ETV Bharat / sitara

ಅ ಸಮಸ್ಯೆಯಿಂದ ಮಗುವಿನೊಂದಿಗೆ ಕಾಲ ಕಳೆಯಲು ಆಗುತ್ತಿಲ್ಲ...ಟಾಮ್ ಪಾರ್ಕರ್​​

author img

By

Published : Nov 10, 2020, 10:30 AM IST

ವಾಂಟೆಡ್ ಗಾಯಕ ಟಾಮ್ ಪಾರ್ಕರ್ ಕಳೆದ ಕೆಲವು ದಿನಗಳಿಂದ ಬ್ರೈನ್​ ಟ್ಯೂಮರ್​​ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದ ಮಗುವಿನೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Tom parker Suffering from Brain Tumor
ಟಾಮ್ ಪಾರ್ಕರ್​​

ಖ್ಯಾತ ಹಾಲಿವುಡ್​ ಗಾಯಕ ಟಾಮ್ ಪಾರ್ಕರ್ ಬ್ರೈನ್ ಟ್ಯೂಮರ್​​ನಿಂದ ಬಳಲುತ್ತಿದ್ದಾರೆ. "ನಾನು ಟ್ಯೂಮರ್ ಚಿಕಿತ್ಸೆಯತ್ತ ಹೆಚ್ಚು ಗಮನ ನೀಡುತ್ತಿರುವುದರಿಂದ ನನ್ನ ಮಗುವಿನೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಟಾಮ್ ಪಾರ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳಷ್ಟೇ ಟಾಮ್ ಪಾರ್ಕರ್ ಹಾಗೂ ಪತ್ನಿ ಕೆಲ್ಸಿ ಹಾರ್ಡ್ವಿಕ್​​ ಗಂಡುಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಬೋಧಿ ಥಾಮಸ್ ಪ್ಯಾರಿಸ್ ಪಾರ್ಕರ್​ ಎಂದು ಹೆಸರಿಟ್ಟಿದ್ದಾರೆ. ಮಗು ಜನಿಸಿದಾಗಿನಿಂದ ಅವನ ಕಡೆ ಗಮನ ನೀಡಲು ಸಾಧ್ಯವಾಗದಿರುವುದು ನನಗೆ ಬಹಳ ಬೇಸರ ಉಂಟುಮಾಡಿದೆ. ಆದರೆ ಇದು ಕೆಲವೇ ದಿನಗಳು ಮಾತ್ರ. ಚಿಕಿತ್ಸೆ ಮುಗಿದ ನಂತರ ನಾನು ಅವನೊಂದಿಗೆ ಸಮಯ ಕಳೆಯಬಹುದು. ಆ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಟಾಮ್ ಪಾರ್ಕರ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಮ್ ಪತ್ನಿ ಕೆಲ್ಸಿ, ಟಾಮ್ ಮನೆಯಲ್ಲೇ ಇರುತ್ತಾರೆ. ಆದರೆ ಮಗುವಿಗಿಂತ ಹೆಚ್ಚಾಗಿ ಈಗ ಅವರು ಟ್ಯೂಮರ್ ಚಿಕಿತ್ಸೆಗೆ ಹೆಚ್ಚು ಗಮನ ನೀಡಬೇಕಾಗಿದೆ ಎಂದು ಹೇಳಿದ್ದಾರೆ.

ಈ ದಂಪತಿಗೆ 1 ವರ್ಷದ ಮಗಳು ಕೂಡಾ ಇದ್ಧಾಳೆ. ಪಾರ್ಕರ್ ಗ್ಲಿಯೊಬ್ಲಾಸ್ಟೋಮಾ ಎಂಬ ಟ್ಯೂಮರ್​​ನಿಂದ ಬಳಲುತ್ತಾರೆ. ಇದು ಬಹಳ ಅಪಾಯಕಾರಿಯಾಗಿದ್ದು ಈ ಸಮಸ್ಯೆಗೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.