ETV Bharat / sitara

ಕುಟುಂಬದಿಂದ, ಪತಿಯಿಂದ ದೂರವಿರುವುದು ಬಹಳ ಕಠಿಣ.. ನಟಿ ಪ್ರಿಯಾಂಕಾ ಚೋಪ್ರಾ

author img

By

Published : Dec 1, 2021, 4:30 PM IST

ಕಳೆದ ಕೆಲ ಸಮಯ ಕೋವಿಡ್ ಹಿನ್ನೆಲೆ, ನಾವು ಭೇಟಿಯಾಗ ಬಯಸಿದ್ದಲ್ಲಿ ಕ್ವಾರಂಟೈನ್​ ಆಗಬೇಕಿತ್ತು.​ ಇದು ಕಠಿಣ ಪರಿಸ್ಥಿತಿಯಾಗಿದ್ದು, ನಾವು ನಿಭಾಯಿಸಿದೆವು ಎಂದು ಪ್ರಿಯಾಂಕಾ ಚೋಪ್ರಾ Ladies First With Laura Brown podcastನಲ್ಲಿ ಹೇಳಿಕೊಂಡಿದ್ದಾರೆ..

priyanka chopra and nick jonas
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್

ಲಾಸ್‌ ಏಂಜಲೀಸ್ (ಯುಎಸ್): ನಟಿ ಪ್ರಿಯಾಂಕಾ ಚೋಪ್ರಾ ಕಳೆದೊಂದು ವರ್ಷದಿಂದ ಲಂಡನ್‌ನಲ್ಲಿ ಮುಂಬರುವ ತಮ್ಮ ಸಿಟಡೆಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಪತಿ ನಿಕ್ ಜೋನಾಸ್‌ರಿಂದ ದೂರವಿರುವುದು ಬಹಳ ಕಷ್ಟ ಎಂದು ಹೇಳಿಕೊಂಡಿದ್ದಾರೆ.

"ಈ ವರ್ಷ ನಿಜವಾಗಿಯೂ ನನಗೆ ಕಷ್ಟವಾಗಿತ್ತು. ಇಡೀ ವರ್ಷ ಮನೆಯಿಂದ ದೂರವಿರುವುದು ನಿಜವಾಗಿಯೂ ಕಠಿಣವಾಗಿತ್ತು. ವಿಶೇಷವಾಗಿ ನಿಮ್ಮ ಕುಟುಂಬವನ್ನು ನೋಡಲು ನೀವು(ನಿಕ್​) ಪ್ರಯಾಣಿಸಲು ಸಾಧ್ಯವಾಗದ ಸಮಯದಲ್ಲಿ ನಾನು ಒಬ್ಬಂಟಿಯಾಗಿದ್ದೆ" ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

2018ರ ಡಿಸೆಂಬರ್​ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಹಾಲಿವುಡ್ ಹಾಟ್ ಜೋಡಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ನಡುವಿನ ಅನುಬಂಧ ದಿನೇದಿನೆ ಇನ್ನಷ್ಟು ಹತ್ತಿರವಾಗುತ್ತಿದೆ. ಆದ್ರೆ, ಒಟ್ಟಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲವೆಂದು ಪ್ರಿಯಾಂಕಾ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ಸಮಯ ಕೋವಿಡ್ ಹಿನ್ನೆಲೆ, ನಾವು ಭೇಟಿಯಾಗ ಬಯಸಿದ್ದಲ್ಲಿ ಕ್ವಾರಂಟೈನ್​ ಆಗಬೇಕಿತ್ತು.​ ಇದು ಕಠಿಣ ಪರಿಸ್ಥಿತಿಯಾಗಿದ್ದು, ನಾವು ನಿಭಾಯಿಸಿದೆವು ಎಂದು ಪ್ರಿಯಾಂಕಾ ಚೋಪ್ರಾ Ladies First With Laura Brown podcastನಲ್ಲಿ ಹೇಳಿಕೊಂಡಿದ್ದಾರೆ.

ನಾವು ವೈಯಕ್ತಿಯ ಜೀವನದೊಂದಿಗೆ ವೃತ್ತಿ ಜೀವನವನ್ನೂ ಹೊಂದಿದ್ದೇವೆ. ನಾವಿಬ್ಬರೂ ಅದನ್ನು ಪರಸ್ಪರ ಗೌರವಿಸಿ ಅದನ್ನು ಅರ್ಥಮಾಡಿಕೊಂಡು ಮುನ್ನಡೆಯುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿಕ್ ಜೊತೆ 'ಥ್ಯಾಂಕ್ಸ್‌ ಗಿವಿಂಗ್' ಆಚರಿಸಿದ ಪ್ರಿಯಾಂಕಾ ಚೋಪ್ರಾ

ಈ ವರ್ಷ ಲಂಡನ್​ನಲ್ಲಿ ಇರುವುದು ಕಷ್ಟವಾಗಿತ್ತು. ಆದ್ರೆ, ನಿಕ್​​ ಎಲ್ಲವನ್ನೂ ಬಿಟ್ಟು ಒಂದು ದಿನಕ್ಕಾದರೂ ನನ್ನೊಂದಿಗೆ ಊಟ ಮಾಡಿ ಹೋಗುತ್ತಿದ್ದರೆಂದು ಪತಿ ಬಗ್ಗೆ ಪ್ರಿಯಾಂಕಾ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.