ETV Bharat / sitara

ಮೂರು ದಶಕ ಕಳೆದರೂ ನನ್ನ ಸಂಭಾವನೆ ಸಾವಿರ ಲೆಕ್ಕದಲ್ಲಿದೆ: ರಮೇಶ್ ಪಂಡಿತ್​​​ - ನಿಗೂಢ ರಹಸ್ಯ

ಹಿರಿಯ ನಟ ರಮೇಶ್ ಪಂಡಿತ್ ಸುಮಾರು ಮೂವತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ನಾನು ಹೆಚ್ಚು ಹಣ ಸಂಪಾದಿಸಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ಅವಕಾಶಗಳು ಕಡಿಮೆಯಾಗುತ್ತಿದ್ದು, ಇದುವರೆಗೂ ಒಂದು ಬಾರಿ ಕೂಡಾ ಲಕ್ಷ ಲೆಕ್ಕದಲ್ಲಿ ಸಂಭಾವನೆ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.

ರಮೇಶ್ ಪಂಡಿತ್​​​
author img

By

Published : Sep 10, 2019, 12:24 PM IST

ಸಿನಿಮಾ ನಟರು ಎಂದರೆ ಸಾಕು ಅವರು ಸಿರಿವಂತರು ಎಂಬ ತಪ್ಪು ಕಲ್ಪನೆ ಇದೆ. ಆದರೆ, ಬಹುತೇಕ ಕಲಾವಿದರು ಹಲವು ವರ್ಷಗಳಿಂದ ಸಿನಿಮಾ, ಕಿರುತೆರೆಗಳಲ್ಲಿ ನಟಿಸಿದರೂ ಅವರಿಗೆ ಹೇಳಿಕೊಳ್ಳುವಂತ ಸಂಪಾದನೆ ಇರುವುದಿಲ್ಲ. ನಾನೂ ಕೂಡಾ ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳಿಂದ ಕೆಲಸ ಮಾಡಿದರೂ ಸಿರಿವಂತನಲ್ಲ ಎಂದು ನಟ ರಮೇಶ್ ಪಂಡಿತ್ ಹೇಳಿದ್ದಾರೆ.

Ramesh pandit
'ನಾನಿ' ಚಿತ್ರದಲ್ಲಿ ರಮೇಶ್ ಪಂಡಿತ್

ಕನ್ನಡ ಚಿತ್ರರಂಗ, ರಂಗಭೂಮಿ, ಕಿರುತೆರೆಯಲ್ಲಿ ಜನಪ್ರಿಯ ಆಗಿರುವ ಹಿರಿಯ ನಟ ರಮೇಶ್ ಪಂಡಿತ್ ಸುಮಾರು ಮೂರು ದಶಗಳಿಂದಲೂ ಕಲಾಸೇವೆ ಮಾಡಿಕೊಂಡು ಬಂದಿದ್ದಾರೆ. ಮೂರು ದಶಕ ಕಳೆದರೂ ನನ್ನ ಜೀವನ ‘ಹ್ಯಾಂಡ್ ಟು ಮೌತ್’ ಗಳಿಕೆ ಅಷ್ಟೇ. ನಾನೇನು ಸಿರಿವಂತನಲ್ಲ. ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಬಹುತೇಕ ಸಿನಿಮಾಗಳಿಗೆ ಮಾತನಾಡಿದಷ್ಟು ಸಂಭಾವನೆ ಸಿಕ್ಕಿಲ್ಲ. ಸ್ವಲ್ಪ ಕೊಟ್ಟು ಸ್ವಲ್ಪ ಉಳಿಸಿಕೊಳ್ಳುವವರೇ ಹೆಚ್ಚು. ಇಷ್ಟು ವರ್ಷಗಳಾದರೂ ಲಕ್ಷ ಹೆಸರಿನಲ್ಲಿ ಎಂದಿಗೂ ಸಂಭಾವನೆ ಪಡೆದಿಲ್ಲ. ನನ್ನದೇನಿದ್ದರೂ ಸಾವಿರ ಲೆಕ್ಕದಲ್ಲಿ ಸಂಭಾವನೆ ಅಷ್ಟೇ. ನನ್ನ ಪತ್ನಿ ಸುನೇತ್ರಾ ಪಂಡಿತ್ ಕೂಡಾ ನಟಿಯೇ. ನನ್ನ ಮಗಳಿಗೆ ನಟನೆ ಇಷ್ಟ ಇಲ್ಲ. ರಂಗಭೂಮಿಯ ತೆರೆ ಹಿಂದಿನ ಕೆಲಸಗಳನ್ನು ಇಷ್ಟ ಪಡುತ್ತಾಳೆ. ಕಂಪನಿಯೊಂದರಲ್ಲಿ ಕೂಡಾ ದುಡಿಯುತ್ತಿದ್ದಾಳೆ ಎನ್ನುತ್ತಾರೆ ರಮೇಶ್ ಪಂಡಿತ್​​​.

Ramesh pandit
'ನಾನಿ' ಚಿತ್ರದ ದೃಶ್ಯ

ರಮೇಶ್ ಪಂಡಿತ್ ಹೇಳುವ ಪ್ರಕಾರ ಅವರಿಗೆ ಈಗ ಅವಕಾಶಗಳು ಕಡಿಮೆ ಆಗುತ್ತಿದೆಯಂತೆ. ಹಳಬರನ್ನು ಬಳಸಿಕೊಳ್ಳಲು ಯಾರೂ ಹೆಚ್ಚಿಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ನಾನು ಈಗಲೂ ರಂಗಭೂಮಿಯನ್ನು ಬಿಟ್ಟಿಲ್ಲ. ಬಿ. ಜಯಶ್ರೀ ಅವರ ತಂಡದಲ್ಲಿ ಇದ್ದೇನೆ. ಸಿನಿಮಾ ಮಂದಿಗೆ ನಮ್ಮಂಥವರು ನೆನಪಿಗೆ ಬರುವುದು ಅಪರೂಪ ಎಂದು ಹೇಳುವ ರಮೇಶ್ 1990 ರಲ್ಲಿ ಬಿಡುಗಡೆಯಾದ ‘ನಿಗೂಢ ರಹಸ್ಯ’ ಚಿತ್ರದಿಂದ ನಟನೆಗೆ ಕಾಲಿಟ್ಟರು. ನಂತರ ಉಲ್ಟಾಪಲ್ಟಾ, ಅಂಡಮಾನ್, ಮೆಜೆಸ್ಟಿಕ್​, ಧರ್ಮ, ಸುಂಟರಗಾಳಿ, ಎನ್​​​​ಕೌಂಟರ್ ದಯಾನಾಯಕ್, ನಾನಿ, ಕಿಲ್ಲಿಂಗ್ ವೀರಪ್ಪನ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯ ನಂದಿನಿ, ಮೇಘಮಯೂರಿ, ಮಹಾಭಾರತ ಸೇರಿ ಬಹಳಷ್ಟು ಧಾರಾವಾಹಿಗಳಲ್ಲಿ ಕೂಡಾ ರಮೇಶ್ ಪಂಡಿತ್ ನಟಿಸಿದ್ದಾರೆ.

30 ವರ್ಷ ಕಳೆದರು ನಾನು ಸಿರಿವಂತನಲ್ಲ = ರಮೇಶ್ ಪಂಡಿತ್

ಕನ್ನಡ ಚಿತ್ರ ರಂಗದಲ್ಲಿ, ರಂಗಭೂಮಿಯಲ್ಲಿ, ಕಿರು ತೆರೆಯಲ್ಲಿ ಜನಪ್ರಿಯ ಆಗಿರುವ ವ್ಯಕ್ತಿ ರಮೇಶ್ ಪಂಡಿತ್ ಮೂರು ದಶಕ ಕಳೆದರೂ ನನ್ನ ಜೀವನ ಹ್ಯಾಂಡ್ ಟು ಮೌತ್ ಗಳಿಕೆ ಅಷ್ಟೇ. ನಾನೇನು ಸಿರಿವಂತನಲ್ಲ. 200 ಸಿನಿಮಾ ಮಾಡಿದ್ದೇನೆ ಅದರಲ್ಲಿ ಅರ್ಧದಷ್ಟು ಹಣ ಕೊಡದೆ ಇರುವವರು. ನಾನು ಇಷ್ಟು ವರ್ಷ ಆದರೂ ಲಕ್ಷಾಂತರ ಸಂಭಾವನೆ ಪಡೆದಿಲ್ಲ. ನನ್ನದೇನಿದ್ದರೂ ಸಾವಿರಗಳಿಗೆ ಬಂದು ತಲುಪಿದೆ. ಹೆಚ್ಚು ವರ್ಷಗಳು ಕೇವಲ ದಿವಸಕ್ಕೆ ಸಾವಿರದ ಒಳಗೆ ದುಡಿದ್ದಿದ್ದೇ ಹೆಚ್ಚು. ನನ್ನ ಮಡದಿ ಸುನೇತ್ರಾ ಪಂಡಿತ್ ಸಹ ನಟಿ. ನನ್ನ ಮಗಳು ರಂಗಭೂಮಿಯ ಬ್ಯಾಕ್ ಸ್ಟೇಜ್ ಕೆಲಸಗಳನ್ನು ಇಷ್ಟ ಪಡುತ್ತಾಳೆ. ನಟನೆ ಅವಳಿಗೆ ಇಷ್ಟ ಇಲ್ಲ. ಸಧ್ಯಕ್ಕೆ ಅಮೆಜಾನ್ ಕಂಪನಿಯಲ್ಲಿ ದುಡಿಯುತ್ತಿದ್ದಾಳೆ ಸಹ.

ಹೀಗೆಲ್ಲಾ ವಿವರ ಬಿಚ್ಚಿಡುವ ನಟ ರಮೇಶ್ ಪಂಡಿತ್ ಅವಕಾಶಗಳು ಕಡಿಮೆ ಆಗುತ್ತಿದೆ. ಹಳಬರು ಬೇಕಿಲ್ಲ. ಹೊಸಬರಿಗೆ ಒಂದು ಉಮೇದು ಇದೆ. ಅವರಲ್ಲಿ ಇನ್ನ ಸಾಕಷ್ಟು ಪರಿಶ್ರಮದ ಕೊರತೆ ಇದೆ ಎನ್ನುತ್ತಾರೆ. ನಮಗಂತೂ ಅದದೇ ಪಾತ್ರಗಳು ಹೆಚ್ಚು. ನಮ್ಮ ಪ್ರಯೋಗಗಳಿಗೆ ರಂಗಭೂಮಿಯೇ ಹೆಚ್ಚು ಸೂಕ್ತ. ಆಗಿನ ಕಾಲದಲ್ಲಿ ರಂಗಭೂಮಿ ಅನೇಕ ಪ್ರಯೋಗಗಳನ್ನು ಮಾಡಿದೆ. ಈಗಲೂ ನಾನು ಪದ್ಮಶ್ರೀ ಬಿ ಜಯಶ್ರೀ ತಂಡದಲ್ಲಿ ಇದ್ದೇನೆ. ಸಿನಿಮಾ ಮಂದಿಗೆ ನಮ್ಮಂತವರು ಯಾವಾಗಲೋ ಜ್ಞಾಪಕ ಬರುತ್ತಾರೆ.

ಕನ್ನಡ ಚಿತ್ರ ರಂಗಕ್ಕೆ ರಮೇಶ್ ಪಂಡಿತ್ ನಿಗೂಡ ರಹಸ್ಯ ಇಂದ 1990 ರಲ್ಲಿ ಅಭಿನಯಕ್ಕೆ ಕಾಲಿಟ್ಟರು. ಸ್ಟಂಟ್ ಮಾಸ್ಟೆರ್, ಉಲ್ಟಾ ಪಲ್ಟ, ಚೂ ಭಾಣ, ಅಂಡಮಾನ್, ಮಜೆಸ್ಟಿಕ್, ಧರ್ಮ, ಸುಂಟರಗಾಳಿ, ಗಿರಿ, ರಕ್ಷಾಸ, ಎನ್ಕೌಂಟರ್ ದಯಾನಾಯಕ್, ಅಯ್ಯ, ಸ್ಟೂಡೆಂಟ್, ತಿರುಪತಿ, ಲವ ಕುಶ, ಗಣೇಶ, ಮಾದೇಶ, ನನ್ ಮಾಡಿಡ್ ತಪ್ಪಾ, ರಾಮ್ ಸೇತು, ದೇವರು ಕೊಟ್ಟ ತಂಗಿ, ಉಯ್ಯಾಲೆ, ಶ್ರೀ, ಮಾಗಡಿ, ಕಿಲಾಡಿ ಕಿಟ್ಟಿ, ಜುಗಾರಿ, ಬಾನಾಡಿ, ಸ್ನೇಹಿತರು, ಡಾರ್ಲಿಂಗ್, ಬದ್ಮಾಶ್, ಅವ್ವ, ಮೊಹಿನಿ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ಇದೊಳ್ಳೆ ರಾಮಾಯಣ, ನಾಣಿ, ಜಿಗರ್ ತಂಡ, ಕಿಲ್ಲಿಂಗ್ ವೀರಪ್ಪನ್, ಗಜಕೇಸರಿ.....ಹೀಗೆ ಬೆಳೆಯುತ್ತಾ ಹೋಗುತ್ತದೆ ಇವರ ಚಿತ್ರಗಳ ಪಟ್ಟಿ. ಕಿರು ತೆರೆಯಲ್ಲಿ ನಂದಿನಿ ಧಾರಾವಾಹಿ, ಮಹಾಭಾರತದಲ್ಲಿ ಶಕುನಿ ಪಾತ್ರ,ಮೇಘ ಮಯೂರಿ, ಮಂಥನ....ಇನ್ನೂ ಬಹಳಷ್ಟು ಇವರು ಮೆಗಾ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.