ಟಾಲಿವುಡ್ ಫೇಮಸ್ ನಟ ಜಗಪತಿ ಬಾಬು ದಿವಂಗತ ನಟ ಡಾ. ರಾಜಕುಮಾರ್ ಹಾಗೂ ಅಂಬರೀಶ್ ಸಮಾಧಿಗೆ ಭೇಟಿ ನೀಡಿದ್ದಾರೆ. ರಾಬರ್ಟ್ ಶೂಟಿಂಗ್ ನಿಮಿತ್ತ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದ ಅವರು ಅಲ್ಲೇ ಇರುವ ಅಂಬಿ-ರಾಜ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
![tollywood actor jagapathi babu](https://etvbharatimages.akamaized.net/etvbharat/prod-images/kn-bng-01-tollywoodactorjagapathibabuvisitrajusamdhi-photo_02082019113121_0208f_1564725681_1029.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಚಿತ್ರದ ಶೂಟಿಂಗ್ ಪಾಂಡಿಚೇರಿ ಹಾಗೂ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಇದೀಗ 'ರಾಬರ್ಟ್' ಅಡ್ಡಕ್ಕೆ ಜಗಪತಿ ಎಂಟ್ರಿ ಆಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರಾಬರ್ಟ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಇಲ್ಲಿರುವ ವರನಟ ಡಾ. ರಾಜ್ ಕುಮಾರ್, ಅಂಬರೀಶ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ತೆರೆಳಿ ನಮನ ಸಲ್ಲಿಸಿದ್ದಾರೆ. ಈ ವೇಳೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಸೇರಿದಂತೆ ಚಿತ್ರತಂಡ ಹಾಜರಿತ್ತು.
![tollywood actor jagapathi babu](https://etvbharatimages.akamaized.net/etvbharat/prod-images/kn-bng-01-tollywoodactorjagapathibabuvisitrajusamdhi-photo_02082019113121_0208f_1564725681_258.jpg)
ಇನ್ನು ಈಗಾಗಲೇ ಡಿಬಾಸ್ ದರ್ಶನ್ ಮತ್ತು ಜಗಪತಿ ಬಾಬು ನಡುವಿನ ದೃಶ್ಯಗಳನ್ನ ನಿರ್ದೇಶಕ ತರುಣ್ ಸುಧೀರ್ ಚಿತ್ರೀಕರಿಸಿಕೊಂಡಿದ್ದಾರಂತೆ. ಆದರೆ, ಈ ಸಿನಿಮಾದಲ್ಲಿ ಜಗಪತಿ ಅವರದ್ದು ವಿಲನ್ ಪಾತ್ರವಾ ಅಥವಾ ಪೋಷಕ ನಟನಾಗಿ ಅಭಿನಯಿಸಿದ್ದಾರಾ ಎನ್ನುವ ಗುಟ್ಟು ಇನ್ನೂ ರಟ್ಟಾಗಿಲ್ಲ.