ಚಿತ್ರತಂಡ ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ಕುರುಕ್ಷೇತ್ರ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದ್ರೆ ಕುರುಕ್ಷೇತ್ರ ಕನ್ನಡ, ತೆಲುಗು, ತಮಿಳಿನಲ್ಲಿ ಏಕಾಕಲಕ್ಕೆ ಬಿಡುಗಡೆಯಾಗಿತ್ತು. ಬಳಿಕ ಕುರುಕ್ಷೇತ್ರ ಚಿತ್ರ ಬಿಡುಗಡೆಯಾದ ಒಂದು ವಾರದ ನಂತ್ರ ಹಿಂದಿಯಲ್ಲೂ ರಿಲೀಸ್ ಆಗಿತ್ತು. ಅಲ್ಲದೆ ಕುರುಕ್ಷೇತ್ರ ಚಿತ್ರ 100 ಕೋಟಿ ಕ್ಲಬ್ ಸೇರಿತ್ತು.
ಅದರೆ ಕೆಲವು ತಾಂತ್ರಿಕ ಕಾರಣಗಳಿಂದ ಕುರುಕ್ಷೇತ್ರ ಮಲಯಾಳಂನಲ್ಲಿ ರಿಲೀಸ್ ಆಗಿರಲಿಲ್ಲ. ಈಗ ಮಲೆಯಾಳಂನಲ್ಲೂ ಅ. 18ರಂದು ಕುರುಕ್ಷೇತ್ರ ರಿಲೀಸ್ ಆಗ್ತಿದೆ. ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ಚಿತ್ರವನ್ನು ಮುನಿರತ್ನ ನಿರ್ದೇಶನ ಮಾಡಿದ್ದು, ದರ್ಶನ್, ಅಂಬರೀಶ್, ಅರ್ಜುನ್ ಸರ್ಜಾ, ಹರಿಪ್ರಿಯಾ, ಮೇಘನಾ ರಾಜ್ ಸೇರಿದಂತೆ ದಕ್ಷಿಣ ಭಾರತದ ಸ್ಟಾರ್ ನಟರು ನಟಿಸಿದ್ದಾರೆ.