ETV Bharat / sitara

ಕ್ರಿಟಿಕ್ ಚಾಯ್ಸ್‌ ಫಿಲಂ ಅವಾರ್ಡ್ಸ್‌​​​ನಲ್ಲಿ 'ಊ ಅಂತಾವಾ' ಸಾಂಗ್​​​​ ಬಗ್ಗೆ ಮಾತನಾಡಿದ ಸಮಂತಾ - ಸಮಂತಾ ಐಟಂ ಡ್ಯಾನ್ಸ್​

ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್​​ನಿಂದ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿ ಸಮಂತಾ ಇದೀಗ ಹೆಚ್ಚು ಸದ್ದು ಮಾಡ್ತಿದ್ದಾರೆ. ಈ ಹಿಂದೆ ಯಾವುದೇ ಐಟಂ ಸಾಂಗ್‌ಗಳಲ್ಲಿ ನಟನೆ ಮಾಡಲು ಹಿಂದೇಟು ಹಾಕ್ತಿದ್ದ ನಟಿ 'ಊ ಅಂತಾವಾ'ದಲ್ಲಿ ಸೊಂಟ ಬಳುಕಿಸಲು ಒಪ್ಪಿರುವ ಬಗ್ಗೆ ಹೇಳಿಕೊಂಡಿದ್ದಾರೆ.

Samantha on Oo Antava success
Samantha on Oo Antava success
author img

By

Published : Mar 11, 2022, 6:00 PM IST

ಮುಂಬೈ​​​(ಮಹಾರಾಷ್ಟ್ರ): 'ಊ ಅಂತಾವಾ' ಐಟಂ ಸಾಂಗ್​​ ದೇಶಾದ್ಯಂತ ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟಿಸಿದ್ದು, ನಟಿ ಸಮಂತಾಗೆ ಇನ್ನಿಲ್ಲದ ಹೆಸರು ತಂದುಕೊಟ್ಟಿದೆ. ಮುಂಬೈನಲ್ಲಿ ನಡೆದ ಕ್ರಿಟಿಕ್​ ಚಾಯ್ಸ್​ ಫಿಲ್ಮಂ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ನಟಿ ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ.

​ಈ ಹಾಡಿನಿಂದಾಗಿ ಜನರು ನನ್ನ ಮೇಲೆ ಯಾವ ರೀತಿಯಲ್ಲಿ ಪ್ರೀತಿ ತೋರಿಸುತ್ತಿದ್ದಾರೆಂದು ವಿವರಿಸಲು ಸಾಧ್ಯವಾಗುತ್ತಿಲ್ಲ. ಊ ಅಂತಾವಾ ಸಾಂಗ್​ ಪ್ಯಾನ್​ ಇಂಡಿಯಾ ಆಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ. ನಾನು ನಟನೆ ಮಾಡಿರುವ ರಂಗಸ್ಥಳಂ ಸೇರಿದಂತೆ ಅನೇಕ ಚಿತ್ರ ಮರೆತು ಹೋಗಿರುವ ಪ್ರೇಕ್ಷಕರು, ಇದೀಗ ಊ ಅಂತಾವಾ ಹಾಡಿನಿಂದ ನನ್ನನ್ನು ಗುರುತಿಸುತ್ತಿದ್ದಾರೆ ಎಂದರು.

ಇದನ್ನೂ ಓದಿರಿ: 'ರಾಧೆ ಶ್ಯಾಮ್' ಸಿನಿಮಾ ಬಗ್ಗೆ ದ್ವಂದ್ವ ಹೇಳಿಕೆ ನೀಡಿದ ಚಿತ್ರ ವಿಮರ್ಶಕ!

ಸಮಂತಾ ರುತ್​ ಪ್ರಭು ಅವರು ಊ ಅಂತಾವಾ ಐಟಂ ಸಾಂಗ್​​ ಅನೇಕ ದಾಖಲೆ ಸೃಷ್ಟಿಸಿದ್ದು, ದೇವಿ ಶ್ರೀ ಪ್ರಸಾದ್​ ಅವರ ಸಂಗೀತ ಸಂಯೋಜನೆ ಇದೆ. ಐಟಂ ಸಾಂಗ್​​ಗಳಿಗೆ ಹಿಂದೇಟು ಹಾಕುತ್ತಿದ್ದ ನಟಿ, ಅಲ್ಲು ಅರ್ಜುನ್​ ಮತ್ತು ನಿರ್ದೇಶಕ ಸುಕುಮಾರ್​ ಅವರ ಕಾಂಬಿನೇಷನ್​​ನಲ್ಲಿ ಹಾಡು ಸೆನ್ಸೇಷನ್​​ ಸೃಷ್ಟಿಸುವ ಸಾಧ್ಯತೆ ಇರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.