ಹೈದರಾಬಾದ್: 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರಿಗೆ 'ಭೀಮ್ಲಾ ನಾಯಕ್' ಚಿತ್ರ ತಂಡವು ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿ ವಿಶೇಷ ಉಡುಗೊರೆ ನೀಡಿದೆ.

ಈ ಹಾಡಿನಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿ ವೇಷದಲ್ಲಿ ಕಾಣಿಸಿಕೊಂಡಿದ್ದು, ಜಾನಪದ ಗಾಯಕರೊಬ್ಬರು ಪವನ್ ಕಲ್ಯಾಣ್ ಅವರ ಪಾತ್ರ ಹಾಗೂ ಅವರ ಕುಟುಂಬದ ಇತಿಹಾಸವನ್ನು ಪರಿಚಯ ಮಾಡಿಕೊಡುತ್ತಾರೆ. ಅಷ್ಟೇ ಅಲ್ಲ, ಸಂಗೀತ ಸಂಯೋಜಕ ಎಸ್.ತಮನ್ ಹಾಗೂ ಅವರ ತಂಡವು ದಟ್ಟ ಅರಣ್ಯದೊಳಗೆ ಕುಳಿತು ಹಾಡುತ್ತಿರುವುದನ್ನೂ ಈ ಸಾಂಗ್ನಲ್ಲಿ ನೋಡಬಹುದಾಗಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್
ಸಾಗರ್ ಕೆ. ಚಂದ್ರ ನಿರ್ದೇಶನದ 'ಭೀಮ್ಲಾ ನಾಯಕ್' ಸಿನಿಮಾಗೆ ಎಸ್.ತಮನ್ ಸಂಗೀತ ಸಂಯೋಜನೆ ಮಾಡಿದ್ದು, 2022ರ ಜನವರಿ 12 ರಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಚಿತ್ರದಲ್ಲಿ ನಟ ರಾಣಾ ದಗ್ಗುಬಾಟಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.