ಸ್ಯಾಂಡಲ್ವುಡ್ ಎವರ್ ಗ್ರೀನ್ ನಟ ಅನಂತ ನಾಗ್ ಅವರು 74ನೇ ವಸತಂಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮಕ್ಕೆ ವಿಜಯಾನಂದ ಚಿತ್ರತಂಡ ಸ್ಪೆಷಲ್ ಟೀಸರ್ ಬಿಡುಗಡೆ ಮಾಡಿ ಮತ್ತಷ್ಟು ಮೆರಗು ನೀಡಿದೆ.
ಸಾಧನೆ ಮಾಡಿರುವ ಗಣ್ಯ ವ್ಯಕ್ತಿಗಳ ಬಯೋಗ್ರಾಫಿ ಸಿನಿಮಾದ ರೂಪದಲ್ಲಿ ಬೆಳ್ಳಿ ತೆರೆಯ ಮೇಲೆ ರಾರಾಜಿಸಿವೆ. ಇದೀಗ ವಿಆರ್ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ ಸಂಕೇಶ್ವರ ಕುರಿತು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರ ಪೋಸ್ಟರ್ ಹಾಗೂ ಮೋಷನ್ ಪಿಕ್ಚರ್ನಿಂದ ಗಮನ ಸೆಳೆಯುತ್ತಿದೆ.
ವಿಜಯಾನಂದ ಸಿನಿಮಾದಲ್ಲಿ ಕನ್ನಡದ ನಟ ಅನಂತ್ ನಾಗ್, ವಿಜಯ ಸಂಕೇಶ್ವರ್ರವರ ತಂದೆ ಬಿ ಜಿ ಸಂಕೇಶ್ವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅನಂತ್ ನಾಗ್ಗೆ ಚಿತ್ರತಂಡ ಸ್ಪೆಷಲ್ ಟೀಸರ್ ಬಿಡುಗಡೆ ಮಾಡಿದೆ.
![Vijayananda Cinema Poster](https://etvbharatimages.akamaized.net/etvbharat/prod-images/kn-bng-02-ananth-nag-birthdayge-vijaynanada-cinema-team-koduthu-spl-gift-7204735_04092021172247_0409f_1630756367_868.jpg)
ಉತ್ತರ ಕರ್ನಾಟಕದ ಪ್ರತಿಭಾವಂತ ನಾಯಕ ನಿಹಾಲ್, ವಿಜಯ ಸಂಕೇಶ್ವರರ ಪಾತ್ರಕ್ಕೆ ನಾಯಕ ನಟರಾಗಿ ಬಣ್ಣ ಹಚ್ಚಿದ್ದಾರೆ. ಇವರು ಟ್ರಂಕ್ ಚಿತ್ರದಲ್ಲಿನ ನಟನೆಗೆ ಅಪಾರ ಮೆಚ್ಚುಗೆ ಪಡೆದಿದ್ದರು.
ಕನ್ನಡ ಚಿತ್ರರಂಗದಲ್ಲಿ ಸತತವಾಗಿ 8 ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ, ಸಿನಿಮಾ, ನಟನೆ, ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ಹಲವಾರು ವಿಭಾಗಗಳಲ್ಲಿ ಅನುಭವ ಹೊಂದಿರುವ ರಿಷಿಕಾ ಶರ್ಮಾ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
- https://youtu.be/Fw_zP9K3F2E
ಎರಡು ವರ್ಷಗಳಿಂದ ಸತತವಾಗಿ ಈ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತೆಲುಗು ಮತ್ತು ಮಲಯಾಳಂ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್, ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ.
ವಿಜಯ ಸಂಕೇಶ್ವರ್ ಪುತ್ರರಾದ ಆನಂದ ಸಂಕೇಶ್ವರ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ ಈ ಸಂಸ್ಥೆಯ ಮೂಲಕ ವಿಜಯಾನಂದ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.