ETV Bharat / sitara

ಬಹುಭಾಷಾ ನಟಿ 'ಅಭಿಜಾತ ಪ್ರತಿಭೆ' ಜಯಂತಿ ನಡೆದು ಬಂದ ಹಾದಿ.. - undefined

Veteran Actress Jayanthi: ಖ್ಯಾತ ಬಹುಭಾಷಾ ನಟಿ ಜಯಂತಿ ಅನಾರೋಗ್ಯದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. 'ಅಭಿನಯ ಶಾರದೆ'ಯ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು, ರಾಜಕಾರಣಿಗಳು, ಸಿನಿ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. ಬಾಲ್ಯದಿಂದ ಸಿನಿಮಾಗೆ ಮನಸೋತಿದ್ದ ಜಯಂತಿ ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಡೆಸಿದ್ದಾರೆ. ಅವರ ಸಿನಿ ಬದುಕು ಹೇಗಿತ್ತು ಎಂಬುದರ ಒಂದಷ್ಟು ಮಾಹಿತಿ ಇಲ್ಲಿದೆ.

veteran actress jayanthi cinema life journey
ಖ್ಯಾತ ಬಹುಭಾಷಾ ನಟಿ ಜಯಂತಿ ಅವರ ನಡೆದು ಬಂದ ಹಾದಿ ಹೀಗಿದೆ...
author img

By

Published : Jul 26, 2021, 5:53 PM IST

1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಅಭಿನಯ ಮೂಲಕವೇ ಮನೆ ಮಾತಾಗಿದ್ದ ಜಯಂತಿ ಅವರು ಅಭಿನಯ ಶಾರದೆ ಎಂದೇ ಖ್ಯಾತಿ ಪಡೆದಿದ್ದರು.

1963ರಲ್ಲಿ ತೆರೆ ಕಂಡ ವೈ.ಆರ್.ಸ್ವಾಮಿ ನಿರ್ದೇಶನದ ಜೇನು ಗೂಡು ಚಿತ್ರದ ಮೂಲಕ ಜಯಂತಿ ಅವರು ಚಿತ್ರರಂಗ ಪ್ರವೇಶಿಸಿದರು. ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದಾರೆ. ಕನ್ನಡದದಲ್ಲಿ 190ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಟ್ಟುಪಾಡುಗಳಿದ್ದ ಕಾಲದಲ್ಲೇ ಬೋಲ್ಡ್​ ಚಿತ್ರಗಳಲ್ಲಿ ನಟಿಸುವ ಮೂಲಕ ಜಯಂತಿ ಅವರು ಎಲ್ಲರ ಹುಬ್ಬೇರಿಸಿದ್ದರು.

ಕನ್ನಡ ಚಿತ್ರರಂಗದ ಜನಪ್ರಿಯ ಆನ್​ಸ್ಕ್ರೀನ್​ ಜೋಡಿಗಳಲ್ಲಿ ಡಾ. ರಾಜಕುಮಾರ್​ ಮತ್ತು ಜಯಂತಿ ಅವರ ಜೋಡಿ ಸಹ ಒಂದು. ಈ ಜೋಡಿಯು ದಾಖಲೆಯ 39 ಚಿತ್ರಗಳಲ್ಲಿ ಜತೆಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿದೆ. ಡಾ.ರಾಜಕುಮಾರ್ ಮತ್ತು ಜಯಂತಿ ಅವರನ್ನು ಬಿಟ್ಟರೆ, ಬೇರ್ಯಾವ ನಟ-ನಟಿಯು ಜೋಡಿಯಾಗಿ ಇಷ್ಟೊಂದು ಸಂಖ್ಯೆಯಲ್ಲಿ ನಟಿಸಿದ ಉದಾಹರಣೆ ಇಲ್ಲ.

ಇದನ್ನೂ ಓದಿ: ಕಳಚಿತು ಚಿತ್ರರಂಗದ ಮತ್ತೊಂದು ಕೊಂಡಿ.. ಜಯಂತಿ ಜೀವನ ಪಯಣ ಹೇಗಿತ್ತು?

ಡಾ.ರಾಜ್‌ಕುಮಾರ್‌, ಜಯಂತಿ ಕೊನೆ ಚಿತ್ರ

1964ರಲ್ಲಿ ಬಿಡುಗಡೆಯಾದ ಚಂದವಳ್ಳಿಯ ತೋಟ ಚಿತ್ರದಿಂದ ಪ್ರಾರಂಭವಾಗಿ, ನಂತರದ ವರ್ಷಗಳಲ್ಲಿ ಮುರಿಯದ ಮನೆ, ಲಗ್ನಪತ್ರಿಕೆ, ಮಂತ್ರಾಲಯ ಮಹಾತ್ಮೆ, ಜೇಡರ ಬಲೆ, ಶ್ರೀಕೃಷ್ಣದೇವರಾಯ, ಕಸ್ತೂರಿ ನಿವಾಸ, ಚಕ್ರತೀರ್ಥ, ಕುಲಗೌರವ, ವಾತ್ಸಲ್ಯ, ಬೆಟ್ಟದ ಹುಲಿ ಮುಂತಾದ ಚಿತ್ರಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದರು. ಕಡೆಯದಾಗಿ ಇಬ್ಬರೂ ಒಟ್ಟಿಗೆ ನಟಿಸಿದ ಚಿತ್ರ ಬಹದ್ದೂರ್ ಗಂಡು. ಆ ನಂತರ ಡಾ.ರಾಜಕುಮಾರ್ ಅಭಿನಯದ ಚಿತ್ರದಲ್ಲಿ ಜಯಂತಿ ಅವರು ನಟಿಸಲಿಲ್ಲ. ವಿಶೇಷವೆಂದರೆ, ಹಲವು ವರ್ಷಗಳ ನಂತರ ಅವರಿಗೆ ರಾಜ್ಯ ಸರ್ಕಾರವು ಡಾ.ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಮೊದಲ ನಟಿ

ಜಯಂತಿ ಅವರು ತಮ್ಮ ವೃತ್ತಿಜೀವನದಲ್ಲಿ ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಈ ಪೈಕಿ ರಾಜ್ಯ ಸರ್ಕಾರದಿಂದ ಆರು ಬಾರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡದ ನಟಿಯರಲ್ಲೇ ನಟನೆಗಾಗಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಜಯಂತಿ ಅವರು ಕನ್ನಡದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಈ ಪೈಕಿ ನಟನೆಗೆ ರಾಜ್ಯ ಸರ್ಕಾರದಿಂದ ನಾಲ್ಕು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಇನ್ನು ಎರಡು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಯಂತಿ ಅವರಿಗೆ ಸಿಕ್ಕ ಮೊದಲ ಪ್ರಶಸ್ತಿ ಎಂದರೆ ಅದು, ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕೆ. ನಂತರದ ವರ್ಷಗಳಲ್ಲಿ ಅವರಿಗೆ ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತು ಮತ್ತು ಮಸಣದ ಹೂವು ಚಿತ್ರಗಳಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ಪೈಕಿ ಎರಡು ಚಿತ್ರಗಳು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳು ಎಂಬುದು ಗಮನಾರ್ಹ. ಇದಲ್ಲದೆ ಆನಂದ್ ಮತ್ತು ಟುವ್ವಿ ಟುವ್ವಿ ಟುವ್ವಿ ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಎರಡು ಬಾರಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಹ ಅವರಿಗೆ ಸಿಕ್ಕಿತ್ತು. ಇನ್ನು ಚಿತ್ರರಂಗಕ್ಕೆ ಅವರು ನೀಡಿರುವ ಗಮನಾರ್ಹ ಕೊಡುಗೆಯನ್ನು ಗಮನಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ಡಾ.ರಾಜಕುಮಾರ್ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಸಾವಿನ ಸುಳ್ಳು ಸುದ್ದಿಯ ವದಂತಿ

2018ರ ಮಾರ್ಚ್​ 27ರಂದು ನಟಿ ಜಯಂತಿ ಅವರ ಕುಟುಂಬಕ್ಕೆ ಭಾರಿ ಆಘಾತದ ವಿಷಯ ಆಗಿತ್ತು. ಅದೇನೆಂದರೆ, ಜಯಂತಿಯವರು ಮೃತಪಟ್ಟಿರುವುದಾಗಿ ಎಲ್ಲೆಡೆ ಸುದ್ದಿ ವೈರಲ್​ ಆಗಿತ್ತು. ಜಾಲತಾಣಗಳಲ್ಲಿಯೂ ಈ ವಿಷಯ ಸುದ್ದಿಯಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರೆದಾಗಲೇ ಈ ಸುದ್ದಿಯಾಗಿ ಹೋಗಿತ್ತು. ಟ್ವಿಟರ್​ ತುಂಬೆಲ್ಲಾ ಅಭಿಮಾನಿಗಳು ಸಂತಾಪ ಸಲ್ಲಿಸಲು ಶುರು ಮಾಡಿದ್ದರು. ಜಯಂತಿಯವರು ಚೆನ್ನಾಗಿದ್ದಾರೆ. ಅವರ ಪ್ರಾಣಕ್ಕೆ ಏನೂ ಕುತ್ತಾಗಲಿಲ್ಲ ಎಂದು ಅವರ ಕುಟುಂಬಸ್ಥರು ಜನರಿಗೆ ನಂಬಿಸಲು ಅದೆಷ್ಟು ಕಷ್ಟಪಡಬೇಕಾಯಿತು ಎಂದರೆ, ಅವರು ವಿಡಿಯೋ ಮೂಲಕ ನಿಜ ವಿಷಯ ತಿಳಿಸಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಅಭಿಮಾನಿಗಳು ಇರಲಿಲ್ಲ.

ಜಯಂತಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿರುವ ವಿಡಿಯೋಗಳು ನಂತರ ವೈರಲ್​ ಆದ ಬಳಿಕ ಅಭಿಮಾನಿಗಳಿಗೆ ಸಮಾಧಾನವಾಗಿತ್ತು. ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್, ನಮ್ಮ ತಾಯಿ ಅಸ್ತಮಾದಿಂದ ಬಳಲುತ್ತಿದ್ದರು. ಅವರು ಪ್ರತಿದಿನ ಇನ್​ಹೇಲರ್​ ಬಳಸುತ್ತಿದ್ದರು. ಅವರ ಅನಾರೋಗ್ಯಕ್ಕೆ ಎಂದಿಗೂ ಆಸ್ಪತ್ರೆಗೆ ದಾಖಲಾಗಲಿಲ್ಲ. ಆದರೆ ಆರೋಗ್ಯವು ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮುಂದಿನ 24 ಗಂಟೆ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಿ ಎಲ್ಲಾ ಗಾಳಿಸುದ್ದಿಗೆ ತೆರೆ ಎಳೆದಿದ್ದರು.

ಎನ್‌ಟಿಆರ್‌, ಎಎನ್‌ಆರ್‌ ನಟನೆಗೆ ಮನಸೋತಿದ್ದ ಜಯಂತಿ

ದುಂಡಗೆ, ದಪ್ಪಗಿದ್ದ ಬಾಲಕಿಯನ್ನು ಸಹಪಾಠಿಗಳು ಚುಡಾಯಿಸುತ್ತಿದ್ದರು. ಆದರೂ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳದ ಆ ಬಾಲೆ ಶಾಲೆಯಲ್ಲಿ ನೃತ್ಯ ಮಾಡಿ ಸೈ ಎನ್ನಿಸಿಕೊಂಡಿದ್ದಲ್ಲದೆ, ಪ್ರಶಸ್ತಿಯನ್ನೂ ಪಡೆದು ನಗೆ ಬೀರಿದಳು. ನಿರಂತರವಾಗಿ ತೆಲುಗು ಸಿನಿಮಾಗಳನ್ನು ನೋಡುತ್ತಿದ್ದ ಆ ಬಾಲೆಗೆ ಎ.ನಾಗೇಶ್ವರರಾವ್​ ಮತ್ತು ಎನ್​.ಟಿ. ರಾಮರಾವ್​ ಅವರ ಅಭಿನಯ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹತ್ತನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಆಕೆ ತಾನು ಪಂಚಭಾಷಾ ನಟಿ ಆಗುತ್ತೇನೆ, ಅಭಿನಯ ಶಾರದೆ ಎಂಬ ಹೆಸರು ಪಡೆಯುವೆ ಎಂಬ ಒಂದು ಸಣ್ಣ ಸುಳಿವೂ ಇರಲಿಲ್ಲ. ಮುಂದೊಂದು ದಿನ ಇದೆಲ್ಲವೂ ಆಕೆಗೆ ಒಲಿದು ಬಂತು. ಅಂದಹಾಗೆ ಆ ಬಾಲೆಯ ಹೆಸರು ಕಮಲಕುಮಾರಿ!

ಇದನ್ನೂ ಓದಿ: ಅಭಿನಯ ಶಾರದೆ ನಿಧನಕ್ಕೆ ಸಂತಾಪ ಸೂಚಿಸಿದ ಉಪರಾಷ್ಟ್ರಪತಿ

ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೇ ಒಂದು ರೋಚಕ

ಅಂದಿನ ಬಾಲೆ ಕಮಲಕುಮಾರಿಯೇ ಇಂದಿನ ಜಯಂತಿ. ಆಂಧ್ರ ಮೂಲದ ಪ್ರೊ.ಬಾಲಸುಬ್ರಹ್ಮಣ್ಯಂ ಮತ್ತು ಸಂತಾನಲಕ್ಷ್ಮೀ ಅವರ ಹಿರಿಯ ಪುತ್ರಿ ಕಮಲಕುಮಾರಿ. ಬಾಲಸುಬ್ರಹ್ಮಣ್ಯಂ ಅವರು ಬೆಂಗಳೂರಿನ ಸೆಂಟ್​ ಜೋಸೆಫ್​ ಕಾಲೇಜಿನಲ್ಲಿ ಇಂಗ್ಲಿಷ್​ ಪ್ರೊಫೆಸರ್​ ಆಗಿದ್ದರು. ತಾಯಿ ಆಸೆಯಂತೆ ಕಮಲಕುಮರಿ ಮದರಾಸಿನಲ್ಲಿ ವಿದ್ಯಾಭ್ಯಾಸದ ಜತೆಗೆ ನೃತ್ಯ ಕಲಿಯುತ್ತಿದ್ದರು. ಮುಂದೆ ತಮಿಳಿನ ಖ್ಯಾತ ನಟಿ ಮನೋರಮಾ ಜತೆ ಕಮಲಕುಮಾರಿಯೂ ನೃತ್ಯ ಅಭ್ಯಾಸ ಮಾಡಿದರು. ಬಾಲ್ಯದಲ್ಲೇ ತೆಲುಗು ಚಿತ್ರ ರಂಗಕ್ಕೆ ಕಾಲಿಟ್ಟ ಕಮಲಕುಮಾರಿ, ಕೃಷ್ಣಲೀಲಾ, ಚೆಂಚುಲಕ್ಷ್ಮೀ ಮುತ್ತಾದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. ತೆಲುಗಿನ ಮಾಂಗಲ್ಯಂ ಚಿತ್ರದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ಅಭಿನಯಿಸಿದ್ದರು. 1963ರಲ್ಲಿ ಜೇನುಗೂಡು ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾಗೆ ಎಂಟ್ರಿಕೊಟ್ಟರು. ಆ ವೇಳೆಗೆ ಕಮಲಕುಮಾರಿ ಅವರು ಜಯಂತಿಯಾಗಿ ತೆಲುಗು, ತಮಿಳು ಚಿತ್ರಗಳಲ್ಲಿ ಹೆಸರು ಗಳಿಸಿದ್ದರು.

ಡಾ.ರಾಜ್​ಕುಮಾರ್​ ಅವರ 50ನೇ ಸಿನಿಮಾ 'ಚಂದವಳ್ಳಿಯ ತೋಟ'ದಲ್ಲೂ ಜಯಂತಿ ಅಭಿನಯಿಸಿದ್ದರು. ಇದು ಡಾ.ರಾಜ್​ ಅವರ ಜತೆ ಜಯಂತಿ ಅಭಿನಯಿಸಿದ ಮೊದಲ ಚಿತ್ರ. ಸಾಹಸಸಿಂಹ ವಿಷ್ಣುವರ್ಧನ್​ ಜತೆ ನಾಗರಹಾವು, ದೇವರುಕೊಟ್ಟ ವರ, ಚಿನ್ನಾ ನಿನ್ನಾ ಮುದ್ದಾಡುವೆ, ಶ್ರೀಮಂತನ ಮಗಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಓಬವ್ವನ ಪಾತ್ರದಲ್ಲಿ ತೋರಿದ ಕೆಚ್ಚೆದೆಯ ಅಭಿನಯ ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ನಿಂತಿದೆ.

For All Latest Updates

TAGGED:

jayanti news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.