ಕನ್ನಡ ಚಿತ್ರರಂಗದಲ್ಲಿ ಕ್ಲಾಸ್ ಅಂಡ್ ಮಾಸ್ಗೆ ಹೆಸರುವಾಸಿಯಾಗಿರೋ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಸದ್ಯ ಕೊರೊನಾ ಹಾವಳಿಯಿಂದ ಕಳೆದ ಎರಡು ತಿಂಗಳಿನಿಂದ, ಸಿನಿಮಾ ಶೂಟಿಂಗ್ ಇಲ್ಲದೇ, ಫ್ಯಾಮಿಲಿ ಹಾಗೂ ಸಂಬಂಧಿಕರ ಜೊತೆ ಪುನೀತ್ ಕಾಲ ಕಳೆಯುತ್ತಿದ್ದಾರೆ.
ಈ ಮಧ್ಯೆ ಈ ಯುವರತ್ನ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಹಿಂದೆ ಬಿದ್ದಿಲ್ಲ. ವಯಸ್ಸು 45 ಆಗಿದ್ರೂ ಪುನೀತ್ ರಾಜ್ಕುಮಾರ್ ಮಾಡುವ ಚಾಲೆಂಜಿಂಗ್ ವರ್ಕ್ಔಟ್ಗಳನ್ನು ನೋಡಿದ್ರೆ, ಈ ಅಣ್ಣಾಬಾಂಡ್ ಹಿಂಗೆಲ್ಲ ಮಾಡ್ತಾರಾ ಎಂದು ನೋಡುಗರಿಗೆ ಆಶ್ಚರ್ಯ ಆಗುತ್ತೆ.
ಸದ್ಯ ಪುನೀತ್ ರಾಜ್ಕುಮಾರ್ ಮಾಡುತ್ತಿರುವ ಈ ಕಷ್ಟಕರವಾದ ವರ್ಕ್ಔಟ್ ನೋಡಿದ್ರೆ ವಾಹ್ ಅನ್ನಿಸುತ್ತೆ. ಪುನೀತ್ ರಾಜ್ಕುಮಾರ್ ಫಿಟ್ನೆಸ್ ಹಿಂದಿರೋ ಹಲವು ಸೀಕ್ರೆಟ್ಗಳಲ್ಲಿ ಇದು ಕೂಡಾ ಒಂದು ಅಂದ್ರೆ ತಪ್ಪಿಲ್ಲ.
ಯುವರತ್ನ ಹಾಗೂ ಜೇಮ್ಸ್ ಚಿತ್ರಗಳಲ್ಲಿ ಬ್ಯುಸಿಯಾಗಿರೋ ಪವರ್ ಸ್ಟಾರ್, ಈ ಲಾಕ್ ಡೌನ್ ಮುಗಿದ ಮೇಲೆ ಯುವರತ್ನ ಸಿನಿಮಾದ ಬಾಕಿ ಇರುವ ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಸದ್ಯ ಪವರ್ ಸ್ಟಾರ್ನ ಈ ಚಾಲೆಂಜಿಂಗ್ ವರ್ಕ್ಔಟ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.