ETV Bharat / sitara

ಶೀಘ್ರದಲ್ಲೇ ಬರುತ್ತಿದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್​​ಶಿಪ್- 2 - ರಿಯಾಲಿಟಿ ಶೋ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್​-2 ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ. ಕಳೆದ ಮೂರು ಸೀಸನ್​ಗಳ ಕಲಾವಿದರು ಚಾಂಪಿಯನ್​​ಶಿಪ್​-2ರಲ್ಲಿ ಭಾಗವಹಿಸಲಿದ್ದಾರೆ.

Comedy Kiladigalu Championship -2
ಕಾಮಿಡಿ ಕಿಲಾಡಿಗಳು
author img

By

Published : Aug 17, 2020, 11:39 AM IST

ಕನ್ನಡ ಕಿರುತೆರೆಯಲ್ಲಿ ಮತ್ತೆ ರಿಯಾಲಿಟಿ ಶೋಗಳ ದರ್ಬಾರ್ ಶುರುವಾಗಲಿದೆ. ಇಷ್ಟು ದಿನ ಲಾಕ್​​ಡೌನ್​​ನಿಂದಾಗಿ ಸ್ಥಗಿತವಾಗಿದ್ದ ಶೋಗಳು ಇದೀಗ ಒಂದೊಂದಾಗಿ ಕಿರುತೆರೆಗೆ ಲಗ್ಗೆ ಇಡುತ್ತಿವೆ. ನವಿರಾದ ಹಾಸ್ಯದಿಂದ ಜನಮನ ಗೆದ್ದ ಕಾಮಿಡಿ ಕಿಲಾಡಿಗಳು ಇದೀಗ ಮತ್ತೊಮ್ಮೆ ತೆರೆ ಮೇಲೆ ಬರಲು ರೆಡಿಯಾಗಿದೆ.

ಝೀ ಕನ್ನಡದ ಕಾಮಿಡಿ ಕಿಲಾಡಿಗಳು ಚಾಂಪಿಯನ್​​ಶಿಪ್- 2 ಶೀಘ್ರದಲ್ಲೇ ಆರಂಭವಾಗಲಿದೆ. ಆ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಲು ಝೀ ಕನ್ನಡ ಸಜ್ಜಾಗಿದೆ. ಜನಪ್ರಿಯ ಶೋ ಆಗಿರುವ ಕಾಮಿಡಿ ಕಿಲಾಡಿಗಳು ಮೂರು ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿತ್ತು. ಈ ಮೂಲಕ ಎಲೆಮರೆ ಕಾಯಿಯಂತಿದ್ದ ಹಲವು ಪ್ರತಿಭೆಗಳನ್ನು ಮುನ್ನೆಲೆಗೆ ತಂದಿದೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದ ಹಲವು ಪ್ರತಿಭೆಗಳು ಇಂದು ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕಾಮಿಡಿ ಸಂಸ್ಥಾನದ ದಿಗ್ಗಜರ ಯಜಮಾನಿಕೆಯಲ್ಲಿ ನಗುವಿನ ಮಹಾಯುದ್ಧವನ್ನೇ ನಡೆಸಲು ಈ ಮೂರು ಸೀಸನ್​​ನ ಕಾಮಿಡಿ ಕಲಾವಿದರು ಸಜ್ಜಾಗಿದ್ದಾರೆ. ಈಗಾಗಲೇ ಕಾಮಿಡಿ ಕಿಲಾಡಿಗಳು ಚಾಂಪಿಯನ್​​​ಶಿಪ್-2 ರ ಪ್ರೋಮೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಮಾಸ್ಟರ್ ಆನಂದ್ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಚಾಂಪಿಯನ್​​ಶಿಪ್​​ನಲ್ಲಿ ನಿರ್ದೇಶಕ ಯೋಗರಾಜ್ ಭಟ್, ನವರಸ ನಾಯಕ ಜಗ್ಗೇಶ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.