ETV Bharat / sitara

ಮತ್ತೆ ತೆರೆ ಮೇಲೆ ಅರ್ಜುನ್ ರೆಡ್ಡಿ ಜೋಡಿ: ಹೊಸ ಸಿನಿಮಾದಲ್ಲಿ ವಿಜಯ್ ಜೊತೆ ಶಾಲಿನಿ​​​​? - undefined

ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹಾಗೂ ಶಾಲಿನಿ ಪಾಂಡೆ ಮತ್ತೊಂದು ಚಿತ್ರದಲ್ಲಿ ಜೋಡಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಹೊಸ ನಿರ್ದೇಶಕ ಆನಂದ್ ಅಣ್ಣಾಮಲೈ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ವಿಜಯ್, ಶಾಲಿನಿ​​​​
author img

By

Published : May 13, 2019, 11:37 AM IST

ಟಾಲಿವುಡ್​ ನಟ ವಿಜಯ್ ದೇವರಕೊಂಡ ಹೆಸರು ಕೇಳಿದೊಡನೆ ನೆನಪಾಗುವುದು 'ಅರ್ಜುನ್ ರೆಡ್ಡಿ' ಸಿನಿಮಾ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಈ ಸಿನಿಮಾವನ್ನು ಭದ್ರಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿ ಸಂದೀಪ್ ರೆಡ್ಡಿ ವಂಗ ನಿರ್ದೇಶಿಸಿದ್ದರು.

vijay
ವಿಜಯ್ ದೇವರಕೊಂಡ

ಇನ್ನು ಈ ಸಿನಿಮಾದಲ್ಲಿ ಪ್ರಮುಖ ಹೈಲೈಟ್ ಅಂದ್ರೆ ವಿಜಯ್ ದೇವರಕೊಂಡ ಹಾಗೂ ಅವರ ಪ್ರೇಯಸಿ ಪಾತ್ರದಲ್ಲಿ ನಟಿಸಿದ್ದ ಶಾಲಿನಿ ಪಾಂಡೆ. ಚಿತ್ರದಲ್ಲಿ ವಿಜಯ್​ ಶ್ರಮ ಎಷ್ಟಿದೆಯೋ ಶಾಲಿನಿ ಕೂಡಾ ಅಷ್ಟೇ ಚೆನ್ನಾಗಿ ನಟಿಸಿದ್ದಾರೆ. ಹಾಗಾಗಿ ಇವರಿಬ್ಬರ ಕೆಮಿಸ್ಟ್ರಿ ಸಿನಿಮಾದಲ್ಲಿ ಚೆನ್ನಾಗಿ ವರ್ಕೌಟ್ ಆಗಿತ್ತು. ಇವರಿಬ್ಬರ ಕಾಂಬಿನೇಶನ್ ಕೂಡಾ ಎಲ್ಲರಿಗೂ ಇಷ್ಟವಾಗಿತ್ತು. ಇದೀಗ ಮತ್ತೆ ಇವರಿಬ್ಬರೂ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

vijay, shalini
ವಿಜಯ್, ಶಾಲಿನಿ​​​​

'ಡಿಯರ್ ಕಾಮ್ರೇಡ್' ನಂತರ ಕ್ರಾಂತಿಮಾಧವ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಹೊಸ ನಿರ್ದೇಶಕ ಆನಂದ್ ಅಣ್ಣಾಮಲೈ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡುವುದಾಗಿ ಕೂಡಾ ಈ ಹೀರೋ ಒಪ್ಪಿಕೊಂಡಿದ್ದಾರೆ. ತೆಲುಗು, ತಮಿಳು ಎರಡೂ ಭಾಷೆಗಳಲ್ಲೂ ಒಟ್ಟಿಗೆ ಬಿಡುಗಡೆಯಾಗಲಿರುವ ಈ ಸಿನಿಮಾಗಾಗಿ ವಿಜಯ್ ದೆಹಲಿಯಲ್ಲಿ ಪ್ರೊಫೆಷನಲ್ ಬೈಕರ್ಸ್ ಬಳಿ ತರಬೇತಿ ಪಡೆಯುತ್ತಿದ್ದಾರಂತೆ. ಸಿನಿಮಾದಲ್ಲಿ ಮಾಳವಿಕ ಹಾಗೂ ಶಾಲಿನಿ ಪಾಂಡೆ ನಾಯಕಿಯರಾಗಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಅಂದುಕೊಂಡಂತೆ ಆದಲ್ಲಿ ಅರ್ಜುನ್ ರೆಡ್ಡಿ ಜೋಡಿಯನ್ನು ಅಭಿಮಾನಿಗಳು ಮತ್ತೊಂದು ಸಿನಿಮಾದಲ್ಲಿ ಜೊತೆ ಜೊತೆಯಾಗಿ ನೋಡಬಹುದು.

shalini
ಶಾಲಿನಿ ಪಾಂಡೆ

Intro:Body:

Arjun reddy

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.