ETV Bharat / sitara

ಅಪ್ಪುಗೆ ನಾಳೆ ಹಾಲು ತುಪ್ಪ ವಿಧಿವಿಧಾನ ಕಾರ್ಯ: ಪುನೀತ್ ಸಮಾಧಿ ಬಳಿ ಸಕಲ ಸಿದ್ಧತೆ - Bangalore

ರಾಜ್​ಕುಮಾರ್​​ ಕುಟುಂಬದಿಂದ ನಾಳೆ ಪುನೀತ್​​ ರಾಜ್​​ಕುಮಾರ್​​ ಅವರಿಗೆ ಹಾಲು ತುಪ್ಪ ವಿಧಿವಿಧಾನ ಕಾರ್ಯ ಇದ್ದು, ಪುನೀತ್ ಸಮಾಧಿ ಬಳಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Bangalore
ಪುನೀತ್ ಸಮಾಧಿಯ ಬಳಿ ಹಾಲು ತುಪ್ಪ ಕಾರ್ಯಕ್ಕೆ ಸಿದ್ಧತೆ
author img

By

Published : Nov 1, 2021, 2:17 PM IST

ಕನ್ನಡ ಚಿತ್ರರಂಗದ ದೊಡ್ಮನೆ ಮಗನಾಗಿ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೇವನಾಗಿ ಮೆರೆದರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ರಾಜ್ ಕುಟುಂಬದಿಂದ ನಾಳೆ ಅಪ್ಪುಗೆ ಹಾಲು ತುಪ್ಪ ವಿಧಿ ವಿಧಾನ ಕಾರ್ಯ ನಡೆಯಲಿದೆ. ಹೀಗಾಗಿ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿ ಬಳಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪುನೀತ್ ಸಮಾಧಿಯ ಬಳಿ ಹಾಲು ತುಪ್ಪ ಕಾರ್ಯಕ್ಕೆ ಸಿದ್ಧತೆ ..

ಮತ್ತೊಂದೆಡೆ ಅಭಿಮಾನಿಗಳು ನೆಚ್ಚಿನ ನಟನ ಸಮಾಧಿಗೆ ನಮಿಸಲು ತುದಿಗಾಲಲ್ಲಿ ನಿಂತಿದ್ದಾರೆ‌. ಬೆಂಗಳೂರಿನ ನಗರ ಜಿಲ್ಲಾಧಿಕಾರಿ ಮಂಜುನಾಥ್ ನಾಳೆ ಹಾಲು ತುಪ್ಪ ಕಾರ್ಯಕ್ರಮ ಮುಗಿಯವರೆಗೂ ಅಭಿಮಾನಿಗಳಿಗೆ, ಇನ್ನೂ ಎರಡು ದಿನ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ. ಆದರೂ ರಾಜ್​​ಕುಮಾರ್ ಸಮಾಧಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಹಾಗಾಗಿ ರಾಜ್​​ಕುಮಾರ್ ಸಮಾಧಿ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ‌.

ಮಂಗಳವಾರ ಹಾಲು ತುಪ್ಪ ಕಾರ್ಯ ಹಿನ್ನೆಲೆ, ಪುನೀತ್ ರಾಜ್‍ಕುಮಾರ್ ಸಮಾಧಿಗೆ, ಕೊಯಮತ್ತೂರನಿಂದ ತರಿಸಲಾದ ಹಲವಾರು ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗುತ್ತಿದೆ ಎಂದು ಡೆಕೋರೇಟರ್ ದರ್ಶನ್ ಹೇಳಿದರು.

ನಾಳೆ ಬೆಳಗ್ಗೆ 9 ಗಂಟೆಗೆ ಹಾಲು ತುಪ್ಪ ಕಾರ್ಯ ಜರುಗಲಿದೆ. ಈ ಕಾರ್ಯಕ್ಕೆ ರಾಜ್‌ ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಸ್ನೇಹಿತರು ಭಾಗಿಯಾಗಲಿದ್ದಾರೆ‌. ಸದ್ಯಕ್ಕೆ ಅಭಿಮಾನಿಗಳಿಗೆ ಪ್ರವೇಶಕ್ಕೆ ಅನುಮತಿಯಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಂಗಳವಾರ ಪುನೀತ್ ರಾಜ್‌ಕುಮಾರ್‌ ಸಮಾಧಿಗೆ ಕುಟುಂಬಸ್ಥರಿಂದ ಹಾಲು, ತುಪ್ಪ ಕಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.