ETV Bharat / sitara

ಮುಕ್ತಾಯದ ಹಂತದಲ್ಲಿರುವ ಅಚ್ಚು ಮತ್ತು ಗುಬ್ಬಿ ಲವ್​​ಸ್ಟೋರಿ - Small screen actress Seetavallabha

ವಿಭಿನ್ನ ಕಥೆ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕಲರ್ಸ್ ಕನ್ನಡ ವಾಹಿನಿಯ ಸೀತಾ ವಲ್ಲಭ ಇನ್ನು ಎರಡು ವಾರಗಳಲ್ಲಿ ಪ್ರಸಾರ ನಿಲ್ಲಿಸಲಿದೆ. ಧಾರಾವಾಹಿ ಅಂತ್ಯ ಹೇಗೆ ಇರಲಿದೆ ಎಂಬ ಕುತೂಹಲ ವೀಕ್ಷಕರಿಗೆ ಇದ್ದು ಕೆಲವೇ ದಿನಗಳಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ.

Acchu and Gubbi love story going to end
ಸೀತಾ ವಲ್ಲಭ'
author img

By

Published : Aug 5, 2020, 6:31 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಇತ್ತೀಚೆಗಷ್ಟೇ ಎರಡು ವರ್ಷಗಳನ್ನು ಪೂರೈಸಿದ 'ಸೀತಾ ವಲ್ಲಭ' ಧಾರಾವಾಹಿ ಮುಕ್ತಾಯದ ಹಂತದಲ್ಲಿದೆ. ಇನ್ನೆರಡು ವಾರದಲ್ಲಿ ಧಾರಾವಾಹಿ ತನ್ನ ಪ್ರಸಾರ ನಿಲ್ಲಿಸಲಿದೆ.

Acchu and Gubbi love story going to end
ಸುಪ್ರಿತಾ ಸತ್ಯನಾರಾಯಣ

ಅಚ್ಚು ಮತ್ತು ಗುಬ್ಬಿಯ ನಡುವಿನ ನವಿರಾದ ಪ್ರೇಮಕಥೆಯನ್ನು ಒಳಗೊಂಡಿರುವ 'ಸೀತಾ ವಲ್ಲಭ' ಧಾರಾವಾಹಿ ಮುಕ್ತಾಯದ ಹಂತ ತಲುಪಿರುವುದು ಕಿರುತೆರೆ ವೀಕ್ಷಕರಿಗೆ ನಿಜಕ್ಕೂ ಬೇಸರ ತಂದಿದೆ. ಈ ಧಾರಾವಾಹಿಯಲ್ಲಿ ನಾಯಕ ಅಚ್ಚು ಅಲಿಯಾಸ್ ಆರ್ಯವಲ್ಲಭ ಆಗಿ ಜಗನ್ ಚಂದ್ರಶೇಖರ್ ಮತ್ತು ನಾಯಕಿ ಗುಬ್ಬಿ ಅಲಿಯಾಸ್ ಮೈಥಿಲಿ ಆಗಿ ಸುಪ್ರಿತಾ ಸತ್ಯನಾರಾಯಣ ನಟಿಸಿದ್ದಾರೆ.

Acchu and Gubbi love story going to end
ಜಗನ್ ಚಂದ್ರಶೇಖರ್​

ಅಚ್ಚು ಮತ್ತು ಗುಬ್ಬಿ ಬಾಲ್ಯದ ಸ್ನೇಹಿತರು. ಬಾಲ್ಯದಲ್ಲಿ ಆಕಸ್ಮಿಕವಾಗಿ ಪರಿಚಿತರಾಗುವ ಅಚ್ಚು ಮತ್ತು ಗುಬ್ಬಿ ಉತ್ತಮ ಸ್ನೇಹಿತರಾಗಿರುತ್ತಾರೆ. ಅಚ್ಚು ತನ್ನ ಬಳಿ ಇರುವಷ್ಟು ದಿನ ಗುಬ್ಬಿ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಒಂದಷ್ಟು ದಿನ ಜೊತೆಯಾಗಿ ಕಾಲ ಕಳೆದ ನಂತರ ಇಬ್ಬರೂ ಅನಿವಾರ್ಯ ಕಾರಣಗಳಿಂದ ದೂರವಾಗುತ್ತಾರೆ. ಅಚ್ಚು ಬೆಂಗಳೂರು ಸೇರಿದರೆ, ಅನಾಥಳಾಗಿರುವ ಗುಬ್ಬಿಯನ್ನು ದಂಪತಿಯೊಬ್ಬರು ದತ್ತು ಪಡೆಯುತ್ತಾರೆ.

Acchu and Gubbi love story going to end
ಸೀತಾ ವಲ್ಲಭದ ಗುಬ್ಬಿ

ಆದರೆ ಅಚ್ಚು ಹಾಗೂ ಗುಬ್ಬಿ ಮತ್ತೆ ಜೊತೆಯಾಗಬೇಕು ಎಂಬುದು ವಿಧಿ ನಿಯಮವಾಗಿತ್ತೋ ಏನೋ..? ಗುಬ್ಬಿ ಮತ್ತು ಅಚ್ಚು ಮದುವೆಯಾಗುತ್ತಾರೆ. ಗುಬ್ಬಿ ಯನ್ನು ಹುಡುಕುತ್ತಿರುವ ಅಚ್ಚುಗೆ ತಾನು ಮದುವೆಯಾಗಿರುವ ಮೈಥಿಲಿಯೇ ಗುಬ್ಬಿ ಎಂದು ತಿಳಿಯುತ್ತದೆ. ಪ್ರೀತಿ ವಿಶ್ವಾಸದಿಂದ ಮನೆಯವರ ಮನ ಸೆಳೆದಿರುವ ಮೈಥಿಲಿ, ಮನೆ ಬಿಟ್ಟು ಹೋದ ಆರ್ಯನ ಅತ್ತೆ ದೇವಕಿಯನ್ನು ಮರಳಿ ಮನೆಗೆ ಕರೆತರುತ್ತಾಳೆ.

Acchu and Gubbi love story going to end
ಸೀತಾ ವಲ್ಲಭದ ಅಚ್ಚು

ಆರ್ಯನ ಅತ್ತೆ ದೇವಕಿಯ ಮಗಳೇ ಮೈಥಿಲಿ ಎಂಬ ಸತ್ಯ ಮನೆಯವರಿಗೆ ತಿಳಿಯುವುದಾ..? ದೇವಕಿ ಮತ್ತು ಮೈಥಿಲಿ ದೂರ ಆಗುವುದಕ್ಕೆ ಕಲ್ಯಾಣಿಯೇ ಮೂಲ ಕಾರಣ ಎಂದು ಮನೆಯವರಿಗೆ ತಿಳಿಯಲಿದೆಯಾ? ಕಲ್ಯಾಣಿಯ ಮನೆಹಾಳು ಕೆಲಸ ತಿಳಿದರೆ ಮನೆಯವರು ಏನು ಮಾಡಬಹುದು..? ಧಾರಾವಾಹಿ ಯಾವ ರೀತಿಯಲ್ಲಿ ಅಂತ್ಯ ಕಾಣಬಹುದು ಎಂಬ ಕುತೂಹಲ ವೀಕ್ಷಕರಿಗೆ ಇದೆ. ಈ ಕುತೂಹಲ ಇನ್ನೆರಡು ವಾರಗಳಲ್ಲಿ ತಣಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.