ಷಕರನ್ನು ನಕ್ಕು ನಗಿಸಲು ಬರುತ್ತಿದೆ. ಇದೇ ಶನಿವಾರದಿಂದ ಸೀಸನ್ 3 ಆರಂಭವಾಗಲಿದ್ದು ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ರಕ್ಷಿತಾ ಪ್ರೇಮ್, ನಟ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್ ಇರಲಿದ್ದಾರೆ.

ಕಾಮಿಡಿ ಕಿಲಾಡಿಗಳು
author img

By

Published : Aug 27, 2019, 11:44 PM IST

ಖಾಸಗಿ ವಾಹಿನಿಯ ಖ್ಯಾತ ರಿಯಾಲಿಟಿ ಶೋಗಳಲ್ಲಿ 'ಕಾಮಿಡಿ ಕಿಲಾಡಿಗಳು' ಕೂಡಾ ಒಂದು. ಈ ಶೋನ ಮೊದಲ ಸಂಚಿಕೆಯಲ್ಲಿ ಭಾಗವಹಿಸಿದ್ದ ನಯನಾ, ಶಿವರಾಜ್​ ಕೆ.ಆರ್. ಪೇಟೆ, ದಿವ್ಯಶ್ರೀ, ಗೋವಿಂದೇ ಗೌಡ ಹಾಗೂ ಇನ್ನಿತರರು ಇದೀಗ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.

ಎರಡನೇ ಸೀಸನ್​​ನ ಕೆಲವು ಸ್ಪರ್ಧಿಗಳು ಕೂಡಾ ಮೊದಲ ಸೀಸನ್ ಸ್ಪರ್ಧಿಗಳ ಹಾದಿ ಹಿಡಿದಿದ್ದಾರೆ. ಇದೀಗ ಸೀಸನ್ 3 ಮತ್ತೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಬರುತ್ತಿದೆ. ಅದೂ ಕೂಡಾ ಈ ವಾರದಿಂದಲೇ. 'ಕಾಮಿಡಿ ಕಿಲಾಡಿಗಳು -3' ಇದೇ ಶನಿವಾರ ಹಾಗೂ ಭಾನುವಾರ ಅಮದರೆ ಆಗಸ್ಟ್​ 31 ರಿಂದ ಸಂಜೆ 7.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಈ ಬಾರಿಯ ಪ್ರೋಮೋ ಕೂಡಾ ವಿಭಿನ್ನವಾಗಿ ಮೂಡಿಬಂದಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ಸಾವಿರಾರು ಉತ್ಸಾಹಿ ಹಾಗೂ ಪ್ರತಿಭಾವಂತ ಕಲಾವಿದರು ಆಡಿಷನ್​​ನಲ್ಲಿ ಭಾಗವಹಿಸಿದ್ದರು. ಅವರಲ್ಲಿ ಆಯ್ಕೆಯಾದ ಪ್ರತಿಭಾನ್ವಿತರು ಕಾಮಿಡಿ ಕಿಲಾಡಿ ವೇದಿಕೆ ಮುಖಾಂತರ ಕರ್ನಾಟಕಕ್ಕೆ ಪರಿಚಯವಾಗಲಿದ್ದಾರೆ. ಈ ಮನರಂಜನಾ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ನಿರ್ದೇಶಕ ಯೋಗರಾಜ್ ಭಟ್, ಜಗ್ಗೇಶ್ ಹಾಗೂ ನಟಿ ರಕ್ಷಿತಾ ಪ್ರೇಮ್ ಇರಲಿದ್ದಾರೆ. ಮಾಸ್ಟರ್ ಆನಂದ್ ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದಾರೆ.

  • " class="align-text-top noRightClick twitterSection" data="">

Intro:Body:ಕಿರುತೆರೆಯ ಮತ್ತೊಂದು ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿ'ಗಳು ಮತ್ತೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಬರುತ್ತಿದೆ. ಅದು ಈ ವಾರದಿಂದಲೇ.
ಕಾಮಿನೀಡಿ ಕಿಲಾಡಿಗಳು ಸೀಸನ್ 3 ಇದೇ ಶನಿವಾರ ಮತ್ತು ಭಾನುವಾರದಂದುಅಂದರೆ ಆ.31 ರಿಂದ ಸಂಜೆ 7.30ಕ್ಕೆ ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ನಟ ಜಗ್ಗೇಶ್ ಟ್ವಿಟ್ ಮಾಡಿದ್ದಾರೆ. ಅಲ್ಲದೇ ಪ್ರೊಮೋ ಕೂಡ ಈ ಭಾರಿ ವಿಭಿನ್ನವಾಗಿ ಮೂಡಿಬಂದಿದೆ.
ರಾಜ್ಯದ 9 ಜಿಲ್ಲೆಗಳಲ್ಲಿ ಸಾವಿರಾರು ಉತ್ಸಾಹಿ ಹಾಗೂ ಪ್ರತಿಭಾವಂತ ಕಲಾವಿದರು ಆಡಿಷನ್ ಅಲ್ಲಿ ಭಾಗವಹಿಸಿದ್ದರು. ಅವರಲ್ಲಿ ಆಯ್ಕೆಯಾದ ಪ್ರತಿಭಾನ್ವಿತರು ಕಾಮಿಡಿ ಕಿಲಾಡಿ ವೇದಿಕೆ ಮುಖಾಂತರ ಕರ್ನಾಟಕಕ್ಕೆ ಪರಿಚಯವಾಗಳಿದ್ದಾರೆ.
ಈ ಕಾಮಿಡಿ ಕಿಲಾಡಿಗಳ ಮನರಂಜನಾ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ನಿರ್ದೇಶಕ ಯೋಗರಾಜ್ ಭಟ್, ಜಗ್ಗೇಶ್ ಹಾಗೂ ನಟಿ ರಕ್ಷಿತಾ ಪ್ರೇಮ್ ಇರಲಿದ್ದಾರೆ. ಮಾಸ್ತರ್ ಆನಂದ್ ನಿರೂಪಿಸಲಿದ್ದಾರೆ.

https://twitter.com/Jaggesh2/status/1165961970425585664?s=19

https://www.facebook.com/378024258971732/posts/2385595861547885/
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.