ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕೇವಲ ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲದೆ ದೇಶ ಹಾಗೂ ವಿದೇಶದಲ್ಲಿ ತನ್ನ ದರ್ಬಾರ್ ನಡೆಸಿತ್ತು.
ಪ್ರಶಾಂತ್ ನೀಲ್ ನಿರ್ದೇಶನದ ಈ ಮೂವಿ ಕನ್ನಡ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಪರಿಚಯ ಮಾಡಿತ್ತು.
ಇನ್ನು ಕೆಜಿಎಫ್ ಚಾಪ್ಟರ್ -2 ಆರಂಭಕ್ಕೂ ಮೊದಲೇ ರಾಕಿಭಾಯ್ ಹವಾ ಶುರುವಾಗಿದೆ. ಇದೀಗ ರಾಕಿ ಭಾಯ್ ಸದ್ದು ಜೋರಾಗಿದ್ದು, ಯಶ್ ಅಭಿಮಾನಿಗಳು ಕೆಜಿಎಫ್ ಲುಕ್ನಲ್ಲಿ ಗನ್ ಹಿಡಿದು ನಿಂತಿರುವ ಯಶ್ ಪುತ್ಥಳಿ ತಯಾರಿಸಿದ್ದಾರೆ.
ಇನ್ನೂ ರಾಕಿ ಭಾಯ್ ಗನ್ ಹಿಡಿದಿರೋ ಪುತ್ತಳಿಯಲ್ಲಿ ಕೆಜಿಎಫ್ - 2 Monster is Back ಅಂತಾ ಬರೆಯಲಾಗಿದೆ.
ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ಶೂಟಿಂಗ್ಗೂ ಮೊದಲೇ ಹವಾ ಕ್ರಿಯೇಟ್ ಮಾಡ್ತಿದ್ದು, ರೀಲಿಸ್ ಆದ ಮೇಲೆ ಭಾರತೀಯ ಚಿತ್ರರಂಗದ ಅಧಿಪತಿಯಾಗೋದು ಗ್ಯಾರಂಟಿ ಅಂತಿದ್ದಾರೆ ಗಾಂಧಿನಗರ ಪಂಡಿತರು.