ETV Bharat / sitara

ನೋಡುಗನಿಗೆ ಕುತೂಹಲ ಮೂಡಿಸುತ್ತದೆ ’ಕನ್ನಡ್ ಗೊತ್ತಿಲ್ಲ’ - ಕನ್ನಡ್ ಗೊತ್ತಿಲ್ಲ ಸಿನಿಮಾ ವಿಮರ್ಶೆ

ಕನ್ನಡ್​​ ಗೊತ್ತಿಲ್ಲ ಸಿನಿಮಾ ಥ್ರಿಲ್ಲರ್ ಜೊತೆ ಕನ್ನಡಾಭಿಮಾನ ಸಾರುವ ಸಿನಿಮಾವಾಗಿದೆ. ಕನ್ನಡ ಮಾತನಾಡದ ಹೊರಗಿನವರಿಗೆ ಮತ್ತು ಬೆಂಗಳೂರಿಗರಿಗೆ ಬಿಸಿ ಮುಟ್ಟಿಸುವ ಚಿತ್ರ ಇದಾಗಿದೆ.

ನೋಡುಗನಿಗೆ ಕುತೂಹಲ ಮೂಡಿಸುತ್ತದೆ ಕನ್ನಡ್ ಗೊತ್ತಿಲ್ಲ
author img

By

Published : Nov 23, 2019, 3:39 PM IST

Updated : Nov 23, 2019, 3:49 PM IST

ಚಿತ್ರ : ಕನ್ನಡ್ ಗೊತ್ತಿಲ್ಲ

ನಿರ್ಮಾಪಕರು : ಕುಮಾರ ಕಂಠೀರವ

ನಿರ್ದೇಶಕ : ಮಯೂರ್ ರಾಘವೇಂದ್ರ

ಸಂಗೀತ : ನಕುಲ್ ಅಭಯಂಕರ್

ಛಾಯಾಗ್ರಹಣ : ಗಿರಿಧರ್ ದಿವಾನ್

ತಾರಾಗಣ : ಹರಿಪ್ರಿಯಾ, ಪವನ್ ಕುಮಾರ್, ಮಯೂರ್, ಸುಧಾರಾಣಿ, ಧರ್ಮಣ್ಣ ಹಾಗೂ ಇತರರು.

ಇದೊಂದು ಥ್ರಿಲ್ಲರ್ ಜೊತೆಗೆ ಕನ್ನಡ ಮಾತನಾಡದ ಹೊರಗಿನವರಿಗೆ ಮತ್ತು ಬೆಂಗಳೂರಿಗರಿಗೆ ಬಿಸಿ ಮುಟ್ಟಿಸುವ ಸಿನಿಮಾವಾಗಿದೆ. ಹಾಗೆ ನೋಡಿದರೆ ಒಂದು ಪಾತ್ರ ಇಡೀ ಚಿತ್ರದಲ್ಲಿ ಡೆಂಜರ್ ಆಯಿತು ಅನ್ನಿಸುವಷ್ಟರಲ್ಲಿ ನಿರ್ದೇಶಕ ಮಯೂರ್ ರಾಘವೇಂದ್ರ ಅಂತ್ಯ ಹಾಡಿದ್ದಾರೆ.

ಮೊದಲ ಸಿನಿಮಾದಲ್ಲಿ ಪ್ರೇಕ್ಷಕರನ್ನು ಹಿಡಿದು ಕೂಡಿಸುವ ಕಲೆ ಮಯೂರ್ ಅವರಿಗೆ ಗೊತ್ತಾಗಿದೆ. ಅದರ ಜೊತೆಗೆ ಅವರ ಚಿತ್ರಕಥೆ ದ್ವಿತೀಯಾರ್ಧ ಭರ್ಜರಿಯಾಗೆ ಇದೆ. ಸರಣಿ ಕೊಲೆ ಹಾಗೂ ಸರಣಿ ಅಪಹರಣದ ಸುತ್ತ ತಿರುಗುವ ಈ ಚಿತ್ರದಲ್ಲಿ ಕಡೆಯ 15 ನಿಮಿಷದವರೆವಿಗೂ ಪ್ರೇಕ್ಷಕ ತನ್ನ ಮನಸಿನಲ್ಲಿ ಯಾರು ಹೀಗೆಲ್ಲಾ ಮಾಡುತ್ತಿರುವುದು ಎಂದು ಲೆಕ್ಕ ಹಾಕುವಂತೆ ಮಾಡಿದ್ದಾರೆ,

ಪೊಲೀಸ್ ಇಲಾಖೆಯಲ್ಲಿ ಕಾಣೆ ಆದವರ ಬಗ್ಗೆ ಗಮನ ಹರಿಸಲು ಶ್ರುತಿ ಚಕ್ರವರ್ತಿ (ಹರಿಪ್ರಿಯಾ) ನೇಮಕ ಆಗುತ್ತದೆ. ಮೂರು ದಿವಸದಲ್ಲಿ ಎಂಟು ಅಪಹರಣ ಆದ ವ್ಯಕ್ತಿಗಳು ಯಾರು ಕನ್ನಡದವರಲ್ಲ ಎಂಬ ಮಾಹಿತಿ ಶ್ರುತಿ ಪತ್ತೆ ಹಚ್ಚುತ್ತಾಳೆ. ಇದರಿಂದ ಕುತೂಹಲದ ಜೊತೆಗೆ ನಿರ್ದೇಶಕರು ಗಾಬರಿ ಆಗುವ ಹಾಗೆ ಏನಾದರೂ ಹೇಳಲು ಹೊರಟಿದ್ದಾರಾ? ಎಂಬ ಆಲೋಚನೆ ಬರುವಂತಿದೆ.

haripriya
ಹರಿಪ್ರಿಯಾ

ಆದರೆ, ಇದಕ್ಕೆಲ್ಲ ಶ್ರುತಿ ಅವರ ಪತ್ತೇದಾರಿ ಕೆಲಸದಲ್ಲಿ ಉತ್ತರ ಸಿಗುತ್ತದೆ. ಯಾರು ಸರಣಿ ಅಪಹರಣ ಮಾಡಿದವರು, ಅದರ ಜೊತೆಗೆ ಕೊಲೆಗಳು ಸಹ ಏಕೆ ಆಯಿತು ಎಂಬ ವಿಚಾರ ನೀವು ಚಿತ್ರಮಂದಿರದಲ್ಲೇ ತಿಳಿಯಬೇಕು.

ಹರಿಪ್ರಿಯಾ ಮುದ್ದು ಮುದ್ದಾಗಿ ಕಾಣುವುದಷ್ಟೇ ಅಲ್ಲದೆ ಖಡಕ್ ಆಗಿ ಅಭಿನಯಿಸಿದ್ದಾರೆ. ವೃತ್ತಿ ಜೀವನದಲ್ಲಿ ಹಾಸ್ಯ ನಟ ಪವನ್ ಅವರಿಗೆ ಇದು ವಿಭಿನ್ನ ಸಿನಿಮಾ. ಅವರ ಅಭಿನಯದ ತಾಕತ್ತು ಇಲ್ಲಿ ಪ್ರದರ್ಶನ ಆಗಿದೆ. ಧರ್ಮಣ್ಣ ಪಾತ್ರ ಸಹ ನೋಡುಗರಿಗೆ ಇಷ್ಟ ಆಗುತ್ತದೆ. ಸುಧಾರಾಣಿಯದು ಗಾಂಭೀರ್ಯ ತುಂಬಿದ ಪಾತ್ರ.

ಹಿನ್ನೆಲೆ ಸಂಗೀತವನ್ನು ನಕುಲ್ ಅಭಯಂಕರ್ ನೀಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಗಿರಿಧರ್ ದಿವಾನ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕನ್ನಡ ಮಾತನಾಡದವರೆ ಯಾಕೆ ಕಾಣೆಯಾದರು, ಅವರು ಅಮೇಲೆ ಏನಾದರೂ, ಕೊಲೆಗಳು ಯಾಕೆ ನಡೆದವು ಎಂಬುದು ಗೋಪ್ಯವಾದ ವಿಚಾರವಾಗಿದೆ.

ಕನ್ನಡ್ ಗೊತ್ತಿಲ್ಲ ಚಿತ್ರ ವಿಮರ್ಶೆ

ಕನ್ನಡನೇ ಮಾತಾಡಿ ಅಲ್ಲ ಕನ್ನಡಾನು ಮಾತಾಡಿ

ಅವದಿ – 132 ನಿಮಿಷ, ಕ್ಯಾಟಗರಿ – ಥ್ರಿಲ್ಲರ್, ರೇಟಿಂಗ್ – 4/5

ಚಿತ್ರ – ಕನ್ನಡ್ ಗೊತ್ತಿಲ್ಲ, ನಿರ್ಮಾಪಕರು – ಕುಮಾರ ಕಂಠೀರವ, ನಿರ್ದೇಶಕ – ಮಯೂರ್ ರಾಘವೇಂದ್ರ, ಸಂಗೀತ – ನಕುಲ್ ಅಭಯಂಕರ್, ಛಾಯಾಗ್ರಹಣ – ಗಿರಿಧರ್ ದಿವಾನ್, ತಾರಾಗಣ – ಹರಿಪ್ರಿಯಾ, ಪವನ್ ಕುಮಾರ್, ಮಯೂರ್, ಸುಧಾರಾಣಿ, ಧರ್ಮಣ್ಣ ಹಾಗೂ ಇತರರು.

ಇದೊಂದು ಥ್ರಿಲ್ಲರ್ ಜೊತೆಗೆ ಸ್ವಲ್ಪ ಕನ್ನಡ ಮಾತನಾಡದವರ ಬಗ್ಗೆ ಬಿಸಿ ಸಹ ಮುಟ್ಟಿಸುತ್ತದೆ. ಹಾಗೆ ನೋಡಿದರೆ ಒಂದು ಪಾತ್ರ ಇಡೀ ಚಿತ್ರದಲ್ಲಿ ಡೆಂಜರ್ ಆಯಿತ ಅನ್ನಿಸುವಷ್ಟರಲ್ಲಿ ನಿರ್ದೇಶಕ ಮಯೂರ್ ರಾಘವೇಂದ್ರ ಅದಕ್ಕೊಂದು ತಾರ್ಕಿತ ಅಂತ್ಯ ಹಾಡಿದ್ದಾರೆ.

ಮೊದಲ ಸಿನಿಮಾದಲ್ಲಿ ಪ್ರೇಕ್ಷಕರನ್ನು ಹಿಡಿದು ಕೂಡಿಸುವ ಕಲೆ ಮಯೂರ್ ಅವರಿಗೆ ಗೊತ್ತಾಗಿದೆ. ಅದರ ಜೊತೆಗೆ ಅವರ ಚಿತ್ರಕಥೆ ದ್ವಿತೀಯಾರ್ಧ ಭರ್ಜರಿಯಾಗೆ ಇದೆ. ಸರಣಿ ಕೊಲೆ ಹಾಗೂ ಸರಣಿ ಅಪಹರಣ ಸುತ್ತ ತಿರುಗುವ ಈ ಚಿತ್ರದಲ್ಲಿ ಕಡೆಯ 15 ನಿಮಿಷದ ವರೆವಿಗೂ ಪ್ರೇಕ್ಷಕ ತನ್ನ ಮನಸಿನಲ್ಲಿ ಯಾರು ಹೀಗೆಲ್ಲಾ ಮಾಡುತ್ತಿರುವುದು ಎಂದು ಲೆಕ್ಕ ಹಾಕುತ್ತಾ ಇರುತ್ತಾನೆ. ಈ ವಿಚಾರದಲ್ಲಿ ನಿರ್ದೇಶಕರ ಗೆಲುವು ಸಹ ಅದು.

ಪೊಲೀಸ್ ಇಲಾಖಾಯಲ್ಲಿ ಕಾಣೆ ಆದವರ ಬಗ್ಗೆ ಗಮನ ಹರಿಸಲು ಶ್ರುತಿ ಚಕ್ರವರ್ತಿ (ಹರಿಪ್ರಿಯಾ) ನೇಮಕ ಆಗುತ್ತದೆ. ಮೂರು ದಿವಸದಲ್ಲಿ ಎಂಟು ಅಪಹರಣ ಆದ ವ್ಯಕ್ತಿಗಳು ಯಾರು ಕನ್ನಡದವರಲ್ಲ ಎಂಬ ಮಾಹಿತಿ ಶ್ರುತಿ ಮೊದಲ ಮೀಟಿಂಗ್ ಅಲ್ಲಿಯೇ ಪತ್ತೆ ಹಚ್ಚುತ್ತಾಳೆ. ಇದರಿಂದ ಕುತೂಹಲದ ಜೊತೆಗೆ ನಿರ್ದೇಶಕರು ಗಾಬರಿ ಆಗುವ ಹಾಗೆ ಏನಾದರೂ ಹೇಳಲು ಹೊರಟಿದ್ದಾರ ಎಂಬ ಆಲೋಚನೆ ಸಹ ಬರುವುದು.

ಆದರೆ ಇದಕ್ಕೆಲ್ಲ ಶ್ರುತಿ ಅವರ ಪತ್ತೇದಾರಿ ಕೆಲಸದಲ್ಲಿ ಉತ್ತರ ಸಿಗುತ್ತದೆ. ಯಾರು ಸರಣಿ ಅಪಹರಣ ಮಾಡಿದವರು, ಅದರ ಜೊತೆಗೆ ಕೊಲೆಗಳು ಸಹ ಯಾತಕ್ಕೆ ಆಯಿತು ಎಂಬ ವಿಚಾರ ನೀವು ಚಿತ್ರಮಂದಿರದಲ್ಲೇ ತಿಳಿಯಬೇಕು.

ಹರಿಪ್ರಿಯಾ ಮುದ್ದು ಮುದ್ದಾಗಿ ಕಾಣುವುದಷ್ಟೇ ಅಲ್ಲ ಖಡಕ್ ಆಗಿ ಅಭಿನಯಿಸಿದ್ದಾರೆ. ವೃತ್ತಿ ಜೀವನದಲ್ಲಿ ಹಾಸ್ಯ ನಟ ಪವನ್ ಅವರಿಗೆ ಇದು ವಿಭಿನ್ನ ಸಿನಿಮಾ. ಅವರ ಅಭಿನಯದ ತಾಕತ್ತು ಇಲ್ಲಿ ಪ್ರದರ್ಶನ ಆಗಿದೆ. ಧರ್ಮಣ್ಣ ಅವರ ಪಾತ್ರ ಸಹ ಇಷ್ಟ ಆಗುತ್ತದೆ. ಸುಧಾರಾಣಿ ಅವರ ಗಾಂಭೀರ್ಯ ತುಂಬಿದ ಪಾತ್ರ ಚಿಕ್ಕದಾದರೂ ಚನ್ನಾಗಿದೆ. ನಿರ್ದೇಶಕ ಆರ್ ಜೆ ಮಯೂರ್ ಸಹ ಒಂದು ವಿಭಿನ್ನ ಪಾತ್ರ ಮಾಡಿದ್ದಾರೆ.

ಹಿನ್ನಲೆ ಸಂಗೀತ ಜೋಡಣೆ ಪಕ್ವವಾಗಿದೆ, ನಕುಲ್ ಅಭಯಂಕರ್ ಮೊದಲ ಸಂಗೀತ ನಿರ್ದೇಶನದ ಸಿನಿಮಾ ಕೇವಲ ಎರಡು ಹಾಡುಗಳು ಹಿನ್ನಲೆಯಲ್ಲಿ ಬಂದು ಹೋಗುತ್ತದೆ. ಅವರಿಗೆ ಒಳ್ಳೆಯ ಭವಿಷ್ಯವಿದೆ. ಛಾಯಾಗ್ರಹಣ ಸಹ ಯಾವುದೇ ಕೊರತೆ ಇಲ್ಲದೆ ನೋಡಿಸಿಕೊಂಡು ಹೋಗುತ್ತದೆ. ಛಾಯಾಗ್ರಾಹಕ ಮತ್ತು ಸಂಕಲನಕಾರ ಗಿರಿಧರ್ ದಿವಾನ್ ಅಚ್ಚುಕಟ್ಟಾಗಿ ಕೆಲಸ ನಿವಹಿಸಿದ್ದಾರೆ.

ಕನ್ನಡ ಮಾತನಾಡದವರೆ ಯಾಕೆ ಕಾಣೆಯಾದರು, ಅವರು ಅಮೇಲೆನಾದರೂ, ಕೊಲೆಗಳು ಯಾಕೆ ನಡೆದವು ಎಂಬುದು ಗೋಪ್ಯವಾದ ವಿಚಾರ ಈ ಥ್ರಿಲ್ಲರ್ ಕಥಾ ವಸ್ತುವಿನಲ್ಲಿ. ಒಮ್ಮೆ ಈ ಸಿನಿಮಾ ನೋಡಲು ಅಡ್ಡಿಯಿಲ್ಲ.

Last Updated : Nov 23, 2019, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.