ಬೆಂಗಳೂರು : ಎಸ್ಪಿ ಬಾಲಸುಬ್ರಮಣ್ಯಂ ಅವರು ಎಂಜಿನಿಯರ್ ಆಗಿದ್ದರೆ ಹೇಗಿರುತ್ತಿತ್ತು. ನೀವು ಊಹಿಸಲು ಅಸಾಧ್ಯ ಅಲ್ಲವೇ?
ಗಾಯಕ ಆಗದಿದ್ದರೆ ಅವರು ಖಂಡಿತವಾಗಿಯೂ ಒಬ್ಬ ಎಂಜಿನಿಯರ್ ಆಗುತ್ತಿದ್ದರಂತೆ. ಅನಂತಪುರದ ಜೆಎನ್ಟಿಯು ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಸ್ಪಿಬಿ ಅವರು ತಮ್ಮ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದರು.
ಓದುವ ಸಮಯದಲ್ಲಿ ಮೆದುಳು ಜ್ವರ ಅಥವಾ ಟೈಫಾಯ್ಡ್ ಕಾಣಿಸಿದ್ದರಿಂದ ಅವರು ಎಂಜಿನಿಯರಿಂಗ್‌ನ ಅರ್ಧಕ್ಕೆ ಬಿಟ್ಟು ಗಾಯನ ಕ್ಷೇತ್ರದಲ್ಲಿ ಒಲವು ತೋರಿದರು.
ಆದರೂ ಎಂಜಿನಿಯರ್ ಆಗಲಿಲ್ಲ ಎನ್ನುವ ಕೊರಗು ಅವರಲ್ಲಿತ್ತು. ಹಾಗಾಗಿಯೇ, ಚೆನ್ನೈನ ಎಂಜಿನಿಯರ್ಸ್ ಇನ್ಸ್ಟಿಟ್ಯೂಷನ್ನಲ್ಲಿ ಅವರು ಅಸೋಸಿಯೇಷನ್ ಮೆಂಬರ್ ಆಗಿ ಸೇರಿದರು.