ಸಿಂಬಾ ಎನ್ನುವ ನಾಯಿ ಡಬ್ಬಿಂಗ್ ಮಾಡಿರೋ ದೃಶ್ಯಾವಳಿಯೊಂದನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ವಿಡಿಯೋ, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದೊಂದು ವಿಡಿಯೋ ನಾನು ಮತ್ತು ಗುಂಡ ಚಿತ್ರದ ಮೇಲಿನ ಕುತೂಹಲವನ್ನ ಹೆಚ್ಚಿಸ್ತಿದೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧವನ್ನ ಸಾರುವಂತಹ ಸಿನಿಮಾ ಇದಾಗಿದೆ..
ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ. ಸಂಯುಕ್ತ ಹೊರನಾಡು, ಜಿಜಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರೋ ಈ ಚಿತ್ರವನ್ನ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶಿಸಿದ್ದಾರೆ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಈಗಾಗ್ಲೇ ಟೀಸರ್ ಮತ್ತು ಲಿರಿಕಲ್ ವಿಡಿಯೋಗಳು ಸದ್ದು ಮಾಡಿದ್ವು. ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ರಘು ಹಾಸನ್ ನಿರ್ಮಾಣ ಮಾಡಿದ್ದಾರೆ.
ಸದ್ಯ ನಾನು ಮತ್ತು ಗುಂಡ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದಾದ್ಯಂತ ರಿಲೀಸ್ ಆಗ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಶ್ವಾನ ಡಬ್ಬಿಂಗ್ ಮಾಡಿರೋದು ಇದು ಇತಿಹಾಸ..