ETV Bharat / sitara

ಬಾಕ್ಸಾಫೀಸ್ ನ​ಲ್ಲಿ ಮಕಾಡೆ ಮಲಗಿದ ಕಾಮ್ರೇಡ್​​...ಸೋಲಿಗೆ ಕಾರಣ ಬಿಚ್ಚಿಟ್ಟಿ ವಿಜಯ್

ಡಿಯರ್ ಕಾಮ್ರೇಡ್ ಸಿನಿಮಾ ಸೋಲಿಗೆ ಏನು ಕಾರಣ ಎಂಬುದನ್ನು ನಟ ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ.

Vijay Deverakonda
author img

By

Published : Aug 19, 2019, 7:21 PM IST

ಗೀತಾ ಗೋವಿಂದಂ ಬಳಿಕ ಯಾವ ಚಿತ್ರವೂ ವಿಜಯ್ ದೇವರಕೊಂಡ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ತಂದುಕೊಡಲಿಲ್ಲ. ಇತ್ತೀಚಿಗಷ್ಟೆ ತೆರೆಕಂಡ ಡಿಯರ್ ಕಾಮ್ರೇಡ್ ಕೂಡ ಬಾಕ್ಸಾಫೀಸಿನಲ್ಲಿ ಸರಿಯಾಗಿ ದುಡಿಯಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು.

ತೆಲುಗು,ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ತೆರೆಕಂಡ ಡಿಯರ್ ಕಾಮ್ರೇಡ್​ಅ​ನ್ನು ಸಿನಿರಸಿಕರು ಒಪ್ಪಿಕೊಳ್ಳಲಿಲ್ಲ. ಗೀತಾ ಗೋವಿಂದಂಲ್ಲಿ ಮೋಡಿ ಮಾಡಿದ್ದ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಗೆ ಅಭಿಮಾನಿಗಳು ಮಣೆ ಹಾಕಲಿಲ್ಲ. ಬಿಡುಗಡೆ ಮುನ್ನ ಸಖತ್ ಸದ್ದು ಮಾಡಿದ್ದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಠುಸ್​ ಪಟಾಕಿಯಂತಾಯಿತು.

ಸದ್ಯ ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಡಿಯರ್ ಕಾಮ್ರೇಡ್​ ಸೋಲಿನ ಕಾರಣ ಬಿಚ್ಚಿಟ್ಟಿದ್ದಾರೆ. ಮೊನ್ನೆಯಷ್ಟೆ ಕತಾರ್​ನಲ್ಲಿ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಮಾತಾಡಿರುವ ಅವರು, ಡಿಯರ್ ಕಾಮ್ರೇಡ್​​ಗೆ ಹಿನ್ನೆಡೆಯಾಗಲು ಮುಖ್ಯ ಕಾರಣ ಈ ಚಿತ್ರದ ಬಗ್ಗೆ ಕೇಳಿ ಬಂದ ಅನಗತ್ಯ ನೆಗೆಟಿವಿಟಿ ಎಂದಿದ್ದಾರೆ.

ಡಿಯರ್ ಕಾಮ್ರೇಡ್ ಸೋಲಿಗೆ ಕಾರಣ ಬೇಡವಲ್ಲದ ನರಕಾತ್ಮಕ ವಿಷಯಗಳು. ಇದು ನನ್ನ ಸಿನಿಮಾಗಳಿಗೆ ಮೊದಲೇನಲ್ಲ. ಇಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂಬುದು ನಂಗೆ ಗೊತ್ತು ಎಂದಿದ್ದಾರೆ.

ಇನ್ನು ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಹಾಗೂ ಗೀತಗೋವಿಂದಂನಲ್ಲಿ ದೊಡ್ಡ ಯಶಸ್ಸು ಪಡೆದಿದ್ದರು. ಈ ಸಿನಿಮಾಗಳ ಬಳಿಕ ತೆರೆಕಂಡ ನೋಟಾ ಹಾಗೂ ಟ್ಯಾಕ್ಸಿವಾಲಾ ಕೂಡ ಹೇಳಿಕೊಳ್ಳುವಂತಹ ಗೆಲುವು ಪಡೆಯಲಿಲ್ಲ. ನೋಟಾ ಚಿತ್ರದ ಸೋಲಿನ ವೇಳೆಯೂ ಬಹಿರಂಗ ಪತ್ರ ಬರೆದಿದ್ದರು ವಿಜಯ್.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.