ಲಾಸ್ ಏಂಜಲೀಸ್: ಹಾಲಿವುಡ್‌ನ ಕಿರುತೆರೆ ಮತ್ತು ಸಿನಿಮಾದಲ್ಲಿ ಅತ್ಯುತ್ತಮ ಚಿತ್ರಗಳನ್ನು ಗುರುತಿಸಿ ಗೌರವಿಸುವ 78ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ-2021 ಪ್ರಕಟಿಸಲಾಗಿದ್ದು, 'ನಾಮ್ದ್ ಲ್ಯಾಂಡ್' ಅತ್ಯುತ್ತಮ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಆಂಡ್ರಾ ಡೇ ಅವರು ಅತ್ಯುತ್ತುಮ ನಟಿ ಪ್ರಶಸ್ತಿ, ಸಚಾ ಬಾರನ್ ಕೊಹೆನ್ ಅತ್ಯುತ್ತುಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನರಾಗಿರುವ ನಾಮ್ದ್ ಲ್ಯಾಂಡ್ ಚಿತ್ರದ ನಿರ್ದೇಶಕ ಜೋಹಾಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.
ಕೊರೊನಾ ಸೋಂಕಿನ ಭೀತಿ ನಡುವೆಯೂ ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಲಿವುಡ್‌ನ ಕಿರುತೆರೆ ಮತ್ತು ಸಿನಿಮಾದ ಅನೇಕ ತಂತ್ರಜ್ಞರು ಪ್ರಶಸ್ತಿ ಪಡೆದು ಸಂಭ್ರಮಿಸಿದರು.
ಪ್ರಶಸ್ತಿ ವಿವರ:
ಅತ್ಯುತ್ತಮ ನಟಿ- ಅಂಡ್ರಾ ಡೇ (ದಿ ಯುನೈಟೆಡ್ ಸ್ಟೇಟ್ಸ್ ವರ್ಸಸ್ ಬೆಲ್ಲಿ ಹಾಲಿಡೇ)
ಅತ್ಯುತ್ತಮ ನಟ - ಸಚಾ ಬ್ಯಾರನ್ ಕೊಚೆನ್ ( ಬೋರಟ್ ಸಬ್ ಸೀಕ್ವೆಂಟ್)
ಅತ್ಯುತ್ತಮ ಕಾಮಿಡಿ ನಟಿ- ರೋಸಮುಡ್ ಪಿಕೆ
ಅತ್ಯುತ್ತಮ ನಿರ್ದೇಶಕಿ - ಚೊಲೇ ಜಾಹೋ ( ನಾಮದ್ ಲ್ಯಾಂಡ್)
ಅತ್ಯುತ್ತಮ ಚಿತ್ರ- ನಾಮದ್ ಲ್ಯಾಂಡ್
ಅತ್ಯುತ್ತಮ ನಟನೆ- ಚೌಡ್ ವಿಕ್ ಬೋಸ್ ಮೆನ್( ಮಾ ರೈನೀ ಬ್ಲಾಕ್ ಬಾಟಮ್)
ಅತ್ಯುತ್ತಮ ಟಿವಿ ಧಾರಾವಾಹಿ- ದಿ. ಕ್ವೀನ ಗ್ಯಾಂಬಿಟ್
ಪೋಷಕ ಕಲಾವಿದೆ - ಗಿಲನ್ ಅಂಡರ್ ಸನ್( ದಿ ಕ್ರೌನ್)
ಸೆಸಿಲ್ ಬಿ ಡೆ ಮಿಲ್ಲೆ ಪ್ರಶಸ್ತಿ- ಜಾನೇ ಪೋಂಡಾ
ಕಿರುತೆರೆ ಅತ್ಯುತ್ತಮ ನಟ- ಜೋಶ್ ಒ ಕೋನಾರ್ ( ದಿ ಕ್ರೌನ್) ಅವರಿಗೆ ಲಭಿಸಿದೆ.