ETV Bharat / sitara

''ರಾಮ್ ಸೇತು'' ಚಿತ್ರೀಕರಣಕ್ಕೆ ಹೊರಟ ಅಕ್ಷಯ್ ಕುಮಾರ್.. ಸಹನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಾಥ್​ - ಅಕ್ಷಯ್ ಕುಮಾರ್ ಮುಂದಿನ ಚಿತ್ರ

ನಟ ಅಕ್ಷಯ್ ಕುಮಾರ್(Akshay Kumar) ತಮ್ಮ ಮುಂಬರುವ ಚಿತ್ರ ರಾಮ್ ಸೇತು(Ram Setu) ಚಿತ್ರೀಕರಣಕ್ಕೆ ಸಹನಟಿ ಜಾಕ್ವೆಲಿನ್ ಫರ್ನಾಂಡೀಸ್(Jacqueline Fernandez)​ ಜೊತೆ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಅವರು ಎಲ್ಲಿ ಹೊರಟಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.

Ram Setu shooting
ರಾಮ್ ಸೇತು ಚಿತ್ರೀಕರಣ
author img

By

Published : Nov 16, 2021, 1:17 PM IST

ಹೈದರಾಬಾದ್(ತೆಲಂಗಾಣ): ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಸೇರಿದಂತೆ ಬಹುತಾರಾಗಣದ ಬಾಲಿವುಡ್​ನ 'ಸೂರ್ಯವಂಶಿ'(Suryavanshi) ನ. 05ರಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದಿದೆ. ಆದರೆ, ಈ ಯಶಸ್ಸಿನ ಸಂಭ್ರಮಾಚರಣೆ ಬದಲು ತಮ್ಮ ಮುಂದಿನ ಚಿತ್ರಕ್ಕೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್ ಸಖತ್​ ಬ್ಯುಸಿಯಾಗಿದ್ದಾರೆ.

ರಾಮ್ ಸೇತು ಚಿತ್ರೀಕರಣಕ್ಕೆ ಹೊರಟ ಅಕ್ಷಯ್​​-ಜಾಕ್ವೆಲಿನ್​​

ಕೋವಿಡ್ ​- ಲಾಕ್​ಡೌನ್​ ನಂತರ ಬಾಲಿವುಡ್​​ ಚಿತ್ರ ಉದ್ಯಮ ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರವಾಗಿರುವ ಈ ಚಿತ್ರದ ಯಶಸ್ಸು ಆಚರಿಸಲು ನಟ ಇನ್ನೂ ಸಮಯ ತೆಗೆದುಕೊಂಡಿಲ್ಲ. ಬದಲಾಗಿ ಮುಂಬರುವ ಚಿತ್ರ ರಾಮ್ ಸೇತು( Ram Setu ) ಚಿತ್ರೀಕರಣಕ್ಕೆ ಸಹನಟಿ ಜಾಕ್ವೆಲಿನ್ ಫರ್ನಾಂಡೀಸ್( Jacqueline Fernandez)​ ಜೊತೆ ನಟ ಅಕ್ಷಯ್​ ಕುಮಾರ್​ ಹೊರಟಿದ್ದಾರೆ.

ಇದನ್ನೂ ಓದಿ: ಬಾಲಿವುಡ್​​ ಬಾಯಿಜಾನ್​​​​ 'ಸಲ್ಲು' ಭಾಯ್​​​​​​ ಫೇವರಿಟ್​ ಹೀರೋ ಯಾರು ಗೊತ್ತಾ...!

ಅಕ್ಷಯ್ ಮತ್ತು ಜಾಕ್ವೆಲಿನ್ ತಮ್ಮ ವಿಮಾನ ಪ್ರಯಾಣದ ವಿಡಿಯೋ ಹಂಚಿಕೊಂಡಿದ್ದಾರೆ. ರಾಮ್ ಸೇತು ಚಿತ್ರೀಕರಣಕ್ಕೆ ಹೊರಟಿದ್ದು, ಎಲ್ಲಿಗೆ ತೆರಳುತ್ತಿದ್ದಾರೆ ಎಂಬುದನ್ನು ಮಾತ್ರ ಉಲ್ಲೇಖಿಸಿಲ್ಲ.

ಈ ಚಿತ್ರದಲ್ಲಿ ಪುರಾತತ್ವಶಾಸ್ತ್ರಜ್ಞನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್​​ ಜೊತೆ ನುಶ್ರತ್​ ಬರುಚಾ ಸಹ ನಟಿಸಿದ್ದಾರೆ. ಅಭಿಷೇಕ್​ ಶರ್ಮಾ ಈ ಸಿನಿಮಾ ನಿರ್ದೇಶಿಸಿಸುತ್ತಿದ್ದಾರೆ. ವಿಕ್ರಮ್​ ಮಲ್ಹೋತ್ರಾ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.