ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ದರ್ಶನಕ್ಕೆ ಕೇವಲ 2 ದಿನ ಬಾಕಿ ಇದೆ. ಎಲ್ಲಿ ನೋಡಿದ್ರು ನಾರಾಯಣ ಧ್ಯಾನ ಶುರುವಾಗಿದೆ. ಅದರಲ್ಲೂ ನಾರಾಯಣನ ಸಿಗ್ನೇಚರ್ ಸ್ಟೆಪ್ ಸಖತ್ ವೈರಲ್ ಆಗಿದ್ದು, ಸ್ಯಾಂಡಲ್ವುಡ್ನ ಬಹುತೇಕ ಸ್ಟಾರ್ ನಟ ನಟಿಯರು ನಾರಾಯಣನ ಸಿಗ್ನೇಚರ್ ಸ್ಟೆಪ್ ಹಾಕಿ ಚಾಲೇಂಜ್ ಅಕ್ಸೆಪ್ಟ್ ಮಾಡಿದ್ದಾರೆ.
ಈ ಸಿಗ್ನೇಚರ್ ಸ್ಟೆಪ್ ಚಾಲೆಂಜ್ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಇಬ್ಬರು ಪುತ್ರರು ಅಕ್ಸೆಪ್ಟ್ ಮಾಡಿದ್ದು, ಹ್ಯಾಂಡ್ಸ್ ಅಪ್ ಸಾಂಗ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ. ಸಕಲೇಶಪುರದಲ್ಲಿ ಮುಗಿಲ್ಪೇಟೆ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇರುವ ರವಿಮಾಮನ ಮಗ ಮನುರಂಜನ್ ಕ್ಯಾರವಾನ್ನಲ್ಲೇ ಹ್ಯಾಂಡ್ಸ್ ಅಪ್ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ.
ಅದೇ ರೀತಿ ರವಿಚಂದ್ರನ್ ಎರಡನೇ ಪುತ್ರ ವಿಕ್ಕಿ ಕೂಡ ರಾಜಸ್ಥಾನದ ಮರು ಭೂಮಿಯಲ್ಲಿ 'ತ್ರಿವಿಕ್ರಮ' ಸಾಂಗ್ ಶೂಟಿಂಗ್ನಲ್ಲಿ ಬ್ಯುಸಿ ಇದ್ದು, ಶೂಟಿಂಗ್ ಫ್ರೀ ಟೈಂನಲ್ಲಿ ಮರುಭೂಮಿಯಲ್ಲಿ ಗನ್ ಹಿಡಿದು ನಾರಾಯಣನ ಸ್ಟೆಪ್ ಹಾಕಿದ್ದಾರೆ.