ETV Bharat / sitara

ಅಸ್ಸಾಂ ಸಹೋದರಿಯರ ಕನ್ನಡ ಜಾನಪದ ಗೀತೆ ವೈರಲ್​​...ನಂದಿ ಸಿಸ್ಟರ್ಸ್​​ ಹಾಡಿಗೆ ಕನ್ನಡಿಗರು ಫಿದಾ...!

author img

By

Published : Dec 9, 2020, 1:25 PM IST

Updated : Dec 9, 2020, 1:31 PM IST

ಅಸ್ಸಾಂಗೆ ಸೇರಿದ ,ನಂದಿ ಸಹೋದರಿಯರು ಎಂದೇ ಖ್ಯಾತರಾದ ಯುವತಿಯರು ಕನ್ನಡದ ಮುಂಜಾನೆದ್ದು ಕುಂಬಾರಣ್ಣ...ಜಾನಪದ ಗೀತೆಯನ್ನು ಹಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಬೆಂಗಾಳಿಯ ಖ್ಯಾತ ಹಾಡುಗಳನ್ನು ಕೂಡಾ ಈ ಸಹೋದರಿಯರು ಹಾಡಿದ್ದಾರೆ.

Nandy Sisters
ನಂದಿ ಸಹೋದರಿಯರು

ಸಂಗೀತಕ್ಕೆ ವಯಸ್ಸು, ಭಾಷೆಯ ಮಿತಿಯಿಲ್ಲ. ಯಾರು ಯಾವ ಭಾಷೆಯ ಸಂಗೀತವನ್ನಾದರೂ ಕಲಿಯಬಹುದು, ಹಾಡಬಹುದು. ಆದರೆ ಕೆಲವೊಂದು ಭಾಷೆಗಳನ್ನು ಕಲಿಯುವುದು ಅಷ್ಟು ಸುಲಭದ ಮಾತಲ್ಲ. ಅಂತದರಲ್ಲಿ ಅಸ್ಸಾಂ ಯುವತಿಯರಿಬ್ಬರು ಕನ್ನಡದ ಜಾನಪದ ಗೀತೆಯೊಂದನ್ನು ಕಲಿತು ಹಾಡಿದ್ದಾರೆ ಎಂದರೆ ಅದು ಕನ್ನಡಿಗರಿಗೆ ನಿಜಕ್ಕೂ ಖುಷಿಯ ವಿಚಾರ.

  • " class="align-text-top noRightClick twitterSection" data="">

ಅಸ್ಸಾಂಗೆ ಸೇರಿದ ಅಂತರ ನಂದಿ, ಅಂಕಿತ ನಂದಿ ಎಂಬ ಇಬ್ಬರು ಸಹೋದರಿಯರು 'ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ'.....ಖ್ಯಾತ ಕನ್ನಡ ಜಾನಪದ ಗೀತೆಯನ್ನು ಕಲಿತು ಹಾಡಿದ್ದಾರೆ. ಇವರಿಬ್ಬರೂ ಅಸ್ಸಾಂನಲ್ಲಿ ನಂದಿ ಸಹೋದರಿಯರು ಎಂದೇ ಫೇಮಸ್. ಕೊಡಗು ಶೈಲಿಯ ಸೀರೆ ಧರಿಸಿ, ಮಿನಿ ಗಿಟಾರ್ ಹಿಡಿದು ಕೇಳಿದವರು ತಲೆದೂಗುವಂತೆ ಮುಂಜಾನೆದ್ದು ಕುಂಬಾರಣ್ಣ ಹಾಡನ್ನು ಹಾಡಿದ್ದಾರೆ. ಹಾಡು ಆರಂಭಿಸುವ ಮುನ್ನ "ನಾನು ಅಂತರ, ನಾನು ಅಂಕಿತ, ನಾವು ನಂದಿ ಸಿಸ್ಟರ್ಸ್, ಈ ದಿನ ನಾವು ಮೊದಲ ಬಾರಿಗೆ ಕನ್ನಡದ ಹಾಡೊಂದನ್ನು ಹಾಡುವ ಪ್ರಯತ್ನ ಮಾಡಿದ್ದೇವೆ. ನಮ್ಮ ಉಚ್ಛಾರಣೆಯಲ್ಲಿ ತಪ್ಪಿದ್ದಲ್ಲಿ ಕ್ಷಮಿಸಿ, ಹಾಗೂ ನಿಮ್ಮ ಸಲಹೆಯೊಂದಿಗೆ ಸಹಕರಿಸಿ" ಎಂದು ಮನವಿ ಮಾಡಿದ್ದಾರೆ. ನಂದಿ ಸಹೋದರಿಯರ ಈ ವಿಡಿಯೋ ವೈರಲ್ ಆಗುತ್ತಿದ್ದು ಇದನ್ನು ಕೇಳಿದ ಕನ್ನಡಿಗರು ಈ ಅಪರೂಪದ ಸಹೋದರಿಯರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂತರ ಹಾಗೂ ಅಂಕಿತ ಕನ್ನಡ ಮಾತ್ರವಲ್ಲದೆ, ಗುಜರಾತಿ, ಬೆಂಗಾಳಿ, ತೆಲುಗು, ತಮಿಳು, ಮಲಯಾಳಂ ಹಾಡುಗಳನ್ನು ಕೂಡಾ ಹಾಡಿದ್ದಾರೆ. ತೆಲುಗಿನ 'ಪ್ರೇಮ' ಚಿತ್ರದ ಇಳಯರಾಜ ಸಂಗೀತ ನಿರ್ದೇಶನದ 'ಈನಾಡೇ ಏದೋ ಆಯಿಂದಿ....', 2 ವರ್ಷಗಳ ಹಿಂದೆ ವೈರಲ್ ಆಗಿದ್ದ ಮಲಯಾಳಂನ 'ಜಿಮ್ಮಿಕಿ ಕಮ್ಮಲ್​....'ತಮಿಳಿನ ಇಳಯರಾಜ ಸಂಗೀತ ನಿರ್ದೇಶನದ 'ಅಪೂರ್ವ ಸಹೋದರರ್ಗಳ್'​ ಚಿತ್ರದ 'ಅಣ್ಣಾತ ಆಡುರಾರ್​ ವತ್ತುಕೋ ವತ್ತುಕೋ.... ಹಾಡನ್ನು ಸ್ವಲ್ಪವೂ ತಪ್ಪಿಲ್ಲದೆ ಹಾಡಿದ್ದಾರೆ. ಈ ತಮಿಳು ಹಾಡನ್ನು ಎಸ್​​​.ಪಿ. ಬಾಲಸುಬ್ರಹ್ಮಣ್ಯಂ ನಿಧನರಾದಾಗ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹಾಡಿದ್ದಾರೆ. ವಿಶೇಷ ಎಂದರೆ ಹಾಡುಗಳನ್ನು ಹಾಡುವಾಗ ಅಂತರ ಹಾಗೂ ಅಂಕಿತ ಇಬ್ಬರೂ ಆಯಾ ರಾಜ್ಯದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ.

ಇವರಿಬ್ಬರಲ್ಲಿ ಅಂತರ ನಂದಿ ಹಿಂದಿ ಸಿನಿಮಾ ಹಿನ್ನೆಲೆ ಗಾಯಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಜೀ ವಾಹಿನಿಯ ಖ್ಯಾತ ಕಾರ್ಯಕ್ರಮ ಸರಿಗಮಪ-2009 ಕಾರ್ಯಕ್ರಮದಲ್ಲಿ ಅಂತರ ಟಾಪ್ 3 ಸ್ಥಾನ ಗಳಿಸಿದ್ದರು. ಖ್ಯಾತ ಗಾಯಕ ಉದಿತ್ ನಾರಾಯಣ್, ಸಂಗೀತ ನಿರ್ದೇಶಕ ಎ.ಆರ್​​.ರೆಹಮಾನ್​​​​​ ಅಂತರಾ ಧ್ವನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಮ್ಯೂಸಿಕ್ ಸ್ಟಾರ್ ವಾರ್ಸ್ 2013​, ದೆಹಲಿ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ-2015, ಮುಂಬೈ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ-2015 ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೂಡಾ ಜಯ ಗಳಿಸಿದ್ದಾರೆ.

Last Updated : Dec 9, 2020, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.