ETV Bharat / sitara

'ಮಗಳು ಜಾನಕಿ' ಪ್ರಸಾರ ಕೂಡಾ ಸ್ಥಗಿತ...ನಿರ್ದೇಶಕ ಸೀತಾರಾಮ್ ನೀಡಿದ ಕಾರಣ ಏನು...?

author img

By

Published : May 27, 2020, 8:40 PM IST

ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಪ್ರಸಾರ ನಿಲ್ಲುತ್ತಿದೆ. ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿರುವುದರಿಂದ ಆ ಚಾನೆಲ್​ನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಕೂಡಾ ಪ್ರಸಾರ ನಿಲ್ಲಿಸುತ್ತಿವೆ ಎಂದು ಟಿ. ಎನ್​. ಸೀತಾರಾಮ್​ ಹೇಳಿದ್ದಾರೆ.

colors super channel will temporary stop work
'ಮಗಳು ಜಾನಕಿ' ಪ್ರಸಾರ ಸ್ಥಗಿತ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಗಳು ಜಾನಕಿ' ಧಾರಾವಾಹಿ ಸ್ಥಗಿತಗೊಳ್ಳುತ್ತಿರುವ ಬಗ್ಗೆ ನಿರ್ದೇಶಕ ಟಿ.ಎನ್. ಸೀತಾರಾಮ್ ಸ್ಪಷ್ಟಪಡಿಸಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳು ಕೂಡಾ ನಿಲ್ಲಲಿವೆ ಎನ್ನಲಾಗಿದೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟಿ.ಎನ್. ಸೀತಾರಾಮ್​​ ಧಾರಾವಾಹಿ ಪ್ರಸಾರ ನಿಲ್ಲುವ ವಿಚಾರವಾಗಿ ತಿಳಿಸಿದ್ದಾರೆ. 'ಮಗಳು ಜಾನಕಿ' ಯ ಆತ್ಮೀಯ ಬಂಧುಗಳಿಗೆ ನಮಸ್ಕಾರ. ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಅಕ್ಟೋಬರ್​​​​​​ವರೆಗೆ ಸ್ಥಗಿತಗೊಳ್ಳುತ್ತಿದೆ. ಅದಕ್ಕೂ ಮುನ್ನ ಜೂನ್ 1 ರಿಂದ ರಾತ್ರಿ 9.30 ಕ್ಕೆ ನಾವು ಹಿಂದೆ ಶೂಟಿಂಗ್ ಮುಗಿಸಿದ್ದ 'ಮಗಳು ಜಾನಕಿ'ಯ ಹೊಸ ಎಪಿಸೋಡ್​​​​​​​ಗಳು ಸುಮಾರು ಎರಡು ವಾರಗಳ ಕಾಲ ಪ್ರಸಾರವಾಗುತ್ತಿದೆ. ವೀಕ್ಷಕರು ಈ ಎಪಿಸೋಡ್​​​​​ಗಳನ್ನು ನೋಡಬೇಕಾಗಿ ಪ್ರಾರ್ಥನೆ. ನೀವು 'ಮಗಳು ಜಾನಕಿ'ಗೆ ತೋರಿದ ಪ್ರೀತಿ ಕಂಡು ನನ್ನ ಹೃದಯ ಆರ್ದ್ರಗೊಂಡಿದೆ.. ನಿಮಗೆಲ್ಲಾ ಧನ್ಯವಾದಗಳು. ಮತ್ತೊಮ್ಮೆ ನಿಮ್ಮೊಂದಿಗೆ ಮಾತನಾಡುತ್ತೇನೆ. ಪ್ರೀತಿ ತುಂಬಿದ ನಮನಗಳು' (ಬೇರೆ ವಾಹಿನಿಯಲ್ಲಿ ಧಾರಾವಾಹಿ ಮುಂದುವರೆಸಬೇಕೆಂದು ಅನೇಕರು ಕೇಳುತ್ತಿದ್ದೀರಿ. ಕಾರಣಾಂತರಗಳಿಂದ ಅದು ಸಾಧ್ಯವಿಲ್ಲ) ಎಂದು ಸೀತಾರಾಮ್ ಬರೆದುಕೊಂಡಿದ್ದಾರೆ.

ಧಾರಾವಾಹಿ ನಾಯಕಿ ಜಾನಕಿ ಅಲಿಯಾಸ್ ಗಾನವಿ ಅವರು ಕೂಡಾ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ಎಪಿಸೋಡ್​​​​​ಗಳು ಬಹಳ ಚೆನ್ನಾಗಿದ್ದವು. ಧಾರಾವಾಹಿ ಸರಿಯಾಗಿ ಅಂತ್ಯ ಕಾಣಬೇಕಾಗಿತ್ತು. ಧಾರಾವಾಹಿ ಹಾಗೂ ಈ ವಾಹಿನಿಗೆ ಬಹಳ ಅಭಿಮಾನಿಗಳಿದ್ದಾರೆ. ಈಗ ಎಲ್ಲರಿಗೂ ನಿರಾಸೆಯಾಗುತ್ತಿದೆ. ಹೊಸ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕರೆ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ.

ಧಾರಾವಾಹಿ ನಾಯಕ ನಿರಂಜನ್ ಅಲಿಯಾಸ್ ರಾಕೇಶ್ ಮಯ್ಯ ಕೂಡಾ ಬೇಸರ ವ್ಯಕ್ತಪಡಿಸಿದ್ದು, ಕ್ಲೈಮ್ಯಾಕ್ಸ್​​​​​​​​​​​​​​ಗಾಗಿ ಕಾತುರನಾಗಿದ್ದೆ. ಆದರೆ ಧಾರಾವಾಹಿ ಅರ್ಧಕ್ಕೆ ನಿಂತಿರುವುದು ಬೇಸರ ತಂದಿದೆ. ಹೊಸ ಧಾರಾವಾಹಿಗಳಿಗೆ ಅವಕಾಶ ಬರುತ್ತಿವೆ, ಇದರ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ.

ಜಾನಕಿಯ ನಿಜವಾದ ತಂದೆ ಭಾರ್ಗಿ ಅವರೇನಾ..? ನಿರಂಜನ್ ತಂದೆಯನ್ನು ಕೊಲೆ ಮಾಡಿದ್ದು ಯಾರು..? ಸೇರಿದಂತೆ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದಿವೆ. ಈ ಪ್ರಶ್ನೆಗಳಿಗೆ ಉತ್ತರ ಸಿಗದೆ 'ಮಗಳು ಜಾನಕಿ'ಯ ಅಭಿಮಾನಿಗಳು ಬೇಸರಗೊಂಡಿರುವುದಂತೂ ನಿಜ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.